ಇಂಗ್ಲೆಂಡ್​ಗೆ ಆಘಾತ, ಭಾರತ ವಿರುದ್ಧ ನಡೆಯುವ ಸರಣಿಯಿಂದ ಹಿಂದೆ ಸರಿದ ಸ್ಟಾರ್ ಆಲ್-ರೌಂಡರ್ ಬೆನ್ ಸ್ಟೋಕ್ಸ್!

ತಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್ನಲ್ಲಿ ಆರಂಭಗೊಳ್ಳುವ ಇಂಡಿಯ ವಿರುದ್ಧದ 5-ಪಂದ್ಯಗಳ ಟೆಸ್ಟ್ ಸರಣಿಯಿಂದ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿರುವ ಈಸಿಬಿ ಅವರ ಸ್ಥಾನವನ್ನು ಸಾಮರ್ಸೆಟ್ನ ಕ್ರೇಗ್ ಒವರ್ಟನ್ ತೆಗೆದುಕೊಳ್ಳಲಿದ್ದಾರೆ ಎಂದಿದೆ.

ಇಂಗ್ಲೆಂಡ್​ಗೆ ಆಘಾತ, ಭಾರತ ವಿರುದ್ಧ ನಡೆಯುವ ಸರಣಿಯಿಂದ ಹಿಂದೆ ಸರಿದ ಸ್ಟಾರ್ ಆಲ್-ರೌಂಡರ್ ಬೆನ್ ಸ್ಟೋಕ್ಸ್!
ಬೆನ್ ಸ್ಟೋಕ್ಸ್
TV9kannada Web Team

| Edited By: Arun Belly

Jul 31, 2021 | 1:05 AM

ಇದೊಂದು ಅನಿರೀಕ್ಷಿತ ಮತ್ತು ಇಂಗ್ಲೆಂಡ್ ಮಟ್ಟಿಗೆ ಹೇಳುವುದಾದರೆ ಆಘಾತಕಾರಿ ಬೆಳವಣಿಗೆ. ವಿಶ್ವದ ಅಗ್ರಮಾನ್ಯ ಆಲ್-ರೌಂಡರ್ ಮತ್ತು ಆಗಸ್ಟ್ 4ರಿಂದ ಭಾರತದ ವಿರುದ್ಧ ಆರಂಭವಾಗಲಿರುವ 5-ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿಥೇಯರ ಪರ ಮ್ಯಾಚ್ ವಿನ್ನರ್ ಅಗಬಹುದಾಗಿದ್ದ ಬೆನ್ ಸ್ಟೋಕ್ಸ್ ಅವರು ತಕ್ಷಣವೇ ಕ್ರಿಕೆಟ್ನ ಎಲ್ಲ ಆವೃತ್ತಿಗಳಿಂದ ಅನಿರ್ದಿಷ್ಟಾವಧಿಯವರೆಗೆ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿರುವರೆಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಈಸಿಬಿ) ಹೇಳಿದೆ.

ತಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್ನಲ್ಲಿ ಆರಂಭಗೊಳ್ಳುವ ಇಂಡಿಯ ವಿರುದ್ಧದ 5-ಪಂದ್ಯಗಳ ಟೆಸ್ಟ್ ಸರಣಿಯಿಂದ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿರುವ ಈಸಿಬಿ ಅವರ ಸ್ಥಾನವನ್ನು ಸಾಮರ್ಸೆಟ್ನ ಕ್ರೇಗ್ ಒವರ್ಟನ್ ತೆಗೆದುಕೊಳ್ಳಲಿದ್ದಾರೆ ಎಂದಿದೆ.

‘ತಮ್ಮ ಮಾನಸಿಕ ಅರೋಗ್ಯಕ್ಕೆ ಪ್ರಧಾನ್ಯತೆ ನೀಡಲು ಮತ್ತು ತೋರು ಬೆರಳಿಗಾಗಿರುವ ಗಾಯಕ್ಕೆ ಸಾಕಷ್ಟು ವಿಶ್ರಾಂತಿ ನೀಡಲು ಮುಂದಿನ ವಾರದಿಂದ ಇಂಡಿಯ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಇಂಗ್ಲೆಂಡ್ ತಂಡದಿಂದ ಬೆನ್ ಸ್ಟೋಕ್ಸ್ ಅವರು ಹಿಂದೆ ಸರಿದಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್ಗೆ ಅವರು ವಾಪಸ್ಸಾಗಿದ್ದರಾದರೂ, ಅವರ ಬೆರಳಿನ ಗಾಯ ಸಂಪೂರ್ಣವಾಗಿ ವಾಸಿಯಾಗಿಲ್ಲ,’ ಎಂದು ಈಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಬೆನ್ ಅವರು ನಿರ್ಧಾರವನ್ನು ಈಸಿಬಿ ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ಅವರು ಕ್ರೀಡೆಯಿಂದ ದೂರ ಇರುವ ಅವಧಿಯಲ್ಲೂ ಅವರಿಗೆ ಸಹಾಯವನ್ನು ಮುಂದುವರಿಸುತ್ತದೆ,’ ಎಂದು ಈಸಿಬಿ ಸ್ಟೇಟ್ಮೆಂಟ್ ಹೇಳುತ್ತದೆ.

