ಏಕದಿನ ವಿಶ್ವಕಪ್ನ 44ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಇಂಗ್ಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ (84), ಜೋ ರೂಟ್ (60) ಹಾಗೂ ಜಾನಿ ಬೈರ್‌ಸ್ಟೋವ್ (59) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳೊಂದಿಗೆ ಇಂಗ್ಲೆಂಡ್ ತಂಡವು ನಿಗದಿತ 50 ಓವರ್ಗಳಲ್ಲಿ 337 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 43.3 ಓವರ್ಗಳಲ್ಲಿ 244 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ 93 ರನ್ಗಳ ಜಯ ಸಾಧಿಸಿ ಇಂಗ್ಲೆಂಡ್ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದೆ.
ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಹಾಗೂ ಇಂಗ್ಲೆಂಡ್ ತಂಡಗಳು ಇದುವರೆಗೆ 92 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಇಂಗ್ಲೆಂಡ್ 57 ಬಾರಿ ಜಯ ಸಾಧಿಸಿದರೆ, ಪಾಕಿಸ್ತಾನ್ 32 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು 3 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು.
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಗಸ್ ಅಟ್ಕಿನ್ಸನ್, ಆದಿಲ್ ರಶೀದ್.
ಪಾಕಿಸ್ತಾನ್ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಫಖರ್ ಝಮಾನ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್.
ಕ್ರಿಸ್ ವೋಕ್ಸ್ ಎಸೆದ 44ನೇ ಓವರ್ನ 3ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿದ್ದ ಬೆನ್ ಸ್ಟೋಕ್ಸ್ಗೆ ಕ್ಯಾಚ್ ನೀಡಿದ ಹ್ಯಾರಿಸ್ ರೌಫ್.
43.3 ಓವರ್ಗಳಲ್ಲಿ 244 ರನ್ಗಳಿಸಿ ಆಲೌಟ್ ಆದ ಪಾಕಿಸ್ತಾನ್.
93 ರನ್ಗಳ ಭರ್ಜರಿ ಜಯದೊಂದಿಗೆ ಏಕದಿನ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿದ ಇಂಗ್ಲೆಂಡ್.
ಡೇವಿಡ್ ವಿಲ್ಲಿ ಎಸೆದ 43ನೇ ಓವರ್ನಲ್ಲಿ ಮೂರು ಫೋರ್ ಬಾರಿಸಿ ಅಬ್ಬರಿಸಿದ ಹ್ಯಾರಿಸ್ ರೌಫ್.
ಕೊನೆಯ ವಿಕೆಟ್ಗೆ 31 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದ ಹ್ಯಾರಿಸ್ ರೌಫ್ ಹಾಗೂ ಮೊಹಮ್ಮದ್ ವಾಸಿಂ.
43 ಓವರ್ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 244 ರನ್ಗಳು.
ಗಸ್ ಅಟ್ಕಿನ್ಸನ್ ಎಸೆದ 40ನೇ ಓವರ್ನಲ್ಲಿ 2 ಸಿಕ್ಸ್ ಹಾಗೂ 1 ಫೋರ್ ಬಾರಿಸಿ ಅಬ್ಬರಿಸಿದ ಹ್ಯಾರಿಸ್ ರೌಫ್.
40 ಓವರ್ಗಳ ಮುಕ್ತಾಯದ ವೇಳೆಗೆ ಪಾಕ್ ತಂಡದ ಸ್ಕೋರ್ 209 ರನ್ಗಳು.
9 ವಿಕೆಟ್ ಕಬಳಿಸಿ ಗೆಲುವಿನತ್ತ ಸಾಗಿರುವ ಇಂಗ್ಲೆಂಡ್.
ಕ್ರೀಸ್ನಲ್ಲಿ ಹ್ಯಾರಿಸ್ ರೌಫ್ ಹಾಗೂ ಮೊಹಮ್ಮದ್ ವಾಸಿಂ ಬ್ಯಾಟಿಂಗ್.
42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಲ್ಮಾನ್ ಅಲಿ ಆಘಾ.
35 ಓವರ್ಗಳ ಮುಕ್ತಾಯದ ವೇಳೆಗೆ 174 ರನ್ ಕಲೆಹಾಕಿದ ಪಾಕಿಸ್ತಾನ್.
7 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಇಂಗ್ಲೆಂಡ್.
