IND vs SL 2nd T20 Highlights: ಶ್ರೀಲಂಕಾ ಮಣಿಸಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ

ಪೃಥ್ವಿಶಂಕರ
|

Updated on:Jul 28, 2024 | 11:30 PM

Sri Lanka vs India 2nd T20I Highlights in Kannada: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಪಲ್ಲೆಕೆಲೆಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಮಳೆ ಪೀಡಿತ ಈ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದು ಬೀಗಿದ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ. ಅಲ್ಲದೆ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ.

IND vs SL 2nd T20 Highlights: ಶ್ರೀಲಂಕಾ ಮಣಿಸಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಪಲ್ಲೆಕೆಲೆಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಮಳೆ ಪೀಡಿತ ಈ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದು ಬೀಗಿದ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ. ಅಲ್ಲದೆ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲೂ ದಿಟ್ಟ ಪ್ರದರ್ಶನ ಕಂಡುಬಂತು. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಮತ್ತು ಗೌತಮ್ ಗಂಭೀರ್ ಅವರ ಹೊಸ ಯುಗ ಗೆಲುವಿನೊಂದಿಗೆ ಆರಂಭವಾಗಿದೆ.

ಬೌಲರ್‌ಗಳ ದಿಟ್ಟ ಪ್ರದರ್ಶನ

ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರಂಭದಲ್ಲಿ ನಾಯಕ ನಿರ್ಧಾರ ಕೊಂಚ ದುಬಾರಿಯಾಯಿತೆನಿಸಿದರೂ ಆ ಬಳಿಕ ತಂಡದ ಬೌಲರ್​ಗಳು ನಾಯಕ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇತ್ತ ಲಂಕಾ ತಂಡಕ್ಕೆ ಆರಂಭಿಕರಿಬ್ಬರು ಉತ್ತಮ ಆರಂಭ ನೀಡಿದರಾದರೂ, ಹಿಂದಿನ ಪಂದ್ಯದಂತೆ ಈ ಪಂದ್ಯದಲ್ಲೂ ಶ್ರೀಲಂಕಾದ ಮಧ್ಯಮ ಕ್ರಮಾಂಕ ದಯನೀಯವಾಗಿ ವಿಫಲವಾಯಿತು. ಇದರ ಪರಿಣಾಮವಾಗಿ ಉತ್ತಮ ಆರಂಭದ ಹೊರತಾಗಿಯೂ ತಂಡ 20 ಓವರ್‌ಗಳಲ್ಲಿ 161 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಸಮಯದಲ್ಲಿ ಶ್ರೀಲಂಕಾ ತಂಡ 2 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತ್ತು, ಆದರೆ ತಂಡವು ಕೊನೆಯ 31 ರನ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು.

ಮಳೆಯಿಂದಾಗಿ ಓವರ್‌ ಕಡಿತ

162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ನಂತರ ಈ ಪಂದ್ಯದಲ್ಲಿ 12 ಓವರ್‌ಗಳನ್ನು ಕಡಿತಗೊಳಿಸಲಾಗಿದ್ದು, ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಂ ಇಂಡಿಯಾಕ್ಕೆ 8 ಓವರ್‌ಗಳಲ್ಲಿ 78 ರನ್‌ಗಳ ಗುರಿ ನೀಡಲಾಯಿತು. ಮಳೆ ಆರಂಭವಾಗುವ ಮುನ್ನವೇ ಭಾರತ ತಂಡ 3 ಎಸೆತಗಳಲ್ಲಿ 6 ರನ್ ಗಳಿಸಿದ್ದು, ಇದಕ್ಕೂ ಮುನ್ನ ಪಂದ್ಯ ನಡೆದಿತ್ತು.

ಆದರೆ ಮಳೆಯ ನಂತರ ಭಾರತದ ಆರಂಭ ವಿಶೇಷವೇನೂ ಆಗಿರಲಿಲ್ಲ. ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡರು. ಆದರೆ ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಇನ್ನಿಂಗ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದಿತು. ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 30 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 12 ಎಸೆತಗಳಲ್ಲಿ 26 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LIVE NEWS & UPDATES

The liveblog has ended.
  • 28 Jul 2024 11:18 PM (IST)

    IND vs SL 2nd T20 Live Score: 7 ವಿಕೆಟ್ ಜಯ

    ಮಳೆ ಪೀಡಿತ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನು 9 ಎಸೆತಗಳು ಬಾಕಿ ಇರುವಂತೆಯೇ ಶ್ರೀಲಂಕಾ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಎರಡನೇ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಟಿ20 ಸರಣಿಯನ್ನೂ ಕೈವಶ ಮಾಡಿಕೊಂಡಿದೆ.

