ಈ ವರ್ಷ ಇನ್ನೂ 19 ಟಿ20 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ
Team India T20 Schedule 2026 : ಪ್ರಸ್ತುತ 2026ರ ಉಳಿದ ನಾಲ್ಕೂವರೆ ತಿಂಗಳಲ್ಲಿ ಟೀಂ ಇಂಡಿಯಾ ಕನಿಷ್ಠ 17 T20 ಪಂದ್ಯಗಳನ್ನಾಡಲಿದೆ. ಏಷ್ಯನ್ ಗೇಮ್ಸ್, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಗಳು ಪ್ರಮುಖವಾಗಿವೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದೆ. ಕ್ರಿಕೆಟ್ ಅಭಿಮಾನಿಗಳು ಈ ರೋಮಾಂಚಕ ಪಂದ್ಯಾವಳಿಗಳಿಗೆ ಸಜ್ಜಾಗಿ.

ಪ್ರಸ್ತುತ ಟೀಂ ಇಂಡಿಯಾ ಶ್ರೀಲಂಕಾ (India vs Sri Lanka) ಪ್ರವಾಸದಲ್ಲಿದೆ. ಅಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ಬಳಿಕ ಟೀಂ ಇಂಡಿಯಾ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ. ಈ ಕ್ರೀಡಾಕೂಟದಲ್ಲಿ ಟಿ20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ ಕಣಕ್ಕಿಳಿಯಲಿದೆ. ಈ ವರ್ಷ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಸಾಕಷ್ಟು ಪಂದ್ಯಗಳನ್ನಾಡಿದೆ. ಇನ್ನು ಈ ವರ್ಷ ಉಳಿದಿರುವ ನಾಲ್ಕೂವರೆ ತಿಂಗಳಲ್ಲಿ ಟೀಂ ಇಂಡಿಯಾ ಕನಿಷ್ಠ ಪಕ್ಷ 17 ಟಿ20 ಪಂದ್ಯಗಳನ್ನಾಡಲಿದೆ. ಒಂದು ವೇಳೆ ಟೀಂ ಇಂಡಿಯಾ ಏಷ್ಯನ್ ಕ್ರೀಡಾಕೂಟದ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಗೆದ್ದರೆ ಪಂದ್ಯಗಳ ಸಂಖ್ಯೆ 19 ಕ್ಕೇರಲಿದೆ.
ಇಂದು ಅಂದರೆ ಆಗಸ್ಟ್ 12 ರಂದು ಭಾರತದ ಮತ್ತೊಂದು ಟಿ20 ಸರಣಿಯ ವೇಳಾಪಟ್ಟಿಯೂ ಪ್ರಕಟವಾಗಿದೆ. ಅದರಂತೆ ಮೂರು ಪಂದ್ಯಗಳ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡ ಭಾರತದಲ್ಲಿ ಟೀಂ ಇಂಡಿಯಾಕ್ಕೆ ಆತಿಥ್ಯವಹಿಸಲಿದೆ. ಉಳಿದಂತೆ ಈ ವರ್ಷ ಟೀಂ ಇಂಡಿಯಾ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗಳನ್ನು ಆಡಲಿದೆ. ಹಾಗಿದ್ದರೆ, ಉಳಿದಿರುವ ನಾಲ್ಕೂವರೆ ತಿಂಗಳಲ್ಲಿ ಟೀಂ ಇಂಡಿಯಾದ ಟಿ20 ಸರಣಿ ವೇಳಾಪಟ್ಟಿ ಹೇಗಿದೆ ಎಂಬುದನ್ನು ನೋಡುವುದಾದರೆ..