ಕ್ರೀಸ್ನಲ್ಲಿ ಶಾಹೀನ್ ಶಾ ಅಫ್ರಿದಿ ಹಾಗೂ ಸಲ್ಮಾನ್ ಅಲಿ ಆಘಾ ಬ್ಯಾಟಿಂಗ್.
ಆದಿಲ್ ರಶೀದ್ ಎಸೆದ 32ನೇ ಓವರ್ನ 4ನೇ ಎಸೆತದಲ್ಲಿ ಶಾದಾಬ್ ಖಾನ್ ಕ್ಲೀನ್ ಬೌಲ್ಡ್.
7 ಎಸೆತಗಳಲ್ಲಿ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶಾದಾಬ್ ಖಾನ್.
ಕ್ರೀಸ್ನಲ್ಲಿ ಶಾಹೀನ್ ಶಾ ಅಫ್ರಿದಿ ಹಾಗೂ ಸಲ್ಮಾನ್ ಅಲಿ ಆಘಾ ಬ್ಯಾಟಿಂಗ್.
ಮೊಯೀನ್ ಅಲಿ ಎಸೆದ 31ನೇ ಓವರ್ನ ಮೊದಲ ಎಸೆತದಲ್ಲೇ ಡೇವಿಡ್ ಮಲಾನ್ಗೆ ಕ್ಯಾಚ್ ನೀಡಿದ ಇಫ್ತಿಕರ್ ಅಹ್ಮದ್.
ಕೇವಲ 3 ರನ್ಗಳಿಸಿ ವಿಕೆಟ್ ಒಪ್ಪಿಸಿದ ಇಫ್ತಿಕರ್ ಅಹ್ಮದ್.
ಕ್ರೀಸ್ನಲ್ಲಿ ಶಾದಾಬ್ ಖಾನ್ ಹಾಗೂ ಸಲ್ಮಾನ್ ಅಲಿ ಆಘಾ ಬ್ಯಾಟಿಂಗ್.
ಆದಿಲ್ ರಶೀದ್ ಎಸೆದ 28ನೇ ಓವರ್ನ 5ನೇ ಎಸೆತದಲ್ಲಿ ಸೌದ್ ಶಕೀಲ್ ಕ್ಲೀನ್ ಬೌಲ್ಡ್.
37 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಸೌದ್ ಶಕೀಲ್.
ಕ್ರೀಸ್ನಲ್ಲಿ ಇಫ್ತಿಕರ್ ಅಹ್ಮದ್ ಹಾಗೂ ಸಲ್ಮಾನ್ ಅಲಿ ಆಘಾ ಬ್ಯಾಟಿಂಗ್.
25 ಓವರ್ಗಳ ಮುಕ್ತಾಯದ ವೇಳೆಗೆ ಪಾಕಿಸ್ತಾನ್ ತಂಡದ ಸ್ಕೋರ್ 108 ರನ್ಗಳು.
4 ವಿಕೆಟ್ ಕಬಳಿಸಿರುವ ಇಂಗ್ಲೆಂಡ್ ಬೌಲರ್ಗಳು.
ಕ್ರೀಸ್ನಲ್ಲಿ ಸೌದ್ ಶಕೀಲ್ ಹಾಗೂ ಸಲ್ಮಾನ್ ಅಲಿ ಆಘಾ ಬ್ಯಾಟಿಂಗ್.
ಅಬ್ದುಲ್ಲಾ ಶಫೀಕ್ (0), ಫಖರ್ ಝಮಾನ್ (1), ಬಾಬರ್ ಆಝಂ (38) ಹಾಗೂ ಮೊಹಮ್ಮದ್ ರಿಝ್ವಾನ್ (36) ಔಟ್.
ಸ್ಪಿನ್ನರ್ ಮೊಯೀನ್ ಅಲಿ ಎಸೆದ 23ನೇ ಓವರ್ನ 3ನೇ ಎಸೆತದಲ್ಲಿ ಮೊಹಮ್ಮದ್ ರಿಝ್ವಾನ್ ಕ್ಲೀನ್ ಬೌಲ್ಡ್.
51 ಎಸೆತಗಳಲ್ಲಿ 36 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮೊಹಮ್ಮದ್ ರಿಝ್ವಾನ್.