ಇಂಗ್ಲೆಂಡ್ ಪುರುಷರ ಕ್ರಿಕೆಟ್ನ ವ್ಯವಸ್ಥಾಪಕ ನಿರ್ದೇಶಕ ಌಶ್ಲೀ ಗೈಲ್ಸ್ ಅವರು ಸ್ಟೋಕ್ಸ್ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದಾರೆ. ಅವರು ಕೇಳುವಷ್ಟು ಸಮಯವನ್ನು ನೀಡಲಾಗುವುದು ಎಂದು ಗೈಲ್ಸ್ ಹೇಳಿದ್ದಾರೆ.

‘ತಮ್ಮ ಆರೋಗ್ಯ ಮತ್ತು ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡು ಬೆನ್ ಬಾರಿ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ನಮ್ಮ ಎಲ್ಲ ಆಟಗಾರರ ಮಾನಸಿಕ ಸ್ವಾಸ್ಥ್ಯ ನಮಗೆ ಆದ್ಯತೆಯ ವಿಷಯವಾಗಿದೆ ಮತ್ತು ಇದೇ ಧೋರಣೆಯನ್ನು ನಾವು ಮುಂದುವರಿಸುತ್ತೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಬೇಕಿರುವ ಒತ್ತಡ ನಮ್ಮ ಆಟಗಾರರನ್ನು ಮಾನಸಿಕವಾಗಿ ಬಳಲುವಂತೆ ಮಾಡುತ್ತಿದೆ ಮತ್ತು ಕೋವಿಡ್-19 ಸೃಷ್ಟಿಸಿರುವ ಪ್ರಸಕ್ತ ವಿದ್ಯಮಾನ ಆ ಒತ್ತಡವನ್ನು ದ್ವಿಗುಣಗೊಳಿಸುತ್ತಿದೆ,’ ಎಂದು ಗೈಲ್ಸ್ ಹೇಳಿದ್ದಾರೆ.

‘ಕೇವಲ ಅಲ್ಪ ಪ್ರಮಾಣದ ಸ್ವಾಂತಂತ್ರ್ಯದೊಂದಿಗೆ ಹೆಚ್ಚಿನ ಸಮಯವನ್ನು ಕುಟುಂಬದಿಂದ ದೂರವಿದ್ದು ಕಳೆಯುವುದು ಅತ್ಯಂತ ಸವಾಲಿನ ವಿಷಯವಾಗಿದೆ; ಕಳೆದ 16 ತಿಂಗಳುಗಳಿಂದ ಆಟಗಾರರು ಇದೇ ತೆರನಾದ ವಾತಾವರಣದಲ್ಲಿರುವುದರಿಂದ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ,’ ಎಂದು ಗೈಲ್ಸ್ ಹೇಳಿದ್ದಾರೆ.

‘ಕೇಳುವಷ್ಟು ಅವಧಿಯ ಬ್ರೇಕ್ ಅನ್ನು ಬೆನ್ಗೆ ನೀಡಲಾಗುವುದು, ಮುಂದಿನ ದಿನಗಳಲ್ಲಿ ಅವರು ಇಂಗ್ಲೆಂಡ್ಗೆ ಆಡುವುದನ್ನು ನಾವು ನೋಡಬಯಸುತ್ತೇವೆ,’ ಎಂದು ಅವರು ಹೇಳಿದರು.

ಇದನ್ನೂ ಓದಿ: IPL 2021: ಐಪಿಎಲ್​ನಿಂದ ಬೆನ್​ ಸ್ಟೋಕ್ಸ್​ ಔಟ್! ಭಾವನಾತ್ಮಕ ವಿಡಿಯೋ ಮೂಲಕ ವಿದಾಯ ಹೇಳಿದ ರಾಜಸ್ಥಾನ್ ರಾಯಲ್ಸ್; ವಿಡಿಯೋ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada