
ಭಾರತ ಮತ್ತು ಇಂಗ್ಲೆಂಡ್ (England vs India) ನಡುವೆ ಲಾರ್ಡ್ಸ್ ಮೈದಾನದಲ್ಲಿ ( Lords Test) ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಶುರುವಾಗಿದೆ. ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 251 ರನ್ ಬಾರಿಸಿದ್ದ ಇಂಗ್ಲೆಂಡ್ ತಂಡ ಇಲ್ಲಿಂದ ತನ್ನ ಎರಡನೇ ದಿನದಾಟವನ್ನು ಮುಂದುವರೆಸಿದೆ. ಇನ್ನು ಮೊದಲ ದಿನದಾಟದಂತ್ಯಕ್ಕೆ 99 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ಮಾಜಿ ನಾಯಕ ಜೋ ರೂಟ್ (Joe Root), ಎರಡನೇ ದಿನದಾಟದ ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ಶತಕ ಪೂರೈಸಿದರು. 192 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ ರೂಟ್ ತಮ್ಮ ಟೆಸ್ಟ್ ವೃತ್ತಿಜೀವನದ 37 ನೇ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ ಟೀಂ ಇಂಡಿಯಾ ವಿರುದ್ಧ ರೂಟ್ ಸಿಡಿಸಿದ 11ನೇ ಟೆಸ್ಟ್ ಶತಕ ಇದಾಗಿದೆ. ಹಾಗೆಯೇ ರೂಟ್, ನಾಯಕ ಬೆನ್ ಸ್ಟೋಕ್ಸ್ ಅವರೊಂದಿಗೆ 80 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ನಡೆಸಿದ್ದು, ಇವರಿಬ್ಬರ ಆಟದಿಂದಾಗಿ ಇಂಗ್ಲೆಂಡ್‌ನ ಸ್ಕೋರ್ ಕೂಡ 250 ರನ್‌ಗಳ ಗಡಿ ದಾಟಿದೆ.
ಈ ಶತಕದ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಜೋ ರೂಟ್ಗೆ ಈ ಮೈದಾನದಲ್ಲಿ ಇದು ಎಂಟನೇ ಶತಕವಾಗಿದೆ. ಈ ಟೆಸ್ಟ್ ಪಂದ್ಯದ ಮೊದಲ ದಿನದಂದು, ಭಾರತ ವಿರುದ್ಧ ಟೆಸ್ಟ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದ್ದ ರೂಟ್, ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಲಾರ್ಡ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ. ಇದಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ 5ನೇ ಸ್ಥಾನಕ್ಕೆ ತಲುಪಿದ್ದಾರೆ.
99 not out 😬
Facing Bumrah 🔴
First ball of the day 🏏
Root goes to 100! 🙌@IGcom | #EnglandCricket pic.twitter.com/bpcKRfxldd— England Cricket (@englandcricket) July 11, 2025
ಲಾರ್ಡ್ಸ್ ಮೈದಾನದಲ್ಲಿ ಶತಕ ಗಳಿಸುವ ಮೂಲಕ ಜೋ ರೂಟ್, ಒಂದು ದೇಶದ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧದ 39 ಟೆಸ್ಟ್ ಪಂದ್ಯಗಳ 74 ಇನ್ನಿಂಗ್ಸ್‌ಗಳಲ್ಲಿ 11 ಶತಕಗಳನ್ನು ಬಾರಿಸಿದ್ದಾರೆ. ಇದಲ್ಲದೆ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್, ಭಾರತದ ವಿರುದ್ಧ ಆಡಿರುವ 24 ಪಂದ್ಯಗಳ 46 ಇನ್ನಿಂಗ್ಸ್‌ಗಳಲ್ಲಿ 11 ಶತಕಗಳನ್ನು ಸಿಡಿಸಿದ್ದಾರೆ. ಇದೀಗ ಜೋ ರೂಟ್ ಭಾರತದ ವಿರುದ್ಧದ 33 ಪಂದ್ಯಗಳ 60 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡಾನ್ ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧದ 37 ಪಂದ್ಯಗಳ 63 ಇನ್ನಿಂಗ್ಸ್‌ಗಳಲ್ಲಿ 19 ಶತಕಗಳನ್ನು ಗಳಿಸಿದ್ದಾರೆ.
IND vs ENG: ‘ಬೋರಿಂಗ್ ಟೆಸ್ಟ್ ಕ್ರಿಕೆಟ್ಗೆ ಸ್ವಾಗತ’; ಆಂಗ್ಲರನ್ನು ಗೇಲಿ ಮಾಡಿದ ಯಂಗ್ ಇಂಡಿಯಾ
156 ಪಂದ್ಯಗಳಲ್ಲಿ 37 ಶತಕಗಳನ್ನು ಸಿಡಿಸಿರುವ ರೂಟ್ಗೆ ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 55ನೇ ಶತಕವಾಗಿದೆ. ಇದರೊಂದಿಗೆ ಅವರು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಶಿಮ್ ಆಮ್ಲಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಮ್ಲಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 55 ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜೋ ರೂಟ್ ಅಗ್ರ 5ನೇ ಸ್ಥಾನವನ್ನು ತಲುಪಿದ್ದಾರೆ. ಈ ಮೂಲಕ ಅವರು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 36 ಶತಕಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Fri, 11 July 25