ಕ್ರೀಸ್ನಲ್ಲಿ ಸೌದ್ ಶಕೀಲ್ ಹಾಗೂ ಸಲ್ಮಾನ್ ಅಲಿ ಆಘಾ ಬ್ಯಾಟಿಂಗ್.
22 ಓವರ್ಗಳಲ್ಲಿ 100 ರನ್ ಪೂರೈಸಿದ ಪಾಕಿಸ್ತಾನ್ ತಂಡ.
3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಇಂಗ್ಲೆಂಡ್ ಬೌಲರ್ಗಳು.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಸೌದ್ ಶಕೀಲ್ (22) ಹಾಗೂ ಬಲಗೈ ಬ್ಯಾಟರ್ ಮೊಹಮ್ಮದ್ ರಿಝ್ವಾನ್ (36) ಬ್ಯಾಟಿಂಗ್.
20 ಓವರ್ಗಳಲ್ಲಿ ಕೇವಲ 89 ರನ್ ನೀಡಿದ ಇಂಗ್ಲೆಂಡ್ ಬೌಲರ್ಗಳು.
3 ವಿಕೆಟ್ ಕಳೆದುಕೊಂಡು ನಿಧಾನಗತಿಯ ಬ್ಯಾಟಿಂಗ್ ಮುಂದುವರೆಸಿರುವ ಪಾಕಿಸ್ತಾನ್.
ಕ್ರೀಸ್ನಲ್ಲಿ ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
ಅಬ್ದುಲ್ಲಾ ಶಫೀಕ್ (0), ಫಖರ್ ಝಮಾನ್ (1) ಹಾಗೂ ಬಾಬರ್ ಆಝಂ (38) ಔಟ್.
15 ಓವರ್ಗಳಲ್ಲಿ 62 ರನ್ ಕಲೆಹಾಕಿದ ಪಾಕಿಸ್ತಾನ್ ಬ್ಯಾಟರ್ಗಳು.
3 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಇಂಗ್ಲೆಂಡ್ ಬೌಲರ್ಗಳು.
ಕ್ರೀಸ್ನಲ್ಲಿ ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
ಅಬ್ದುಲ್ಲಾ ಶಫೀಕ್ (0), ಫಖರ್ ಝಮಾನ್ (1) ಹಾಗೂ ಬಾಬರ್ ಆಝಂ (38) ಔಟ್.
ಗಸ್ ಅಟ್ಕಿನ್ಸನ್ ಎಸೆದ 14ನೇ ಓವರ್ನ ಕೊನೆಯ ಎಸೆತದಲ್ಲಿ ಆದಿಲ್ ರಶೀದ್ಗೆ ಕ್ಯಾಚ್ ನೀಡಿದ ಬಾಬರ್ ಆಝಂ.
45 ಎಸೆತಗಳಲ್ಲಿ 38 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಪಾಕ್ ತಂಡದ ನಾಯಕ ಬಾಬರ್.
ಕ್ರೀಸ್ನಲ್ಲಿ ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
12 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಅರ್ಧಶತಕ ಪೂರೈಸಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಬಲಗೈ ಬ್ಯಾಟರ್ಗಳಾದ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
ಪಾಕ್ ತಂಡದ ಆರಂಭಿಕರಾದ ಅಬ್ದುಲ್ಲಾ ಶಫೀಕ್ (0) ಹಾಗೂ ಫಖರ್ ಝಮಾನ್ (1) ಔಟ್.
ಈ ಪಂದ್ಯದಲ್ಲಿ 6.4 ಓವರ್ಗಳಲ್ಲಿ 338 ರನ್ಗಳಿಸಿದರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್ಗೇರಲು ಅವಕಾಶವಿತ್ತು. ಆದರೆ ಪಾಕಿಸ್ತಾನ್ ತಂಡ ಮೊದಲ 10 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 43 ರನ್ಗಳು ಮಾತ್ರ. ಇದರೊಂದಿಗೆ ಏಕದಿನ ವಿಶ್ವಕಪ್ ರೇಸ್ನಿಂದ ಬಾಬರ್ ಪಡೆ ಹೊರಬಿದ್ದಂತಾಗಿದೆ.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
5 ಓವರ್ಗಳ ಮುಕ್ತಾಯದ ವೇಳೆಗೆ ಕೇವಲ 18 ರನ್ ಕಲೆಹಾಕಿದ ಪಾಕಿಸ್ತಾನ್
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
ಪಾಕ್ ತಂಡದ ಆರಂಭಿಕರಾದ ಅಬ್ದುಲ್ಲಾ ಶಫೀಕ್ (0) ಹಾಗೂ ಫಖರ್ ಝಮಾನ್ (1) ಔಟ್.
