ಐಪಿಎಲ್ ಆಯ್ತು.. ಈಗ ಭಾರತ ವಿರುದ್ಧದ ಕೊನೆಯ ಟೆಸ್ಟ್ ಹಾಗೂ ಆಶಸ್ ಸರಣಿಗೂ ಗೈರಾಗಲಿದ್ದಾರೆ ಇಂಗ್ಲೆಂಡ್​ನ ಸ್ಟಾರ್ ಬ್ಯಾಟ್ಸ್​ಮನ್

Jos Buttler: ನನ್ನ ಪತ್ನಿಗಾಗಿ ನಾನು ಮಾಡಬೇಕಾದ ಪ್ರಮುಖ ಕರ್ತವ್ಯವಿದು. ಸ್ವಲ್ಪ ಸಮಯದವರೆಗೆ ಕ್ರಿಕೆಟ್ ಅನ್ನು ಮರೆತುಬಿಡುವುದು ಎಂದಾದರೆ, ನಾನು ಅದನ್ನು ಮರೆಯಲು ಸಿದ್ಧ

ಐಪಿಎಲ್ ಆಯ್ತು.. ಈಗ ಭಾರತ ವಿರುದ್ಧದ ಕೊನೆಯ ಟೆಸ್ಟ್ ಹಾಗೂ ಆಶಸ್ ಸರಣಿಗೂ ಗೈರಾಗಲಿದ್ದಾರೆ ಇಂಗ್ಲೆಂಡ್​ನ ಸ್ಟಾರ್ ಬ್ಯಾಟ್ಸ್​ಮನ್
ಜೋಸ್ ಬಟ್ಲರ್
Follow us
TV9 Web
| Updated By: ಪೃಥ್ವಿಶಂಕರ

Updated on:Aug 22, 2021 | 6:12 PM

ಆಶಸ್ ಸರಣಿಗೂ ಮುನ್ನ ಇಂಗ್ಲೆಂಡ್ ದೊಡ್ಡ ಹಿನ್ನಡೆ ಎದುರಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಆಶಸ್ ಸರಣಿಯಿಂದ ನನ್ನನ್ನು ಹೊರಗಿಡಬಹುದು ಎಂದು ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಹೇಳಿದ್ದಾರೆ. ತನ್ನ ಎರಡನೇ ಮಗುವಿನ ಜನನದ ಕಾರಣ ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ ಐಪಿಎಲ್ -14 ರ ಆವೃತ್ತಿಯಲ್ಲಿ ಬಟ್ಲರ್ ಭಾಗವಹಿಸುವುದಿಲ್ಲ ಎಂದು ಶನಿವಾರವೇ ವರದಿಯಾಗಿದೆ. ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ನಿರ್ಬಂಧಗಳಿಂದಾಗಿ ತನ್ನ ಕುಟುಂಬವನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಕಷ್ಟಕರವಾಗುವುದರಿಂದ ಬಟ್ಲರ್ ಆಶಸ್​ನಿಂದ ಹೊರಗುಳಿಯಬಹುದು ಎಂಬ ವರದಿಗಳು ಈಗ ಕೇಳಿ ಬಂದಿವೆ. ಅಲ್ಲದೆ, ಓಲ್ಡ್ ಟ್ರಾಫರ್ಡ್​ನಲ್ಲಿ ಭಾರತ ವಿರುದ್ಧ ನಡೆಯುವ ಅಂತಿಮ ಟೆಸ್ಟ್​ನಲ್ಲೂ ಆಡುವುದು ಅನುಮಾನವಾಗಿದೆ.

ಓಲ್ಡ್ ಟ್ರಾಫರ್ಡ್​ನಲ್ಲಿ ಭಾರತ ವಿರುದ್ಧದ ಅಂತಿಮ ಟೆಸ್ಟ್​ನ ಮೊದಲ ದಿನವೇ ತನ್ನ ಎರಡನೇ ಮಗುವಿನ ನಿರೀಕ್ಷೆಯಿರುವ ಕಾರಣದಿಂದಾಗಿ, ಬಟ್ಲರ್ ತನ್ನ ಪತ್ನಿ ಲೂಯಿಸ್ ಮತ್ತು ಎರಡು ವರ್ಷದ ಮಗಳು ಜಾರ್ಜಿಯಾ ಜೊತೆ ಇರಲು ಪಂದ್ಯದಿಂದ ಹಿಂದೆ ಸರಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. 2019 ರಲ್ಲಿ ತಮ್ಮ ಮೊದಲ ಮಗು ಜಾರ್ಜಿಯಾ ಜನನದಿಂದಾಗಿ ಸ್ವದೇಶಕ್ಕೆ ಮರಳಲು ಬಟ್ಲರ್ ಅರ್ಧದಲ್ಲೇ ಐಪಿಎಲ್‌ ತೊರೆದಿದ್ದರು.

ಬಟ್ಲರ್ ಹೇಳಿದ್ದು ಹೀಗೆ ಬಟ್ಲರ್ ಭಾನುವಾರ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ, ನನ್ನ ಪತ್ನಿಗಾಗಿ ನಾನು ಮಾಡಬೇಕಾದ ಪ್ರಮುಖ ಕರ್ತವ್ಯವಿದು. ಸ್ವಲ್ಪ ಸಮಯದವರೆಗೆ ಕ್ರಿಕೆಟ್ ಅನ್ನು ಮರೆತುಬಿಡುವುದು ಎಂದಾದರೆ, ನಾನು ಅದನ್ನು ಮರೆಯಲು ಸಿದ್ಧ ಎಂದು ಹೇಳಿದರು. ಇಂಗ್ಲೆಂಡ್ ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಪುರುಷರ ಟಿ 20 ವಿಶ್ವಕಪ್​ನಲ್ಲಿ ಆಡಲಿದೆ. ಇದರರ್ಥ ಎರಡೂ ಪಂದ್ಯಗಳಲ್ಲಿ ಭಾಗವಹಿಸುವ ಆಟಗಾರರು ತಮ್ಮ ಕುಟುಂಬದಿಂದ ನಾಲ್ಕು ತಿಂಗಳು ದೂರವಿರುತ್ತಾರೆ.

ಮುಂದುವರೆದು ಮಾತನಾಡಿದ ಬಟ್ಲರ್, ಕೋವಿಡ್ ಎಲ್ಲರಿಗೂ ನಂಬಲಾಗದಷ್ಟು ಸವಾಲಾಗಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಕಠಿಣ ನಿಯಮಗಳಿವೆ. ಅಲ್ಲದೆ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಈಗ ಬಯೋ ಬಬಲ್ ನಮಗೆ ತುಂಬಾ ಕಷ್ಟವಾಗುತ್ತಿದೆ. ಇಂಗ್ಲೆಂಡ್​ನಲ್ಲಿ ಕ್ರಿಕೆಟ್ ಆಡುವುದು ಬಹುತೇಕ ಪ್ರವಾಸದಲ್ಲಿದ್ದಂತೆ. ಮೊದಲಿನಂತೆ ಕುಟುಂಬಗಳು ನಮ್ಮ ಬಳಿ ಬರುವುದಿಲ್ಲ ಮತ್ತು ಹೋಗುವುದಿಲ್ಲ. ಅಂದು ನೀವು ಪಂದ್ಯಗಳ ನಡುವೆ ಮನೆಯಲ್ಲಿರಬಹುದಾಗಿತ್ತು ಆದರೆ ಈಗ ಎಲ್ಲವೂ ಬದಲಾಗಿದೆ ಎಂದಿದ್ದಾರೆ.

Published On - 6:11 pm, Sun, 22 August 21

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