7.2 ಓವರ್​ಗಳಲ್ಲಿ ಪಂದ್ಯ ಮುಗಿಸಿದ ಇಂಗ್ಲೆಂಡ್

|

Updated on: Jul 29, 2024 | 7:50 AM

England vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ತಂಡ 3-0 ಅಂತರದಿಂದ ಗೆದ್ದುಕೊಂಡಿದೆ. ಅದರಲ್ಲೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಝ್ ಬಾಲ್ ಬ್ಯಾಟಿಂಗ್ ಪ್ರದರ್ಶೀಸುವ ಮೂಲಕ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಅಮೋಘ ಗೆಲುವು ದಾಖಲಿಸಿರುವುದು ವಿಶೇಷ.

7.2 ಓವರ್​ಗಳಲ್ಲಿ ಪಂದ್ಯ ಮುಗಿಸಿದ ಇಂಗ್ಲೆಂಡ್
Ben Stokes - Ben Ducket
Follow us on

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡವು ಮೊದಲು ಇನಿಂಗ್ಸ್ ಆರಂಭಿಸಿತು. ಅದರಂತೆ ನಾಯಕ ಕ್ರೈಗ್ ಬ್ರಾಥ್‌ವೈಟ್ (61) ಹಾಗೂ ಜೇಸನ್ ಹೋಲ್ಡರ್ (59) ಅವರ ಅರ್ಧಶತಕಗಳ ನೆರವಿನಿಂದ ವಿಂಡೀಸ್​ ಮೊದಲ ಇನಿಂಗ್ಸ್​ನಲ್ಲಿ 282 ರನ್​ ಕಲೆಹಾಕಿ ಆಲೌಟ್ ಆಗಿತ್ತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಜೋ ರೂಟ್ (87), ಜೇಮಿ ಸ್ಮಿತ್ (95) ಹಾಗೂ ಬೆನ್ ಸ್ಟೋಕ್ಸ್ (54) ಅರ್ಧಶತಕಗಳನ್ನು ಬಾರಿಸಿದರು. ಈ ಮೂಲಕ 376 ರನ್​ಗಳಿಸಿ 94 ರನ್​ಗಳ ಮುನ್ನಡೆ ಪಡೆಯಿತು.

94 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು 175 ರನ್​ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ ಇಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 81 ರನ್​ಗಳ ಗುರಿ ಪಡೆಯಿತು.

7.2 ಓವರ್​ಗಳಲ್ಲಿ ಚೇಸಿಂಗ್:

ದ್ವಿತೀಯ ಇನಿಂಗ್ಸ್​ನಲ್ಲಿ 81 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಹಾಗೂ ಬೆನ್ ಡಕೆಟ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್​ನಿಂದಲೇ ಅಬ್ಬರಿಸಲಾರಂಭಿಸಿದ ಈ ಜೋಡಿಯು ಸಿಕ್ಸ್-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಕೇವಲ 4.2 ಓವರ್​ಗಳಲ್ಲಿ ತಂಡದ ಮೊತ್ತ ಅರ್ಧಶತಕದ ಗಡಿದಾಟಿತು.

ಇನ್ನು ಬೆನ್ ಸ್ಟೋಕ್ಸ್ 28 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 57 ರನ್ ಬಾರಿಸಿದರೆ, ಬೆನ್ ಡಕೆಟ್ 16 ಎಸೆತಗಳಲ್ಲಿ 4 ಫೋರ್​ಗಳೊಂದಿಗೆ ಅಜೇಯ 25 ರನ್​ ಸಿಡಿಸಿದರು. ಈ ಮೂಲಕ ಕೇವಲ 7.2 ಓವರ್​ಗಳಲ್ಲಿ 87 ರನ್ ಸಿಡಿಸಿ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಸರಣಿ ಕ್ಲೀನ್ ಸ್ವೀಪ್:

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನಿಂಗ್ಸ್ ಮತ್ತು 114 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 241 ರನ್​ಗಳ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್​ಗಳ ಅಮೋಘ ಜಯ ಸಾಧಿಸಿದೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜೇಮಿ ಸ್ಮಿತ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಗಸ್ ಅಟ್ಕಿನ್ಸನ್ , ಮಾರ್ಕ್ ವುಡ್ , ಶೋಯೆಬ್ ಬಶೀರ್.

ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಯಾದವ್ ಅಬ್ಬರಕ್ಕೆ ಮ್ಯಾಕ್ಸ್​ವೆಲ್ ವಿಶ್ವ ದಾಖಲೆ ಉಡೀಸ್

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ಮೈಕೈಲ್ ಲೂಯಿಸ್ , ಕಿರ್ಕ್ ಮೆಕೆಂಜಿ , ಅಲಿಕ್ ಅಥಾನಾಜೆ , ಕವೆಮ್ ಹಾಡ್ಜ್ , ಜೇಸನ್ ಹೋಲ್ಡರ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್) , ಅಲ್ಜಾರಿ ಜೋಸೆಫ್ , ಗುಡಕೇಶ್ ಮೋಟಿ , ಶಮರ್ ಜೋಸೆಫ್ , ಜೇಡನ್ ಸೀಲ್ಸ್