ಪಾಕಿಸ್ತಾನ್ ತಂಡ ಸೆಮಿಫೈನಲ್ಗೇರಲು 6.4 ಓವರ್ಗಳಲ್ಲಿ 338 ರನ್ಗಳಿಸಬೇಕು.
ಡೇವಿಡ್ ವಿಲ್ಲಿ ಎಸೆದ 3ನೇ ಓವರ್ನ 4ನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ಗೆ ಸುಲಭ ಕ್ಯಾಚ್ ನೀಡಿದ ಫಖರ್ ಝಮಾನ್.
9 ಎಸೆತಗಳನ್ನು ಎದುರಿಸಿ ಕೇವಲ 1 ರನ್ಗಳಿಸಿ ಔಟಾದ ಫಖರ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
ಡೇವಿಡ್ ವಿಲ್ಲಿ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಅಬ್ದುಲ್ಲಾ ಶಫೀಕ್ (0).
5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಬಾಬರ್ ಆಝಂ.
ಕೊನೆಯ ಎಸೆತದಲ್ಲಿ ಬಾಬರ್ ಬ್ಯಾಟ್ನಿಂದ ಮತ್ತೊಂದು ಫೋರ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಫಖರ್ ಝಮಾನ್ ಬ್ಯಾಟಿಂಗ್.
ಪಾಕಿಸ್ತಾನ್ ತಂಡ ಈ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ಗೇರಲು 6.4 ಓವರ್ಗಳಲ್ಲಿ 338 ರನ್ಗಳಿಸಬೇಕು.
ಮೊಹಮ್ಮದ್ ವಾಸಿಂ ಎಸೆದ 50ನೇ ಓವರ್ನ ಕೊನೆಯ ಓವರ್ನಲ್ಲಿ ಫೋರ್, ಸಿಕ್ಸ್ ಹಾಗೂ ಫೋರ್ ಬಾರಿಸಿದ ಡೇವಿಡ್ ವಿಲ್ಲಿ.
50 ಓವರ್ಗಳಲ್ಲಿ 337 ರನ್ ಕಲೆಹಾಕಿದ ಇಂಗ್ಲೆಂಡ್.
ಪಾಕಿಸ್ತಾನ್ ತಂಡಕ್ಕೆ 338 ರನ್ಗಳ ಕಠಿಣ ಗುರಿ ನೀಡಿದ ಇಂಗ್ಲೆಂಡ್.
ಹ್ಯಾರಿಸ್ ರೌಫ್ ಎಸೆದ 49ನೇ ಓವರ್ನ 4ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಮೊಯೀನ್ ಅಲಿ.
6 ಎಸೆತಗಳಲ್ಲಿ ಕೇವಲ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಮೊಯೀನ್ ಅಲಿ.
ಕ್ರೀಸ್ನಲ್ಲಿ ಡೇವಿಡ್ ವಿಲ್ಲಿ ಹಾಗೂ ಕ್ರಿಸ್ ವೋಕ್ಸ್ ಬ್ಯಾಟಿಂಗ್.
48ನೇ ಓವರ್ನ 2ನೇ ಎಸೆತದಲ್ಲಿ ರನ್ ಕದಿಯುವ ಯತ್ನದಲ್ಲಿ ರನೌಟ್ ಆದ ಜೋಸ್ ಬಟ್ಲರ್ (27). ಹ್ಯಾರಿಸ್ ರೌಫ್ ಎಸೆದ ಡೈರೆಕ್ಟ್ ಥ್ರೋಗೆ ಬಲಿಯಾದ ಇಂಗ್ಲೆಂಡ್ ತಂಡದ ನಾಯಕ.
ವಾಸಿಂ ಜೂನಿಯರ್ ಎಸೆದ 48ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮೊಯೀನ್ ಅಲಿ.
ಕ್ರೀಸ್ನಲ್ಲಿ ಮೊಯೀನ್ ಹಾಗೂ ಕ್ರಿಸ್ ವೋಕ್ಸ್ ಬ್ಯಾಟಿಂಗ್.