  • 28 Jul 2024 11:13 PM (IST)

    IND vs SL 2nd T20 Live Score: ಜೈಸ್ವಾಲ್ ಕೂಡ ಔಟ್

    ಭಾರತದ ಮೂರನೇ ವಿಕೆಟ್ ಪತನಗೊಂಡಿದೆ. ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು.

  • 28 Jul 2024 11:13 PM (IST)

    IND vs SL 2nd T20 Live Score: 2ನೇ ವಿಕೆಟ್

    ಭಾರತಕ್ಕೆ ಅಬ್ಬರದ ಆರಂಭ ನೀಡಿದ ಸೂರ್ಯಕುಮಾರ್ ಯಾದವ್ ಔಟಾಗಿದ್ದಾರೆ. ಅವರು 12 ಎಸೆತಗಳಲ್ಲಿ 26 ರನ್ ಗಳಿಸಿ,ಪತಿರಾನಗೆ ವಿಕೆಟ್ ಒಪ್ಪಿಸಿದರು.

  • 28 Jul 2024 11:03 PM (IST)

    IND vs SL 2nd T20 Live Score: ಸ್ಫೋಟಕ ಬ್ಯಾಟಿಂಗ್

    ಭಾರತ ಎರಡನೇ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡಿತು. ಇಷ್ಟಾದರೂ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಯಶಸ್ವಿ ಜೈಸ್ವಾಲ್ ನಿರಂತರವಾಗಿ ಬೌಂಡರಿ ಬಾರಿಸುತ್ತಿದ್ದು, 4 ಓವರ್‌ಗಳಲ್ಲಿ 45 ರನ್ ಗಳಿಸಿದ್ದಾರೆ.

  • 28 Jul 2024 10:52 PM (IST)

    IND vs SL 2nd T20 Live Score: ಸಂಜು ಔಟ್

    78 ರನ್​ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಮೊದಲ ಓವರ್​ನಲ್ಲಿ 12 ರನ್ ಗಳಿಸಿ ಶುಭಾರಂಭ ಮಾಡಿತು. ಆದರೆ, ಎರಡನೇ ಓವರ್‌ನಲ್ಲಿ ಭಾರತಕ್ಕೆ ಮೊದಲ ಹೊಡೆತ ಬಿದ್ದಿತು. ಮಹಿಷ್ ತೀಕ್ಷಣ ಮೊದಲ ಎಸೆತದಲ್ಲಿಯೇ ಸಂಜು ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿದರು.

  • 28 Jul 2024 10:49 PM (IST)

    IND vs SL 2nd T20 Live Score: 78 ರನ್‌ಗಳ ಗುರಿ

    ಮಳೆ ನಿಂತ ಬಳಿಕ ಆಟ ಮತ್ತೊಮ್ಮೆ ಆರಂಭವಾಗಲಿದೆ. ಆದರೆ ಈ ಪಂದ್ಯದಲ್ಲಿ 12 ಓವರ್​ಗಳನ್ನು ಕಡಿತಗೊಳಿಸಲಾಗಿದ್ದು, ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಂ ಇಂಡಿಯಾಗೆ 8 ಓವರ್​ಗಳಲ್ಲಿ 78 ರನ್​ಗಳ ಟಾರ್ಗೆಟ್ ನೀಡಲಾಗಿದೆ. ಭಾರತ ತಂಡ ಈಗಾಗಲೇ 3 ಎಸೆತಗಳಲ್ಲಿ 6 ರನ್ ಗಳಿಸಿದ್ದು, ಇದೀಗ 45 ಎಸೆತಗಳಲ್ಲಿ 72 ರನ್ ಗಳಿಸಬೇಕಿದೆ.

