ENG vs SA: 6 ವರ್ಷಗಳ ಬಳಿಕ ತಂಡಕ್ಕೆ ಮರಳಿದ ಆಫ್ರಿಕನ್ ಬ್ಯಾಟರ್ ಅಬ್ಬರಕ್ಕೆ ತಲೆಬಾಗಿದ ಆಂಗ್ಲರು..!

| Updated By: ಪೃಥ್ವಿಶಂಕರ

Updated on: Jul 29, 2022 | 3:26 PM

ENG vs SA: . ರಿಲೇ ಕೊನೆಯವರೆಗೂ ಇದ್ದು, 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 96 ರನ್ ಗಳಿಸಿದರು.

ENG vs SA: 6 ವರ್ಷಗಳ ಬಳಿಕ ತಂಡಕ್ಕೆ ಮರಳಿದ ಆಫ್ರಿಕನ್ ಬ್ಯಾಟರ್ ಅಬ್ಬರಕ್ಕೆ ತಲೆಬಾಗಿದ ಆಂಗ್ಲರು..!
Riley Rousseau
Follow us on

ಕಾರ್ಡಿಫ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 58 ರನ್‌ಗಳಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು. ಆರು ವರ್ಷಗಳ ನಂತರ ಈ ಸರಣಿಯೊಂದಿಗೆ ತಂಡಕ್ಕೆ ಮರಳಿದ ರಿಲೆ ರೂಸೋ (Riley Rousseau) ದಕ್ಷಿಣ ಆಫ್ರಿಕಾವನ್ನು ಈ ಬೃಹತ್ ಸ್ಕೋರ್‌ಗೆ ಕರೆದೊಯ್ದರು.

ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ರಿಲೆ ಉತ್ತಮ ಇನ್ನಿಂಗ್ಸ್ ಆಡಿದರು ಆದರೆ ಅವರು ತಮ್ಮ ಚೊಚ್ಚಲ T20 ಶತಕವನ್ನು ಬಾರಿಸುವ ಅವಕಾಶ ಕಳೆದುಕೊಂಡರು. 25 ಮಾರ್ಚ್ 2016 ರಂದು ಈ ಸರಣಿಯ ಮೊದಲು ರೂಸೋ ತನ್ನ ದೇಶಕ್ಕಾಗಿ ಕೊನೆಯ T20 ಪಂದ್ಯವನ್ನು ಆಡಿದರು. ಈ ಪಂದ್ಯವು ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಾಗ್ಪುರದಲ್ಲಿ ನಡೆದ T20 ವಿಶ್ವಕಪ್ ಪಂದ್ಯವಾಗಿತ್ತು.

ತಂಡವನ್ನು 200ರ ಗಡಿ ದಾಟಿಸಿದರು

ಇದನ್ನೂ ಓದಿ
17 ಸಿಕ್ಸರ್‌, 10 ಬೌಂಡರಿ.. 210 ರನ್! T20 ಕ್ರಿಕೆಟ್‌ಗೆ ಯಂಗ್ ಟೈಗರ್ ಎಂಟ್ರಿ; ವಿಡಿಯೋ ನೋಡಿ
IND vs AUS, CWG 2022, LIVE Streaming: ಭಾರತಕ್ಕೆ ಬಲಿಷ್ಟ ಆಸ್ಟ್ರೇಲಿಯಾ ಎದುರಾಳಿ; ಪಂದ್ಯ ಆರಂಭ ಎಷ್ಟು ಗಂಟೆಗೆ?

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊಯಿನ್ ಅಲಿ ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡುವ ಮೂಲಕ ಆತಿಥೇಯರಿಗೆ ದೊಡ್ಡ ಯಶಸ್ಸನ್ನು ನೀಡಿದರು. ಆದರೆ ನಂತರ ಇಂಗ್ಲೆಂಡ್‌ಗೆ ಸಂಕಷ್ಟ ಶುರುವಾಯಿತು. ಡಿ ಕಾಕ್‌ ನಿರ್ಗಮನದ ನಂತರ, ರಿಲೆ ಮೈದಾನಕ್ಕೆ ಕಾಲಿಟ್ಟು ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಜೊತೆಗೆ ಇಂಗ್ಲಿಷ್ ಬೌಲರ್‌ಗಳನ್ನು ಬೆಂಡೆತ್ತಲು ಪ್ರಾರಂಭಿಸಿದರು. ಇವರಿಬ್ಬರೂ ತಂಡವನ್ನು 100ರ ಗಡಿ ದಾಟಿಸಿದರು. ಹೆಂಡ್ರಿಕ್ಸ್, ತಂಡದ ಮೊತ್ತ ಒಟ್ಟು 112 ರನ್ ಗಳಿದಾಗ ಔಟಾದರು ಆದರೆ ಅವರು ಅರ್ಧಶತಕ ಪೂರೈಸುವಲ್ಲಿ ಯಶಸ್ವಿಯಾದರು. ಅವರು 32 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 53 ರನ್ ಗಳಿಸಿದರು.

