ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಡಂ ಗಿಲ್ ಕ್ರಿಸ್ಟ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಸಿಸಿಐ ನಿಯಮವನ್ನು ಕಟುವಾಗಿ ಟೀಕಿಸಿರುವ ಇವರು ಭಾರತೀಯ ಆಟಗಾರರಿಗೆ ಏಕೆ ವಿದೇಶಿ ಲೀಗ್ ನಲ್ಲಿ ಆಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಪ್ರಶ್ನೆಸಿದ್ದಾರೆ.
ಹೌದು, ಬಿಸಿಸಿಐ ನಿಯಮದ ಪ್ರಕಾರ ಭಾರತೀಯ ಕ್ರಿಕೆಟ್ ನಲ್ಲಿ ಸಕ್ರಿಯವಾಗಿರುವ ಆಟಗಾರರು ಅಥವಾ ನಿವೃತ್ತಿ ನೀಡದ ಆಟಗಾರರು ಬಿಗ್ ಬ್ಯಾಶ್ ಲೀಗ್, ಟಿ20 ಬ್ಲಾಸ್ಟ್ ಸೇರಿದಂತೆ ಯಾವುದೇ ವಿದೇಶಿ ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಳ್ಳುವಂತಿಲ್ಲ. ಇದನ್ನು ಆ್ಯಡಂ ಗಿಲ್ ಕ್ರಿಸ್ಟ್ ವಿರೋಧಿಸಿದ್ದಾರೆ.
ಯಾವುದೇ ಭಾರತೀಯ ಆಟಗಾರರು ಇತರೆ ಟಿ20 ಲೀಗ್ ನಲ್ಲಿ ಆಡಲಿ ಆಡುತ್ತಿಲ್ಲ. ಯಾಕೆ?, ಅದು ಐಪಿಎಲ್ ಗೆ ಪೆಟ್ಟು ಬೀಳುತ್ತಾ?, ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಲೀಗ್ ನಲ್ಲಿ ಕಣಕ್ಕಿಳಿಯಬೇಕು, ಇದರಿಂದ ಅವರಿಗೇ ಬೆಳೆಯಲು ಸಹಕಾರಿ ಆಗುತ್ತದೆ ಎಂದಿದ್ದಾರೆ.
ಭಾರತ ತನ್ನ ಮಾರ್ಕೆಟ್ ಅನ್ನು ವೃದ್ದಿಸಲು ಮುಂದಾಗುತ್ತಿಲ್ಲ. ಅವರು ಐಪಿಎಲ್ ಗೆ ಮಾತ್ರ ಸೀಮಿತರಾಗಿದ್ದಾರೆ. ವಿದೇಶಿ ಲೀಗ್ ನಲ್ಲಿ ಭಾರತೀಯ ಆಟಗಾರರಿಗೆ ಆಡಲು ಅವಕಾಶ ನೀಡಿದರೆ ಇನ್ನಷ್ಟು ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಗಿಲ್ ಕ್ರಿಸ್ಟ್ ಮಾತು.
ಈ ಸುದ್ದಿ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಬಾರಿ ಚರ್ಚೆಯಾಗಿದೆ. ಆದರೆ, ಇತ್ತೀಚೆಗೆ ಬಿಸಿಸಿಐ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಐಪಿಎಲ್ ಫ್ರಾಂಚೈಸಿಗಳಿಂದ ಒತ್ತಡವಿರುವ ಕಾರಣ ವಿದೇಶಿ ಟಿ20 ಲೀಗ್ ಗಳಲ್ಲಿ ಆಡಲು ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ನಿರ್ಧರಿಸಲಿದೆ.
ಸದ್ಯ ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರದ, ರಾಜ್ಯ ತಂಡಗಳಲ್ಲಿ ಖಾಯಂ ಸ್ಥಾನ ಪಡೆಯದ ಆಟಗಾರಿರಿಗೆ ಆಸ್ಪ್ರೇಲಿಯಾದ ಬಿಗ್ ಬ್ಯಾಶ್, ಇಂಗ್ಲೆಂಡ್ ನ ದಿ ಹಂಡ್ರೆಡ್, ದಕ್ಷಿಣ ಆಫ್ರಿಕಾ ಟಿ20 ಲೀಗ್, ಬಾಂಗ್ಲಾ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ ಗಳಲ್ಲಿ ಆಡಲು ಅನುಮತಿ ಸಿಗಬಹುದು ಎನ್ನಲಾಗಿದೆ.
Published On - 11:39 am, Fri, 29 July 22