  • 28 Jul 2024 09:39 PM (IST)

    IND vs SL 2nd T20 Live Score: ಮಳೆಯಿಂದ ಆಟ ಸ್ಥಗಿತ

    ಗುರಿ ಬೆನ್ನಟ್ಟಲು ಭಾರತದ ಆರಂಭಿಕರು ಅಖಾಡಕ್ಕಿಳಿದಿದ್ದಾರೆ. ಆದರೆ ಮಳೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

  • 28 Jul 2024 09:33 PM (IST)

    IND vs SL 2nd T20 Live Score: 162 ರನ್ ಗುರಿ

    ಎಂದಿನಂತೆ ಶ್ರೀಲಂಕಾದ ಮಧ್ಯಮ ಕ್ರಮಾಂಕ ದಯನೀಯವಾಗಿ ವಿಫಲವಾಯಿತು, ಇದರ ಪರಿಣಾಮವಾಗಿ ಉತ್ತಮ ಆರಂಭದ ಹೊರತಾಗಿಯೂ ತಂಡವು 20 ಓವರ್‌ಗಳಲ್ಲಿ 161 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ 31 ರನ್ ಗಳಿಸುವಷ್ಟರಲ್ಲಿ ತಂಡ 7 ವಿಕೆಟ್ ಕಳೆದುಕೊಂಡಿತು. ಇದೀಗ ಭಾರತ 162 ರನ್‌ಗಳ ಗುರಿಯನ್ನು ಬೆನ್ನಟ್ಟಬೇಕಿದೆ.

  • 28 Jul 2024 09:25 PM (IST)

    IND vs SL 2nd T20 Live Score: 7ನೇ ವಿಕೆಟ್

    ಟೀಂ ಇಂಡಿಯಾ ಶ್ರೀಲಂಕಾದ 7 ವಿಕೆಟ್ ಉರುಳಿಸಿದೆ. ನಾಯಕ ಚರಿತ್ ಅಸಲಂಕಾ 14 ರನ್ ಗಳಿಸಿ ಔಟಾದರು.

  • 28 Jul 2024 09:20 PM (IST)

    IND vs SL 2nd T20 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್

    ಶ್ರೀಲಂಕಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದೆ. ರವಿ ಬಿಷ್ಣೋಯ್ ಅವರ ಸತತ ಎರಡು ಎಸೆತಗಳಲ್ಲಿ ದಸುನು ಶನಕ ಹಾಗೂ ವನಿಂದು ಹಸರಂಗ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 28 Jul 2024 09:07 PM (IST)

    IND vs SL 2nd T20 Live Score: ಪೆರೇರಾ ಔಟ್

    ಹಾರ್ದಿಕ್ ಪಾಂಡ್ಯ ಭಾರತಕ್ಕೆ ನಾಲ್ಕನೇ ಯಶಸ್ಸು ತಂದುಕೊಟ್ಟಿದ್ದಾರೆ. ಅರ್ಧಶತಕ ಬಾರಿಸಿದ್ದ ಕುಸಾಲ್‌ ಪೆರೆರಾ ಅವರನ್ನು ವಜಾ ಮಾಡಿದ್ದಾರೆ. ಪೆರೇರಾ 34 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. 16 ಓವರ್‌ಗಳಲ್ಲಿ ಶ್ರೀಲಂಕಾ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ.

  • 28 Jul 2024 09:03 PM (IST)

    IND vs SL 2nd T20 Live Score: ಮೂರನೇ ವಿಕೆಟ್ ಪತನ

    ಶ್ರೀಲಂಕಾದ ಮೂರನೇ ವಿಕೆಟ್ ಪತನಗೊಂಡಿದೆ. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕಮಿಂದು ಮೆಂಡಿಸ್, ರಿಂಕು ಸಿಂಗ್​ಗೆ ಕ್ಯಾಚ್ ನೀಡಿ ಔಟಾದರು.

  • 28 Jul 2024 08:55 PM (IST)

    IND vs SL 2nd T20 Live Score: 100 ರನ್ ಪೂರ್ಣ

    ಶ್ರೀಲಂಕಾ 100 ರನ್ ಪೂರೈಸಿದೆ. 13 ಓವರ್‌ಗಳ ನಂತರ ತಂಡದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 108 ರನ್ ಆಗಿದೆ.

  • 28 Jul 2024 08:37 PM (IST)

    IND vs SL 2nd T20 Live Score: ನಿಸ್ಸಾಂಕಾ ಔಟ್

    ರವಿ ಬಿಷ್ಣೋಯ್ ಎಸೆತದಲ್ಲಿ ಪಾತುಮ್ ನಿಸ್ಸಾಂಕಾ ಔಟಾದರು. ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಅವರು 32 ರನ್​ಗಳ ಕಾಣಿಕೆ ನೀಡಿದರು.