ಹ್ಯಾರಿಸ್ ರೌಫ್ ಎಸೆದ 47ನೇ ಓವರ್ನ 4ನೇ ಎಸೆತದಲ್ಲಿ ಮಿಡ್ ಆನ್ನಲ್ಲಿ ಫೀಲ್ಡಿಂಗ್ನಲ್ಲಿ ಶಾಹೀನ್ ಅಫ್ರಿದಿಗೆ ಕ್ಯಾಚ್ ನೀಡಿದ ಹ್ಯಾರಿ ಬ್ರೂಕ್.
17 ಎಸೆತಗಳಲ್ಲಿ 30 ರನ್ ಬಾರಿಸಿ ನಿರ್ಗಮಿಸಿದ ಹ್ಯಾರಿ ಬ್ರೂಕ್.
47 ಓವರ್ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 304 ರನ್ಗಳು.
ಕ್ರೀಸ್ನಲ್ಲಿ ಮೊಯೀನ್ ಅಲಿ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
45 ಓವರ್ಗಳ ಮುಕ್ತಾಯದ ವೇಳೆಗೆ 290 ರನ್ ಕಲೆಹಾಕಿದ ಇಂಗ್ಲೆಂಡ್.
ಕೊನೆಯ 5 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
ಜಾನಿ ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್ ಹಾಗೂ ಡೇವಿಡ್ ಮಲಾನ್ ಔಟ್.
ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ ಎಸೆದ 43ನೇ ಓವರ್ನ 2ನೇ ಎಸೆತದಲ್ಲಿ ಸ್ಕ್ವೇರ್ನತ್ತ ಶಾದಾಬ್ ಖಾನ್ ಹಿಡಿದ ಉತ್ತಮ ಕ್ಯಾಚ್ಗೆ ಬಲಿಯಾದ ಜೋ ರೂಟ್.
72 ಎಸೆತಗಳಲ್ಲಿ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಜೋ ರೂಟ್.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
ಶಾಹೀನ್ ಶಾ ಅಫ್ರಿದಿ ಎಸೆದ 41ನೇ ಓವರ್ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದ ಬೆನ್ ಸ್ಟೋಕ್ಸ್.
76 ಎಸೆತಗಳಲ್ಲಿ 84 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಸ್ಟೋಕ್ಸ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
40 ಓವರ್ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 240 ರನ್ಗಳು.
75 ಎಸೆತಗಳಲ್ಲಿ 84 ರನ್ಗಳೊಂದಿಗೆ ಶತಕದತ್ತ ಮುನ್ನುಗ್ಗುತ್ತಿರುವ ಎಡಗೈ ದಾಂಡಿಗ ಬೆನ್ ಸ್ಟೋಕ್ಸ್.
65 ಎಸೆತಗಳಲ್ಲಿ 51 ರನ್ ಬಾರಿಸಿ ಉತ್ತಮ ಸಾಥ್ ನೀಡುತ್ತಿರುವ ಬಲಗೈ ಬ್ಯಾಟರ್ ಜೋ ರೂಟ್.
ಜಾನಿ ಬೈರ್‌ಸ್ಟೋವ್ (59) ಹಾಗೂ ಡೇವಿಡ್ ಮಲಾನ್ (31) ಔಟ್.
ಮೊಹಮ್ಮದ್ ವಾಸಿಂ ಎಸೆದ 35ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಬೆನ್ ಸ್ಟೋಕ್ಸ್.
35 ಓವರ್ಗಳ ಮುಕ್ತಾಯದ ವೇಳೆಗೆ 204 ರನ್ ಕಲೆಹಾಕಿದ ಇಂಗ್ಲೆಂಡ್.
3ನೇ ವಿಕೆಟ್ಗೆ 96 ರನ್ಗಳ ಭರ್ಜರಿ ಜೊತೆಯಾಟ ಮುಂದುವರೆಸಿರುವ ಬೆನ್ ಸ್ಟೋಕ್ಸ್- ಜೋ ರೂಟ್.
ಸ್ಪಿನ್ನರ್ ಅಘಾ ಸಲ್ಮಾನ್ ಎಸೆದ 34ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಬೆನ್ ಸ್ಟೋಕ್ಸ್.
ಈ ಫೋರ್ನೊಂದಿಗೆ 53 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬೆನ್ ಸ್ಟೋಕ್ಸ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ 170 ರನ್ ಕಲೆಹಾಕಿದ ಇಂಗ್ಲೆಂಡ್.