ರಿಲೇ ಅಬ್ಬರ

ತನ್ನ ಪಾಟ್ನರ್ ಹೋದ ನಂತರವೂ, ರಿಲೆ ನಿಲ್ಲಲಿಲ್ಲ. ಅವರು ತನ್ನ ನೈಜ ಆಟವನ್ನು ಮುಂದುವರೆಸಿದರು. 15ನೇ ಓವರ್​ನ ಮೊದಲ ಎಸೆತದಲ್ಲಿ ಹೆಂಡ್ರಿಕ್ಸ್ ವಿಕೆಟ್ ಪತನವಾಯಿತು. ಅವರ ನಂತರ ಬಂದ ಹೆನ್ರಿಚ್ ಕ್ಲಾಸೆನ್ ಅವರು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ತ್ವರಿತ ರನ್‌ಗಳಿಸುವ ಯತ್ನದಲ್ಲಿ ಔಟಾದರು. 10 ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 19 ರನ್ ಗಳಿಸಿದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ. ರಿಲೇ ಕೊನೆಯವರೆಗೂ ಇದ್ದರು. ಅವರು 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 96 ರನ್ ಗಳಿಸಿದರು. ಟ್ರಿಸ್ಟಾನ್ ಸ್ಟಬ್ಸ್ ಅವರೊಂದಿಗೆ 15 ರನ್ ಗಳಿಸಿ ಅಜೇಯರಾಗಿ ಮರಳಿದರು. ಇಂಗ್ಲೆಂಡ್ ಪರ ಅಲಿ, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡಾನ್ ತಲಾ ಒಂದು ವಿಕೆಟ್ ಪಡೆದರು.

ಇಂಗ್ಲೆಂಡಿನ ಇನ್ನಿಂಗ್ಸ್ ಹೀಗಿತ್ತು

ಇಂಗ್ಲೆಂಡ್ ಗೆಲುವಿಗೆ 208 ರನ್​ಗಳ ಅಗತ್ಯವಿತ್ತು. ಇಂಗ್ಲೆಂಡಿನ ಬಲಿಷ್ಠ ಬ್ಯಾಟಿಂಗ್ ಲೈನ್-ಅಪ್ ಅನ್ನು ಗಮನಿಸಿದರೆ ಇದು ಕೂಡ ಸಾಧ್ಯ ಎನಿಸಿತು. ಆದರೆ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಎಲ್ಲಾ ಕೆಲಸ ಮಾಡಿದರು. ಇಂಗ್ಲೆಂಡಿನ ಯಾವೊಬ್ಬ ಬ್ಯಾಟ್ಸ್‌ಮನ್ ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಜಾನಿ ಬೈರ್‌ಸ್ಟೋ ಮಾತ್ರ ತಂಡದ ಪರ ಹೆಚ್ಚು ರನ್ ಗಳಿಸಿದರು. ಬೈರ್‌ಸ್ಟೋವ್ 30 ರನ್ ಗಳಿಸಿದರು. ಜೋಸ್ ಬಟ್ಲರ್ ಮತ್ತು ಜೇಸನ್ ರಾಯ್ ತಂಡಕ್ಕೆ ತ್ವರಿತ ಆರಂಭ ನೀಡಲು ಪ್ರಯತ್ನಿಸಿದರು ಮತ್ತು ಮೊದಲ ವಿಕೆಟ್‌ಗೆ 37 ರನ್ ಸೇರಿಸಿದರು. ಬಟ್ಲರ್ 29 ರನ್ ಗಳಿಸಿ ಮೊದಲು ಔಟಾದರು. ಡೇವಿಡ್ ಮಲಾನ್ ಕೇವಲ ಐದು ರನ್ ಗಳಿಸಲಷ್ಟೇ ಶಕ್ತರಾದರು. ಮೊಯಿನ್ ಅಲಿ 28 ರನ್ ಕೊಡುಗೆ ನೀಡಿದರು. ಆದರೆ ಇಂಗ್ಲೆಂಡ್ ಅಗ್ರ ಕ್ರಮಾಂಕ ವಿಫಲವಾದ ತಕ್ಷಣ, ದಕ್ಷಿಣ ಆಫ್ರಿಕಾ ತಂಡವು ಪ್ರಾಬಲ್ಯ ಸಾಧಿಸಿತು ಮತ್ತು ಇಂಗ್ಲೆಂಡ್‌ಗೆ ಸಂಪೂರ್ಣ ಓವರ್ ಆಡಲು ಸಹ ಅವಕಾಶ ನೀಡಲಿಲ್ಲ. ದಕ್ಷಿಣ ಆಫ್ರಿಕಾ ಪರ ಆಂಡಿಲೆ ಫೆಹುಲ್ಕ್ವಾಯೊ ಮತ್ತು ತಬ್ರೇಜ್ ಶಮ್ಸಿ ತಲಾ ಮೂರು ವಿಕೆಟ್ ಪಡೆದರು. ಕಗಿಸೊ ರಬಾಡ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು.