IND vs SA: 3ನೇ ಟಿ20 ಪಂದ್ಯದ ಗೆಲುವಿನೊಂದಿಗೆ ವೃತ್ತಿಜೀವನದ ವಿಶೇಷ ಶತಕ ಸಿಡಿಸಿದ ರಿಷಭ್ ಪಂತ್..!

Rishabh Pant: ಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಭಾರತದ ನಾಯಕ ರಿಷಭ್ ಪಂತ್ ಕೂಡ ತಮ್ಮ ವೃತ್ತಿಜೀವನದ ವಿಶೇಷ ಶತಕ ಪೂರೈಸಿದರು. ಇದು ಪಂತ್ ವೃತ್ತಿ ಜೀವನದ 100ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

IND vs SA: 3ನೇ ಟಿ20 ಪಂದ್ಯದ ಗೆಲುವಿನೊಂದಿಗೆ ವೃತ್ತಿಜೀವನದ ವಿಶೇಷ ಶತಕ ಸಿಡಿಸಿದ ರಿಷಭ್ ಪಂತ್..!
Rishabh Pant (31)
Follow us
TV9 Web
| Updated By: ಪೃಥ್ವಿಶಂಕರ

Updated on: Jun 15, 2022 | 6:07 PM

ವಿಶಾಖಪಟ್ಟಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಭಾರತದ ನಾಯಕ ರಿಷಭ್ ಪಂತ್ (Rishabh Pant) ಕೂಡ ತಮ್ಮ ವೃತ್ತಿಜೀವನದ ವಿಶೇಷ ಶತಕ ಪೂರೈಸಿದರು. ಇದು ಪಂತ್ ವೃತ್ತಿ ಜೀವನದ 100ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. 2017ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂತ್, ಕಳೆದ ಐದು ವರ್ಷಗಳಲ್ಲಿ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ಇದರ ಹೊರತಾಗಿಯೂ, ಅವರು ಭಾರತೀಯ ಟೆಸ್ಟ್ ತಂಡದ ಬೆನ್ನೆಲುಬಾಗಿದ್ದಾರೆ, ODI ಸ್ವರೂಪದಲ್ಲಿ ಸುಧಾರಿಸಿದ್ದಾರೆ ಮತ್ತು ಈಗ ಹಿರಿಯರ ಅನುಪಸ್ಥಿತಿಯಲ್ಲಿ T20 ತಂಡವನ್ನು ಮುನ್ನಡೆಸುತ್ತಿದ್ದಾರೆ.

ಏಕದಿನ ಮತ್ತು ಟಿ20ಯಲ್ಲಿ ಶತಕ ಬಂದಿಲ್ಲ

T20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ ಮುಂದಿನ ವರ್ಷ ಟೆಸ್ಟ್ ಮತ್ತು ODI ಕ್ರಿಕೆಟ್‌ಗೆ ಪಂತ್ ಪಾದಾರ್ಪಣೆ ಮಾಡಿದರು. ಅವರು 30 ಟೆಸ್ಟ್ ಪಂದ್ಯಗಳಲ್ಲಿ 1920 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 9 ಅರ್ಧ ಶತಕಗಳು ಸೇರಿವೆ. ಅದೇ ಸಮಯದಲ್ಲಿ, 24 ODIಗಳಲ್ಲಿ 715 ರನ್ ಗಳಿಸಿದ್ದಾರೆ. ಪಂತ್ ಏಕದಿನ ಕ್ರಿಕೆಟ್‌ನಲ್ಲಿ 5 ಅರ್ಧಶತಕಗಳನ್ನು ಹೊಂದಿದ್ದಾರೆ. ಆದರೆ ಏಕದಿನದಲ್ಲಿ ಇದುವರೆಗೆ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯವು ಪಂತ್ ವೃತ್ತಿಜೀವನದ 46 ನೇ ಟಿ20 ಪಂದ್ಯವಾಗಿದೆ. ಕಳೆದ 45 ಟಿ20 ಪಂದ್ಯಗಳಲ್ಲಿ ಪಂತ್ 717 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಅಜೇಯ 159 ರನ್ ಪಂತ್ ಅವರ ಅತ್ಯುತ್ತಮ ಟೆಸ್ಟ್ ಇನ್ನಿಂಗ್ಸ್ ಆಗಿದೆ. ಏಕದಿನ ಪಂದ್ಯದಲ್ಲಿ 85 ರನ್‌ ಮತ್ತು T20 ಯಲ್ಲಿ ಔಟಾಗದೆ 65 ರನ್‌ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದೆ.

ಇದನ್ನೂ ಓದಿ
Image
IND vs SA: 69 ಬ್ಯಾಟರ್​ಗಳನ್ನು ಹಿಂದಿಕ್ಕಿ ಟಿ20 ರ‍್ಯಾಂಕಿಂಗ್​ನಲ್ಲಿ ಟಾಪ್​ 10ರೊಳಗೆ ಸ್ಥಾನ ಪಡೆದ ಇಶಾನ್ ಕಿಶನ್
Image
IND vs SA: ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ ಸೌತ್ ಆಫ್ರಿಕಾ ಕ್ರಿಕೆಟಿಗರ ಮಡದಿಯರು; ಫೋಟೋ ನೋಡಿ
Image
Virat Kohli: ಮಡದಿ, ಮಗಳೊಂದಿಗೆ ರಜೆ ಮುಗಿಸಿ ಬಂದ ಕೊಹ್ಲಿ ಸೀದಾ ಹೋಗಿದ್ದು ಆಸ್ಪತ್ರೆಗೆ..! ಕಾರಣವೇನು?

ಇದನ್ನೂ ಓದಿ:Rishabh Pant: ದುಬಾರಿ ಕಾರು, ಐಷರಾಮಿ ಮನೆ, ಮನ ಮೆಚ್ಚಿದ ಹುಡುಗಿ; ಮಿಲೆನಿಯರ್ ಪಂತ್ ವೈಯಕ್ತಿಕ ಬದುಕಿದು

ಪಂತ್ ಮೇಲೆ ಒತ್ತಡ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಸರಣಿಯಿಂದ ರೋಹಿತ್ ಮತ್ತು ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಸರಣಿಯ ಆರಂಭಕ್ಕೂ ಮುನ್ನ ರಾಹುಲ್ ಗಾಯಗೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪಂತ್ ಅವರಿಗೆ ಜವಾಬ್ದಾರಿಯನ್ನು ವಹಿಸಲಾಯಿತು, ಆದರೆ ಪಂತ್ ನಾಯಕನಾಗಿ ಸತತ ಎರಡು ಪಂದ್ಯಗಳಲ್ಲಿ ಸೋಲನಭುವಿಸಬೇಕಾಯ್ತು. ಪಂತ್ ದಕ್ಷಿಣ ಆಫ್ರಿಕಾದ ಮೊದಲ T20 ಪಂದ್ಯದಲ್ಲಿ 29 ರನ್ ಗಳಿಸಿದರು, ಆದರೆ ಎರಡನೇ ಪಂದ್ಯದಲ್ಲಿ ಅವರ ಬ್ಯಾಟ್‌ನಲ್ಲಿ ಕೇವಲ 5 ರನ್​ಗಳು ಬಂದವು. ಆದರೆ 3ನೇ ಟಿ20ಯಲ್ಲಿ ಗೆಲುವಿನ ಖಾತೆ ತೆರೆಯುವ ಮೂಲಕ ಟೀಂ ಇಂಡಿಯಾ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಆದರೆ ಈ ಪಂದ್ಯದಲ್ಲೂ ಪಂತ್ ಅಬ್ಬರಿಸಲು ಸಾಧ್ಯವಾಗಲಿಲ್ಲ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