ತನ್ನ BMW ಕಾರಿಗೆ ಧೋನಿಯ ಆಟೋಗ್ರಾಫ್ ಹಾಕಿಸಿಕೊಂಡ ಅಭಿಮಾನಿ: ವಿಡಿಯೋ ವೈರಲ್
MS Dhoni special autograph: ಅಭಿಷೇಕ್ ಎಂಬವರು ತಮ್ಮ BMW 740i ಸರಣಿಯಲ್ಲಿ ಧೋನಿಯ ಆಟೋಗ್ರಾಫ್ ಕೇಳಿದ್ದಾರೆ. ಇದಕ್ಕೆ ಒಕೆ ಎಂದ ಧೋನಿ ಐಷಾರಾಮಿ ಕಾರಿನ ಒಳಗೆ ಪ್ರವೇಶಿಸಿ ಹಿಂದಿನ ಸೀಟಿನಲ್ಲಿ ಸಹಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಅಭಿಮಾನಿಗಳನ್ನು ಎಂದೂ ಕಡೆಗಣಿಸಿದವರಲ್ಲ. ಫ್ಯಾನ್ಸ್ ಬಂದು ಫೋಟೋ, ಆಟೋಗ್ರಾಫ್ ಕೇಳಿದರೆ ಅಹಂ ತೋರದೆ ನಯವಾಗಿ ಅಭಿಮಾನಿಗಳ ಆಸೆಯನ್ನು ಪೂರೈಸುತ್ತಾರೆ. ಈ ಬಾರಿ ಅದೃಷ್ಟಶಾಲಿ ವ್ಯಕ್ತಿ ಅಭಿಷೇಕ್ ಕೆರ್ಕೆಟ್ಟಾ ಎಂಬವರು ಧೋನಿ ಬಳಿ ವಿಶೇಷವಾದ ಆಟೋಗ್ರಾಫ್ಗೆ ಬೇಡಿಕೆಯಿಟ್ಟರು. ಇದನ್ನು ಧೋನಿ ಯಾವುದೇ ಸಂಕೋಚವಿಲ್ಲದೆ ಈಡೇರಿಸಿದ್ದಾರೆ. ಅಭಿಷೇಕ್ ಎಂಬವರು ತಮ್ಮ BMW 740i ಸರಣಿಯಲ್ಲಿ ಧೋನಿಯ ಆಟೋಗ್ರಾಫ್ ಕೇಳಿದ್ದಾರೆ. ಇದಕ್ಕೆ ಒಕೆ ಎಂದ ಧೋನಿ ಐಷಾರಾಮಿ ಕಾರಿನ ಒಳಗೆ ಪ್ರವೇಶಿಸಿ ಹಿಂದಿನ ಸೀಟಿನಲ್ಲಿ ಸಹಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ಸದ್ಯ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಗೆ ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ಜಿಮ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಧೋನಿ ಅವರು ಜಿಮ್ನಲ್ಲಿ ತನ್ನ ಗೆಳೆಯನ ಹುಟ್ಟುಹಬ್ಬ ಆಚರಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