  • 28 Jul 2024 08:20 PM (IST)

    IND vs SL 2nd T20 Live Score: ಅರ್ಧಶತಕ ಪೂರ್ಣ

    ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಗೇರ್ ಬದಲಾಯಿಸಿದ್ದಾರೆ. ಕುಸಾಲ್ ಪೆರೇರಾ ಮತ್ತು ಪಾತುಮ್ ನಿಸ್ಸಾಂಕ ನಿರಂತರವಾಗಿ ಬೌಂಡರಿ ಬಾರಿಸುತ್ತಿದ್ದಾರೆ. ತಂಡದ ಸ್ಕೋರನ್ನು 50ರ ಗಡಿ ದಾಟಿಸಿದ್ದಾರೆ. ಪೆರೇರಾ 9 ಎಸೆತಗಳಲ್ಲಿ 18 ರನ್ ಮತ್ತು ನಿಸ್ಸಾಂಕ 16 ಎಸೆತಗಳಲ್ಲಿ 24 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಶ್ರೀಲಂಕಾ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 54 ರನ್ ಗಳಿಸಿದೆ.

  • 28 Jul 2024 08:08 PM (IST)

    IND vs SL 2nd T20 Live Score: ಕುಶಾಲ್ ಮೆಂಡಿಸ್ ಔಟ್

    ಶ್ರೀಲಂಕಾ 26 ರನ್‌ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಕುಶಾಲ್ ಮೆಂಡಿಸ್ ಕೇವಲ 10 ರನ್ ಗಳಿಸಿ ಔಟಾದರು. ಕುಸಾಲ್ ಪೆರೇರಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರಿಗೆ ಬೆಂಬಲವಾಗಿ ಪಾತುಮ್ ನಿಸ್ಸಾಂಕ ಕ್ರೀಸ್‌ನಲ್ಲಿದ್ದಾರೆ.

  • 28 Jul 2024 07:59 PM (IST)

    IND vs SL 2nd T20 Live Score: ಬೌಂಡರಿಯೊಂದಿಗೆ ಆರಂಭ

    ಶ್ರೀಲಂಕಾ ಆರಂಭಿಕರು ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಿದ್ದಾರೆ. ಮೊದಲ ಓವರ್‌ನಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ ಒಂದು ಬೌಂಡರಿ ಬಾರಿಸಿದ್ದರು. 1 ಓವರ್‌ಗೆ ಶ್ರೀಲಂಕಾ 9 ರನ್ ಗಳಿಸಿದೆ.

  • 28 Jul 2024 07:34 PM (IST)

    IND vs SL 2nd T20 Live Score: ಶ್ರೀಲಂಕಾ ತಂಡ

    ಪಾತುಮ್ ನಿಸ್ಸಾಂಕಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಕುಸಲ್ ಪೆರೆರಾ, ಕಮಿಂದು ಮೆಂಡಿಸ್, ಚರಿತ್ ಅಸಲಂಕಾ (ನಾಯಕ), ದಸುನ್ ಶನಕ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಮಹಿಷ್ ತೀಕ್ಷಣ, ಮತಿಶ ಪತಿರಾನ, ಅಸಿತ ಫೆರ್ನಾಂಡೊ.

  • 28 Jul 2024 07:33 PM (IST)

    IND vs SL 2nd T20 Live Score: ಭಾರತ ತಂಡ

    ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.

  • 28 Jul 2024 07:17 PM (IST)

    IND vs SL 2nd T20 Live Score: ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 28 Jul 2024 06:43 PM (IST)

    IND vs SL 2nd T20 Live Score: ಟಾಸ್ ವಿಳಂಬ

    ಮಳೆಯಿಂದಾಗಿ ಟಾಸ್ ವಿಳಂಬವಾಗಿದೆ. ಆದರೆ ಕವರ್‌ಗಳನ್ನು ತೆಗೆದುಹಾಕಲಾಗಿದ್ದು, ಇಷ್ಟರಲ್ಲೇ ಟಾಸ್ ನಡೆಯಲ್ಲಿದೆ.

  • Published On - Jul 28,2024 6:42 PM

    Follow us
    ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
    ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
    ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
    ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
    ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
    ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
    70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
    70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
    ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
    ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
    ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
    ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
    ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
    ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
    ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
    ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
    ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
    ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
    ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
    ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