Graham Thorpe: ರೈಲಿನ ಮುಂದೆ ಹಾರಿ ಆತ್ಮಹತ್ಯೆ; ಇಂಗ್ಲೆಂಡ್ ಮಾಜಿ ಕ್ರಿಕೆಟಿನ ಸಾವಿನ ರಹಸ್ಯ ಬಯಲು

|

Updated on: Aug 13, 2024 | 6:00 PM

Graham Thorpe: ಆಗಸ್ಟ್ 5 ರಂದು ಗ್ರಹಾಂ ಥೋರ್ಪ್ ಸಾವನ್ನಪ್ಪಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಆಗಸ್ಟ್ 12 ರಂದು ಗ್ರಹಾಂ ಥೋರ್ಪ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ ಎಂದು ಅವರ ಕುಟುಂಬಸ್ಥರು ಹೇಳಿಕೆ ನೀಡಿದ್ದರು. ಇದೀಗ ಆಂಗ್ಲ ಮಾಧ್ಯಮಗಳು ಗ್ರಹಾಂ ಥೋರ್ಪ್ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿವೆ.

Graham Thorpe: ರೈಲಿನ ಮುಂದೆ ಹಾರಿ ಆತ್ಮಹತ್ಯೆ; ಇಂಗ್ಲೆಂಡ್ ಮಾಜಿ ಕ್ರಿಕೆಟಿನ ಸಾವಿನ ರಹಸ್ಯ ಬಯಲು
ಗ್ರಹಾಂ ಥೋರ್ಪ್
Follow us on

ಕೆಲವು ದಿನಗಳ ಹಿಂದೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಗ್ರಹಾಂ ಥೋರ್ಪ್ ಅವರ ಸಾವಿನ ಸುದ್ದಿ ಕ್ರಿಕೆಟ್ ಲೋಕಕ್ಕೆ ಬರ ಸಿಡಿಲಿನಂತೆ ಬಂದೆರಗಿತ್ತು. ಆರಂಭದಲ್ಲಿ ಇದು ಸಹಜ ಸಾವು ಎಂದು ವರದಿಯಾಗಿದ್ದರೂ, ಆ ಬಳಿಕ ಗ್ರಹಾಂ ಥೋರ್ಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಖಚಿತವಾಗಿತ್ತು. ಈ ವಿಚಾರವನ್ನು ಸ್ವತಃ ಗ್ರಹಾಂ ಥೋರ್ಪ್ ಅವರ ಕುಟಂಬಸ್ಥರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಇದೀಗ ಗ್ರಹಾಂ ಥೋರ್ಪ್ ಅವರ ಸಾವಿನ ಬಗ್ಗೆ ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದು, ಈ ಮಾಜಿ ಕ್ರಿಕೆಟಿಗ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಮ್ಮ ವರದಿಯಲ್ಲಿ ತಿಳಿಸಿವೆ.

ವಾಸ್ತವವಾಗಿ ಇದೇ ಆಗಸ್ಟ್ 5 ರಂದು ಗ್ರಹಾಂ ಥೋರ್ಪ್ ಸಾವನ್ನಪ್ಪಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಆಗಸ್ಟ್ 12 ರಂದು ಗ್ರಹಾಂ ಥೋರ್ಪ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ ಎಂದು ಅವರ ಕುಟುಂಬಸ್ಥರು ಹೇಳಿಕೆ ನೀಡಿದ್ದರು. ಇದೀಗ ಆಂಗ್ಲ ಮಾಧ್ಯಮಗಳು ಗ್ರಹಾಂ ಥೋರ್ಪ್ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿವೆ.

ರೈಲ್ವೆ ಹಳಿಯ ಮೇಲೆ ಗ್ರಹಾಂ ಥೋರ್ಪ್ ದೇಹ

ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಆಗಸ್ಟ್ 4 ರಂದು ಬೆಳಿಗ್ಗೆ 8.30 ರ ಸುಮಾರಿಗೆ ಈಶರ್ ರೈಲ್ವೆ ನಿಲ್ದಾಣದ ಟ್ರ್ಯಾಕ್ ಮೇಲೆ ವ್ಯಕ್ತಿಯೊಬ್ಬನ ಮೃತ ದೇಹವಿರುವ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ರೈಲ್ವೆ ಅಧಿಕಾರಿಗಳು ಕೂಡಲೇ ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಅರೆವೈದ್ಯರು ಟ್ರ್ಯಾಕ್ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಪರೀಕ್ಷಿಸಲಾಗಿ, ಆತ ಅದಾಗಲೇ ಸವಾನಪ್ಪಿರುವುದನ್ನು ಖಚಿತಪಡಿಸಿದ್ದಾರೆ. ತನಿಖೆಯ ಬಳಿಕ ಮೃತ ವ್ಯಕ್ತಿ ಮಾಜಿ ಕ್ರಿಕೆಟಿಗ ಗ್ರಹಾಂ ಥೋರ್ಪ್ ಎಂಬುದು ಖಚಿತವಾಗಿದೆ.

ಗ್ರಹಾಂ ಥೋರ್ಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ ; ಪತ್ನಿಯ ಹೇಳಿಕೆ

ಈ ತನಿಖೆಯ ವರದಿ ಹೊರಬೀಳುವ ಮುನ್ನವೆ ಗ್ರಹಾಂ ಥೋರ್ಪ್ ಅವರ ಮಡದಿ ಅಮಂಡಾ, ಬ್ರಿಟಿಷ್ ಪತ್ರಿಕೆ ದಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತನ್ನ ಪತಿಯ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ‘ಥೋರ್ಪ್ ಬಹಳ ದಿನಗಳಿಂದ ಖಿನ್ನತೆ ಮತ್ತು ಒತ್ತಡದಿಂದ ಬಳಲುತ್ತಿದ್ದರು. ಎರಡು ವರ್ಷಗಳ ಹಿಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಕೂಡಿಸಿತ್ತಾದರೂ ಅವರು ಇದರಿಂದ ಚೇತರಿಸಿಕೊಳ್ಳಲಿಲ್ಲ. ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಹುಶಃ ನಾನಿಲ್ಲದಿದ್ದರೆ, ನನ್ನ ಹೆಂಡತಿ ಮಕ್ಕಳು ನೆಮ್ಮದಿಯ ಜೀವನ ನಡೆಸುತ್ತಾರೆ ಎಂದು ಭಾವಿಸಿ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು’ ಎಂದು ಹೇಳಿಕೊಂಡಿದ್ದರು.

ಗ್ರಹಾಂ ಥೋರ್ಪ್ ವೃತ್ತಿಜೀವನ

ಇನ್ನು ಗ್ರಹಾಂ ಥೋರ್ಪ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಅವರು ಇಂಗ್ಲೆಂಡ್ ಪರ 182 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ರಹಾಂ ಥೋರ್ಪ್ 16 ಶತಕಗಳು ಸೇರಿದಂತೆ 6744 ರನ್ ಕಲೆಹಾಕಿದ್ದರು. ಇದಲ್ಲದೆ, 82 ಏಕದಿನ ಪಂದ್ಯಗಳಲ್ಲಿ 21 ಅರ್ಧಶತಕ ಸೇರಿದಂತೆ 2380 ರನ್ ಸಿಡಿಸಿದ್ದರು. ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 341 ಪಂದ್ಯಗಳನ್ನು ಆಡಿರುವ ಥೋರ್ಪ್ ಅವರು 49 ಶತಕಗಳ ಸಹಿತ 21937 ರನ್ ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Tue, 13 August 24