2 ವಿಕೆಟ್ ಕಬಳಿಸುವಲ್ಲಿ ಮಾತ್ರ ಯಶಸ್ವಿಯಾಗಿರುವ ಪಾಕಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ಜೋ ರೂಟ್ (31) ಹಾಗೂ ಬೆನ್ ಸ್ಟೋಕ್ಸ್ (34) ಬ್ಯಾಟಿಂಗ್.
ಜಾನಿ ಬೈರ್‌ಸ್ಟೋವ್ (59) ಹಾಗೂ ಡೇವಿಡ್ ಮಲಾನ್ (31) ಔಟ್.
ಎಡಗೈ ವೇಗಿ ಶಾಹೀನ್ ಅಫ್ರಿದಿ ಎಸೆದ 27ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಮಿಡ್ ಆನ್ನತ್ತ ಫೋರ್ ಬಾರಿಸಿದ ಬೆನ್ ಸ್ಟೋಕ್ಸ್.
ಈ ಫೋರ್ನೊಂದಿಗೆ 150 ರನ್ಗಳ ಗಡಿದಾಟಿದ ಇಂಗ್ಲೆಂಡ್ ತಂಡದ ಸ್ಕೋರ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್.
ಶಾಹೀನ್ ಶಾ ಅಫ್ರಿದಿ ಎಸೆದ 25ನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಬೆನ್ ಸ್ಟೋಕ್ಸ್.
25 ಓವರ್ಗಳ ಮುಕ್ತಾಯದ ವೇಳೆಗೆ 140 ರನ್ ಕಲೆಹಾಕಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್.
ಜಾನಿ ಬೈರ್‌ಸ್ಟೋವ್ ಹಾಗೂ ಡೇವಿಡ್ ಮಲಾನ್ ಔಟ್.
20 ಓವರ್ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 112 ರನ್ಗಳು.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್.
ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ಡೇವಿಡ್ ಮಲಾನ್ (31) ಹಾಗೂ ಜಾನಿ ಬೈರ್‌ಸ್ಟೋವ್ (59) ಔಟ್.
ಹ್ಯಾರಿಸ್ ರೌಫ್ ಎಸೆದ 19ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಆಫ್ ಸೈಡ್ ಫ್ರಂಟ್ ಫೀಲ್ಡರ್ ಅಘಾ ಸಲ್ಮಾನ್ಗೆ ಕ್ಯಾಚ್ ನೀಡಿದ ಜಾನಿ ಬೈರ್‌ಸ್ಟೋವ್.
61 ಎಸೆತಗಳಲ್ಲಿ 59 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್.
15 ಓವರ್ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 90 ರನ್ಗಳು.
1 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಪಾಕಿಸ್ತಾನ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಇಂಗ್ಲೆಂಡ್ ಆರಂಭಿಕ ಆಟಗಾರ ಡೇವಿಡ್ ಮಲಾನ್ (31) ಔಟ್.
ಸ್ಪಿನ್ನರ್ ಇಫ್ತಿಕರ್ ಅಹ್ಮದ್ ಎಸೆದ 14ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ಗೆ ಕ್ಯಾಚ್ ನೀಡಿದ ಡೇವಿಡ್ ಮಲಾನ್.
39 ಎಸೆತಗಳಲ್ಲಿ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ತಂಡದ ಎಡಗೈ ಆರಂಭಿಕ ಆಟಗಾರ ಮಲಾನ್.
13 ಓವರ್ಗಳಲ್ಲಿ 82 ರನ್ಗಳ ಜೊತೆಯಾಟವಾಡಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ಜಾನಿ ಬೈರ್‌ಸ್ಟೋವ್ ಹಾಗೂ ಡೇವಿಡ್ ಮಲಾನ್.
ಮೊದಲ ವಿಕೆಟ್ ಗಾಗಿ ಪಾಕಿಸ್ತಾನ್ ಬೌಲರ್ಗಳ ಹರಸಾಹಸ.
ಇದು ಉಭಯ ತಂಡಗಳ ಕೊನೆಯ ಲೀಗ್ ಪಂದ್ಯ.
10 ಓವರ್ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 72 ರನ್ಗಳು.
ಯಾವುದೇ ವಿಕೆಟ್ ಪಡೆಯಲು ಯಶಸ್ವಿಯಾಗದ ಪಾಕ್ ಬೌಲರ್ಗಳು.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್.
