ಎಂಬಿ ಪಾಟೀಲ್ಗೆ ಸಂತಸವಾಗಿರೋದು ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಕ್ಕಾ ಅಥವಾ ಬಸನಗೌಡ ಯತ್ನಾಳ್ರನ್ನು ಕಡೆಗಣಿಸಿದ್ದಕ್ಕಾ?
ಒಬ್ಬ ಲಿಂಗಾಯತ ನಾಯಕ ಬಿಜೆಪಿ ರಾಜ್ಯಾಧ್ಯಕ್ಷನಾಗಿರುವುದು ಪಾಟೀಲ್ ಗೆ ಸಂತಸವಾಗಿರಬಹುದು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹುದ್ದೆಗೆ ಪರಿಗಣಿಸದಿರೋದು ಅದಕ್ಕಿಂತಲೂ ಹೆಚ್ಚಿನ ಸಂತಸ ನೀಡಿರಬಹುದು! ಬೋಕೆ ಮತ್ತು ಸ್ವೀಟ್ ಬಾಕ್ಸ್ ಗಳೊಂದಿಗೆ ಒಳಗಡೆ ಹೋಗುವ ಪಾಟೀಲ್ ಹೊರಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (BS Yediyurappa) ಬೆಂಗಳೂರು ನಿವಾಸ ಚಟುವಟಿಕೆಯ ಕೇಂದ್ರವಾಗಿದೆ ಮಾರಾಯ್ರೇ. ಅದು ಸಹಜ ತಾನೆ? ಪ್ರಾಯಶಃ ಹಿರಿಯ ನಾಯಕ ತಾವಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಅವರ ಹಿರಿಮಗ ಬಿವೈ ವಿಜಯೇಂದ್ರರನ್ನು (BY Vijayendra) ರಾಜ್ಯ ಬಿಜೆಪಿ ಘಟಕ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ಹೈಕಮಾಂಡ್ ನೇಮಕ ಮಾಡಿದ್ದು ಯಡಿಯೂರಪ್ಪನವರ ರಾಜಕೀಯ ತಂತ್ರಗಾರಿಕೆಗೆ ಪ್ರಮಾಣವಾಗಿದೆ. ಕಾಂಗ್ರೆಸ್ ನಾಯಕ ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಂಬಿ ಪಾಟೀಲ್ (MB Patil) ಇಂದು ಬೆಳಗ್ಗೆ ಯಡಿಯೂರಪ್ಪ ಮನೆಗೆ ಆಗಮಿಸಿ ಅವರನ್ನು ಅಭಿನಂದಿಸಿದರು. ಒಬ್ಬ ಲಿಂಗಾಯತ ನಾಯಕ ಬಿಜೆಪಿ ರಾಜ್ಯಾಧ್ಯಕ್ಷನಾಗಿರುವುದು ಪಾಟೀಲ್ ಗೆ ಸಂತಸವಾಗಿರಬಹುದು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹುದ್ದೆಗೆ ಪರಿಗಣಿಸದಿರೋದು ಅದಕ್ಕಿಂತಲೂ ಹೆಚ್ಚಿನ ಸಂತಸ ನೀಡಿರಬಹುದು! ಬೋಕೆ ಮತ್ತು ಸ್ವೀಟ್ ಬಾಕ್ಸ್ ಗಳೊಂದಿಗೆ ಒಳಗಡೆ ಹೋಗುವ ಪಾಟೀಲ್ ಹೊರಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಾರೆ. ಬೇಡ ಬೇಡ ಅನ್ನುತ್ತಾ ಕಾರು ಹತ್ತಿ ಹೊರಟುಬಿಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