ಭಾರತ vs ಅಫ್ಘಾನಿಸ್ತಾನ T20 ಸರಣಿ (ಸೆಪ್ಟೆಂಬರ್ 2026)
- ಮೊದಲ ಟಿ20: ಸೆಪ್ಟೆಂಬರ್ 13, 2026, ನವದೆಹಲಿ
- ಎರಡನೇ ಟಿ20: ಸೆಪ್ಟೆಂಬರ್ 15, 2026, ನವದೆಹಲಿ
- ಮೂರನೇ ಟಿ20: ಸೆಪ್ಟೆಂಬರ್ 17, 2026, ನವದೆಹಲಿ
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡ (ಸೆಪ್ಟೆಂಬರ್-ಅಕ್ಟೋಬರ್ 2026)
ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್ ಸೆಪ್ಟೆಂಬರ್ 24, 2026 ರಿಂದ ಅಕ್ಟೋಬರ್ 3, 2026 ರವರೆಗೆ ನಡೆಯಲಿದೆ. ಮೊದಲ ಸುತ್ತಿನ ಪಂದ್ಯ ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ, ಆದರೂ ಟೀಂ ಇಂಡಿಯಾ ಈ ಸುತ್ತನ್ನು ಆಡುವುದಿಲ್ಲ. ಬದಲಿಗೆ ಭಾರತ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಆಡಲಿದೆ. ಈ ಸುತ್ತನ್ನು ಗೆದ್ದರೆ, ಅಕ್ಟೋಬರ್ 3 ರಂದು ಸೆಮಿಫೈನಲ್ ಮತ್ತು ನಂತರ ಫೈನಲ್ ಆಡಲಿದೆ. ಇದರರ್ಥ ಟೀಂ ಇಂಡಿಯಾ ಈ ಪಂದ್ಯಾವಳಿಯಲ್ಲಿ ಗರಿಷ್ಠ ಮೂರು ಪಂದ್ಯಗಳನ್ನು ಆಡಬಹುದು.
ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ (ಅಕ್ಟೋಬರ್ 2026)
- ಮೊದಲ ಟಿ20: ಅಕ್ಟೋಬರ್ 6, 2026, ಲಕ್ನೋ
- ಎರಡನೇ ಟಿ20: ಅಕ್ಟೋಬರ್ 9, 2026, ರಾಂಚಿ
- ಮೂರನೇ ಟಿ20: ಅಕ್ಟೋಬರ್ 11, 2026, ಇಂದೋರ್
- ನಾಲ್ಕನೇ ಟಿ20: ಅಕ್ಟೋಬರ್ 14, 2026, ಹೈದರಾಬಾದ್
- ಐದನೇ ಟಿ20: ಅಕ್ಟೋಬರ್ 17, 2026, ಬೆಂಗಳೂರು
ಭಾರತ vs ನ್ಯೂಜಿಲೆಂಡ್ ಟಿ20 ಸರಣಿ (ಅಕ್ಟೋಬರ್-ನವೆಂಬರ್ 2026)
- ಮೊದಲ ಟಿ20: ಅಕ್ಟೋಬರ್ 22, 2026, ಕ್ರೈಸ್ಟ್‌ಚರ್ಚ್
- ಎರಡನೇ ಟಿ20 ಅಕ್ಟೋಬರ್ 24, 2026, ಕ್ರೈಸ್ಟ್‌ಚರ್ಚ್
- ಮೂರನೇ ಟಿ20: ಅಕ್ಟೋಬರ್ 27, 2026, ವೆಲ್ಲಿಂಗ್ಟನ್
- ನಾಲ್ಕನೇ ಟಿ20: ಅಕ್ಟೋಬರ್ 30, 2026, ಆಕ್ಲೆಂಡ್
- ಐದನೇ ಟಿ20: ನವೆಂಬರ್ 1, 2026, ಹ್ಯಾಮಿಲ್ಟನ್
ಭಾರತ vs ಶ್ರೀಲಂಕಾ ಟಿ20 ಸರಣಿ (ಡಿಸೆಂಬರ್ 2026)
- ಮೊದಲ ಟಿ20: ಡಿಸೆಂಬರ್ 22, 2026, ರಾಜ್‌ಕೋಟ್
- ಎರಡನೇ ಟಿ20: ಡಿಸೆಂಬರ್ 24, 2026, ಕಟಕ್
- ಮೂರನೇ ಟಿ20: ಡಿಸೆಂಬರ್ 27, 2026, ಪುಣೆ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Wed, 12 August 26