ಸ್ಪಿನ್ನರ್ ಇಫ್ತಿಕರ್ ಅಹ್ಮದ್ ಎಸೆದ 8ನೇ ಓವರ್ನ ಮೊದಲ ಎಸೆತದಲ್ಲೇ ಲಾಂಗ್ ಆಫ್ನತ್ತ ಫೋರ್ ಬಾರಿಸಿದ ಜಾನಿ ಬೈರ್‌ಸ್ಟೋವ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಶಾಹೀನ್ ಶಾ ಅಫ್ರಿದಿ ಎಸೆದ 7ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜಾನಿ ಬೈರ್‌ಸ್ಟೋವ್.
ಕ್ರೀಸ್ ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಶಾಹೀನ್ ಶಾ ಅಫ್ರಿದಿ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಪುಲ್ ಶಾಟ್ ಫೋರ್ ಬಾರಿಸಿದ ಜಾನಿ ಬೈರ್‌ಸ್ಟೋವ್.
5 ಓವರ್ಗಳಲ್ಲಿ 26 ರನ್ ಕಲೆಹಾಕಿದ ಇಂಗ್ಲೆಂಡ್ ತಂಡದ ಆರಂಭಿಕರು.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಹ್ಯಾರಿಸ್ ರೌಫ್ ಎಸೆದ 4ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಜಾನಿ ಬೈರ್‌ಸ್ಟೋವ್.
4ನೇ ಎಸೆತದಲ್ಲಿ ಬೈರ್‌ಸ್ಟೋವ್ ಬ್ಯಾಟ್ನಿಂದ ಫೈನ್ ಲೆಗ್ನತ್ತ ಮತ್ತೊಂದು ಫೋರ್.
ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ಡೇವಿಡ್ ಮಲಾನ್.
3ನೇ ಓವರ್ನಲ್ಲಿ ಕೇವಲ 2 ರನ್ ಮಾತ್ರ ನೀಡಿದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ.
ಪಾಕ್ ಬೌಲರ್ ಗಳಿಂದ ಉತ್ತಮ ಆರಂಭ.
ಕ್ರೀಸ್ ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ವಿಚಾರ ಸಂಬಂಧ ಸಚಿವ ಹೆಚ್.ಕೆ.ಪಾಟೀಲ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಿಂದ ಕಾಂಗ್ರೆಸ್ಗೆ ಏನೂ ಎಫೆಕ್ಟ್ ಆಗಲ್ಲ. ನೇಮಕ ಮಾಡೋಕೆ ಇಷ್ಟು ವರ್ಷವಾಯ್ತು, ನಮಗೇನು ಎಫೆಕ್ಟ್ ಆಗ್ತದೆ. ಕಾಂಗ್ರೆಸ್ ಸಂಘಟನೆ ಗಟ್ಟಿಯಾಗಿದೆ, ಗ್ಯಾರಂಟಿಯನ್ನು ಜನ ನೋಡಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಬಿಜೆಪಿ ಸಂಪೂರ್ಣ ತತ್ತರಿಸಿ ಹೋಗಿದೆ. ಬಿಜೆಪಿಯವರಿಗೆ ನಡುಕ ಶುರುವಾಗಿದೆ ಎಂದರು.
ಹ್ಯಾರಿಸ್ ರೌಫ್ ಎಸೆದ 2ನೇ ಓವರ್ನ ಮೊದಲ ಎಸೆತ ವೈಡ್…ವಿಕೆಟ್ ಕೀಪರ್ನ ವಂಚಿಸಿ ಚೆಂಡು ನೇರವಾಗಿ ಬೌಂಡರಿಗೆ…ಫೋರ್.
ಇದು ಇಂಗ್ಲೆಂಡ್ ತಂಡದ ಮೊದಲ ಬೌಂಡರಿ ರನ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಮೊದಲ ಓವರ್ ಅನ್ನು ಮೇಡನ್ ಮಾಡಿದ ಪಾಕ್ ತಂಡದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್.
ಪಾಕಿಸ್ತಾನ್ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಫಖರ್ ಝಮಾನ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್.
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಗುಸ್ ಅಟ್ಕಿನ್ಸನ್, ಆದಿಲ್ ರಶೀದ್.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Sat, 11 November 23