ETPL: ದ್ರಾವಿಡ್ ತಂಡಕ್ಕೆ ಸತತ 2ನೇ ಸೋಲು; ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ
ETPL: ಯುರೋಪ್‌ನ ಇಟಿಪಿಎಲ್ ಲೀಗ್‌ನಲ್ಲಿ ರಾಹುಲ್ ದ್ರಾವಿಡ್ ಒಡೆತನದ ಡಬ್ಲಿನ್ ಗಾರ್ಡಿಯನ್ಸ್ ತಂಡ ಸತತ ಎರಡನೇ ಸೋಲು ಕಂಡಿದೆ. ಆರ್. ಅಶ್ವಿನ್ ನಾಯಕತ್ವದ ತಂಡ ಗ್ಲ್ಯಾಸ್ಗೋ ಕಾಸ್ಮಿಕ್ಸ್ ವಿರುದ್ಧ 33 ರನ್‌ಗಳಿಂದ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹ್ಯಾರಿ ಟೆಕ್ಟರ್ 75 ರನ್ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಯುರೋಪ್‌ನಲ್ಲಿ ಆರಂಭವಾಗಿರುವ ಹೊಸ ಟಿ20 ಲೀಗ್ ಇಟಿಪಿಎಲ್‌ನಲ್ಲಿ (ETPL) ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid ) ಒಡೆತನದ ಡಬ್ಲಿನ್ ಗಾರ್ಡಿಯನ್ಸ್ (Dublin Guardians) ತಂಡ ಸತತ ಎರಡನೇ ಸೋಲನ್ನು ಅನುಭವಿಸಿದೆ. ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ನಾಯಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಡಬ್ಲಿನ್ ಗಾರ್ಡಿಯನ್ಸ್ ತಂಡ ಇದೀಗ ಎರಡನೇ ಪಂದ್ಯದಲ್ಲಿಯೂ 33 ರನ್‌ಗಳಿಂದ ಸೋತಿದೆ. ಈ ಸೋಲಿನೊಂದಿಗೆ ಅಶ್ವಿನ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
60 ರನ್ ಬಾರಿಸಿದ ಜೇಸನ್ ರಾಯ್
ಎರಡನೇ ಪಂದ್ಯದಲ್ಲಿ ಗ್ಲ್ಯಾಸ್ಗೋ ಕಾಸ್ಮಿಕ್ಸ್ ಹಾಗೂ ಡಬ್ಲಿನ್ ಗಾರ್ಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗ್ಲ್ಯಾಸ್ಗೋ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಇಂಗ್ಲಿಷ್ ಓಪನರ್ ಜೇಸನ್ ರಾಯ್ 37 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 60 ರನ್ ಬಾರಿಸಿದರೆ, ರಿಚೀ ಬ್ಯಾರಿಂಗ್ಟನ್ 27 ಎಸೆತಗಳಲ್ಲಿ 4 ಸಿಕ್ಸರ್ ಸೇರಿದಂತೆ 51 ರನ್ ಕಲೆಹಾಕಿದರು.
ದುಬಾರಿಯಾದ ನಾಯಕ ಅಶ್ವಿನ್
ಇತ್ತ ಡಬ್ಲಿನ್ ಪರ, ಕ್ರಿಸ್ ವುಡ್ ಮತ್ತು ಮ್ಯಾಟ್ ಹೊಲ್ಲಾರ್ಡ್ ಉತ್ತಮವಾಗಿ ಬೌಲಿಂಗ್ ಮಾಡಿ ಒಟ್ಟಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆದಾಗ್ಯೂ, ನಾಯಕ ರವಿಚಂದ್ರನ್ ಅಶ್ವಿನ್ ಈ ಪಂದ್ಯದಲ್ಲಿ ತೀರ ದುಬಾರಿಯಾದರು. ಅಶ್ವಿನ್ ತಮ್ಮ ಮೊದಲ ಓವರ್‌ನಲ್ಲಿ 2 ಬೌಂಡರಿ, ಸಿಕ್ಸರ್ ನೀಡಿದರೆ, ಎರಡನೇ ಓವರ್‌ನಲ್ಲಿ ವಿಕೆಟ್ ಪಡೆದರೂ, ರನ್‌ಗಳ ಹರಿವನ್ನು ತಡೆಯಲು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ, ಅಶ್ವಿನ್ ತಮ್ಮ ನಾಲ್ಕು ಓವರ್‌ಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಂತೆ 43 ರನ್‌ಗಳನ್ನು ಬಿಟ್ಟುಕೊಟ್ಟರು.
ಈ ವರ್ಷ ಇನ್ನೂ 19 ಟಿ20 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ
150 ರನ್ಗಳಿಗೆ ಆಲೌಟ್
183 ರನ್‌ಗಳ ಗುರಿ ಬೆನ್ನಟ್ಟಿದ ಡಬ್ಲಿನ್ ತಂಡಕ್ಕೆ ಎರಡನೇ ಪಂದ್ಯದಲ್ಲೂ ಕಳಪೆ ಆರಂಭ ಪಡೆಯಿತು. ಮುಹಮ್ಮದ್ ವಸೀಮ್ ಶೂನ್ಯಕ್ಕೆ ಔಟಾದರೆ, ಜೇಮ್ಸ್ ವಿನ್ಸ್ ಅವರ ಇನ್ನಿಂಗ್ಸ್ 13 ರನ್ಗಳಿಗೆ ಅಂತ್ಯವಾಯಿತು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನೀಡಿದ ಹ್ಯಾರಿ ಟೆಕ್ಟರ್ 45 ಎಸೆತಗಳಲ್ಲಿ 75 ರನ್ ಬಾರಿಸಿದರು. ಉಳಿದವರಿಂದ ಟೆಕ್ಟರ್ಗೆ ಬೆಂಬಲ ಸಿಗಲಿಲ್ಲ. ಹೀಗಾಗಿ ಡಬ್ಲಿನ್ ತಂಡ 19.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 150 ರನ್ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Sun, 30 August 26




