ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಬೆನ್ ಸ್ಟೋಕ್ಸ್ (Ben Stokes) ನಾಯಕನಾಗಿ ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ. ತವರಿನಲ್ಲಿ ಅದ್ಭುತ ಜಯ ದಾಖಲಿಸಿದ ಬೆನ್ನಲ್ಲೇ ಬೆನ್ ಸ್ಟೋಕ್ಸ್ ಅಂಡ್ ಕಂಪನಿಗೆ ದೊಡ್ಡ ಹೊಡೆತ ನೀಡಿದ ಐಸಿಸಿ (ICC) ಇಂಗ್ಲೆಂಡ್ ತಂಡಕ್ಕೆ ಭಾರಿ ದಂಡ ವಿಧಿಸಿದೆ. ಇಂಗ್ಲೆಂಡ್‌ಗೆ ಪಂದ್ಯ ಶುಲ್ಕದ ಶೇಕಡಾ 40ರಷ್ಟು ದಂಡ ವಿಧಿಸಲಾಗಿದ್ದು, ನಿಧಾನಗತಿಯ ಓವರ್‌ರೇಟ್‌ನಿಂದಾಗಿ ಇಂಗ್ಲೆಂಡ್‌ಗೆ ಈ ಶಿಕ್ಷೆ ವಿಧಿಸಲಾಗಿದೆ. ಅಷ್ಟೇ ಅಲ್ಲ, ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಪಾಯಿಂಟ್‌ನ 2 ಪ್ರಮುಖ ಅಂಕಗಳನ್ನು ಸಹ ಕಡಿತಗೊಳಿಸಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಹಿನ್ನಡೆ
ಆಟಗಾರರು ಮತ್ತು ಆಟಗಾರರ ಬೆಂಬಲಿಗ ಸಿಬ್ಬಂದಿಗೆ ಕನಿಷ್ಠ ಓವರ್ ರೇಟ್ ಅಪರಾಧಗಳ ಮೇಲಿನ ICC ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅನುಸಾರವಾಗಿ ಸೂಚಿಸಲಾದ ಮಿತಿಯೊಳಗೆ ಬೌಲಿಂಗ್ ಮಾಡಲು ವಿಫಲವಾದರೆ ಪ್ರತಿ ಓವರ್‌ಗೆ ಆಟಗಾರನ ಪಂದ್ಯ ಶುಲ್ಕದ 20 ಪ್ರತಿಶತದಷ್ಟು ದಂಡವನ್ನು ಹಾಕಲಾಗುತ್ತದೆ. ಇದರೊಂದಿಗೆ, ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆಟದ ಪರಿಸ್ಥಿತಿಗಳ ಆರ್ಟಿಕಲ್ 16.11.2 ರ ಪ್ರಕಾರ, ತಂಡಕ್ಕೆ ಪ್ರತಿ ಓವರ್‌ಗೆ ಒಂದು ಅಂಕವನ್ನು ಕಡಿಮೆಗೊಳಿಸಲಾಗುತ್ತದೆ. ಈ ಕಾರಣಕ್ಕಾಗಿ, ಇಂಗ್ಲೆಂಡ್‌ನ ಒಟ್ಟು ಸ್ಕೋರ್‌ನಿಂದ 2 ಅಂಕಗಳನ್ನು ಕಡಿತಗೊಳಿಸಲಾಗಿದೆ. ಇಂಗ್ಲೆಂಡ್ ನಿಗದಿತ ಮಿತಿಗಿಂತ 2 ಓವರ್‌ಗಳನ್ನು ಕಡಿಮೆ ಹಾಕಿತ್ತು.
Every boundary from one of our greatest Test innings of all-time ??
??????? #ENGvNZ ?? | @jbairstow21 pic.twitter.com/ekzhhPVgn7
— England Cricket (@englandcricket) June 15, 2022
ಇದನ್ನೂ ಓದಿ:IND vs SA: 69 ಬ್ಯಾಟರ್ಗಳನ್ನು ಹಿಂದಿಕ್ಕಿ ಟಿ20 ರ್ಯಾಂಕಿಂಗ್ನಲ್ಲಿ ಟಾಪ್ 10ರೊಳಗೆ ಸ್ಥಾನ ಪಡೆದ ಇಶಾನ್ ಕಿಶನ್
ಶಿಕ್ಷೆ ಸ್ವೀಕರಿಸಿದ ಕ್ಯಾಪ್ಟನ್ ಸ್ಟೋಕ್ಸ್
ಐಸಿಸಿ ಹೇಳಿಕೆ ಪ್ರಕಾರ, ಕ್ಯಾಪ್ಟನ್ ಸ್ಟೋಕ್ಸ್ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಜಾನಿ ಬೈರ್‌ಸ್ಟೋವ್ ಇಂಗ್ಲೆಂಡ್ ಪರ ಅತಿ ವೇಗದ ಟೆಸ್ಟ್ ಶತಕ ಗಳಿಸಿದರು. ಅವರು ಕೇವಲ 77 ಎಸೆತಗಳಲ್ಲಿ ಶತಕ ಗಳಿಸಿದರು. ಬೈರ್‌ಸ್ಟೋವ್ ಅವರ ಅದ್ಭುತ ಇನ್ನಿಂಗ್ಸ್‌ನಿಂದ ಇಂಗ್ಲೆಂಡ್ ಎರಡನೇ ಟೆಸ್ಟ್ ಅನ್ನು 5 ವಿಕೆಟ್‌ಗಳಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇಬ್ಬರ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜೂನ್ 23 ರಿಂದ ಲೀಡ್ಸ್ನಲ್ಲಿ ನಡೆಯಲಿದೆ. ಗಾಯದ ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್‌ನಿಂದ ಹೊರಗುಳಿದಿರುವ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಪಂದ್ಯದಲ್ಲಿ ಆಡುತ್ತಾರೆ ಎಂದು ನ್ಯೂಜಿಲೆಂಡ್ ತಂಡ ಆಶಿಸುತ್ತಿದೆ.