ವಿಜಯಪುರ: ಸಿದ್ದೇಶ್ವರ ಶ್ರೀ ಅಗಲಿ ಜನವರಿ 2ಕ್ಕೆ 1 ವರ್ಷ: ಗುರುವಂದನಾ ಕಾರ್ಯಕ್ರಮ ಆಯೋಜಿಸಲು ತೀರ್ಮಾನ; ಎಂಬಿ ಪಾಟೀಲ್​

ಶ್ರೀಗಳ ಅಂತಿಮ ವಿದಾಯ ಪತ್ರದ ಆಶಯದಂತೆ ಸಕಲ ಕಾರ್ಯಕ್ರಮಗಳು ನಡೆಯಲಿವೆ. ಗುರುವಂದನಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮೀಣ ಭಾಗದಲ್ಲಿ ಹಾಗೂ ವಿಜಯಪುರ ನಗರದ ಪ್ರತಿ ವಾರ್ಡ್​ಗಳಲ್ಲಿ ಶ್ರೀಗಳ ಸ್ಮರಣಾರ್ಥ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಶ್ರೀಗಳ ಸಾಹಿತ್ಯ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್​ ಹೇಳಿದರು.

ವಿಜಯಪುರ: ಸಿದ್ದೇಶ್ವರ ಶ್ರೀ ಅಗಲಿ ಜನವರಿ 2ಕ್ಕೆ 1 ವರ್ಷ: ಗುರುವಂದನಾ ಕಾರ್ಯಕ್ರಮ ಆಯೋಜಿಸಲು ತೀರ್ಮಾನ; ಎಂಬಿ ಪಾಟೀಲ್​
ಸಿದ್ದೇಶ್ವರ ಸ್ವಾಮೀಜಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 02, 2023 | 2:28 PM

ವಿಜಯಪುರ ನ.02: ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು (Siddeshwar Swamiji) ನಮ್ಮನ್ನು ಅಗಲಿ ಮುಂಬರುವ ಜನವರಿ 2ಕ್ಕೆ ಒಂದು ವರ್ಷವಾಗುತ್ತದೆ. ಈ ಹಿನ್ನಲೆ ಗುರುವಂದನಾ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ (MB Patil)​​ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹಾಗೂ ಆಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮುಂಬರುವ ಜನೆವರಿ 1 ಹಾಗೂ 2ರಂದು ಗುರುವಂದನಾ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಶ್ರೀಗಳ ಅಂತಿಮ ವಿದಾಯ ಪತ್ರದ ಆಶಯದಂತೆ ಸಕಲ ಕಾರ್ಯಕ್ರಮಗಳು ನಡೆಯಲಿವೆ. ಗುರುವಂದನಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮೀಣ ಭಾಗದಲ್ಲಿ ಹಾಗೂ ವಿಜಯಪುರ ನಗರದ ಪ್ರತಿ ವಾರ್ಡ್​ಗಳಲ್ಲಿ ಶ್ರೀಗಳ ಸ್ಮರಣಾರ್ಥ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಶ್ರೀಗಳ ಸಾಹಿತ್ಯ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದರು.

ಇದನ್ನೂ ಓದಿ: Siddeshwar swamiji: ಸರಳತೆಯ ಸಂತ ಸಿದ್ದೇಶ್ವರ ಸ್ವಾಮೀಜಿ ಕಾವಿ ಏಕೆ ಧರಿಸಲಿಲ್ಲ? ಶ್ರೀಗಳಿಗೂ ಇತ್ತು ಗದಗನ ಶಿವಾನಂದ ಮಠದ ನಂಟು

ಜನವರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ಸ್ವಾಮೀಜಿಗಳು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಮೈಸೂರಿನ ಸುತ್ತೂರು ಮಠದ ಶ್ರೀಗಳು ಹಾಗೂ ಮಹಾರಾಷ್ಟ್ರದ ಕನ್ಹೇರಿ ಮಠದ ಸ್ವಾಮೀಜಿಗಳ ಸಲಹೆಯಂತೆ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Thu, 2 November 23