KL Rahul: ಕೆಎಲ್ ರಾಹುಲ್​ನ ಕ್ಯಾಪ್ಟನ್ ಮಾಡಿದ್ದು ಸರಿಯಲ್ಲ ಎಂದ ಮಾಜಿ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Aug 17, 2022 | 11:04 AM

India vs Zimbabwe: ಜಿಂಬಾಬ್ವೆ ವಿರುದ್ದ ಸರಣಿಗೆ ಆಯ್ಕೆಯಾದ ಟೀಮ್ ಇಂಡಿಯಾ ಹೀಗಿದೆ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್.

KL Rahul: ಕೆಎಲ್ ರಾಹುಲ್​ನ ಕ್ಯಾಪ್ಟನ್ ಮಾಡಿದ್ದು ಸರಿಯಲ್ಲ ಎಂದ ಮಾಜಿ ಕ್ರಿಕೆಟಿಗ
KL Rahul
Follow us on

ಜಿಂಬಾಬ್ವೆ (India vs Zimbabwe) ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು (Team India) ಕೆಎಲ್ ರಾಹುಲ್ (KL Rahul) ಮುನ್ನಡೆಸದಲಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಈ ಸರಣಿಯ ವೇಳೆ ವಿಶ್ರಾಂತಿ ಪಡೆದಿದ್ದು, ಹೀಗಾಗಿ ಕೆಎಲ್ ರಾಹುಲ್​ ಅವರಿಗೆ ನಾಯಕತ್ವ ನೀಡಲಾಗಿದೆ. ವಿಶೇಷ ಎಂದರೆ ಈ ಮೊದಲು ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಈ ಸರಣಿಗಾಗಿ ಆಯ್ಕೆ ಮಾಡಲಾದ ತಂಡದ ನಾಯಕತ್ವವನ್ನು ಧವನ್​ ಅವರಿಗೆ ವಹಿಸಲಾಗಿತ್ತು. ಆದರೆ ಗಾಯಗೊಂಡಿದ್ದ ಕೆಎಎಲ್ ರಾಹುಲ್ ಫಿಟ್​ನೆಸ್ ಟೆಸ್ಟ್ ಪಾಸಾಗುತ್ತಿದ್ದಂತೆ ಕನ್ನಡಿಗನನ್ನು ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡಲಾಯಿತು. ಅಲ್ಲದೆ ಧವನ್ ಬದಲಿಗೆ ಕೆಎಲ್ ರಾಹುಲ್​ಗೆ ನಾಯಕನ ಸ್ಥಾನ ನೀಡಲಾಯಿತು. ಆದರೆ ಈ ಮೊದಲು ನಾಯಕನಾಗಿ ಆಯ್ಕೆ ಮಾಡಿ ಶಿಖರ್ ಧವನ್ ಅವರನ್ನು ಕೆಳಗಿಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಮೊದಲೇ ಶಿಖರ್ ಧವನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ ಬಳಿಕ ಕೆಎಲ್ ರಾಹುಲ್ ಅವರ ಅಡಿಯಲ್ಲೇ ಆಡಬಹುದಿತ್ತು. ಇದರಿಂದ ಯಾವುದೇ ವ್ಯತ್ಯಾಸಗಳೇನು ಆಗುವುದಿಲ್ಲ. ಆದರೆ ನಾಯಕ ಎಂದು ಘೋಷಿಸಿದ ಬಳಿಕ ಒಬ್ಬ ಆಟಗಾರನನ್ನು ಕೆಳಗಿಸುವುದು ಸರಿಯಾದ ಕ್ರಮವಲ್ಲ ಎಂದು ಕೈಫ್ ಹೇಳಿದ್ದಾರೆ.

ಶಿಖರ್ ಧವನ್ ಅವರಲ್ಲಿಯೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅವರು ಅದ್ಭುತ ಬ್ಯಾಟರ್. ಈಗ ಅವರು ಕೇವಲ ಒಂದು ಫಾರ್ಮ್ಯಾಟ್ ಆಡುತ್ತಿದ್ದಾರೆ. ಅವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದಾಗ್ಯೂ ಅವರನ್ನು ಏಕದಿನ ತಂಡಕ್ಕೆ ಮಾತ್ರ ಆಯ್ಕೆ ಮಾಡಲಾಗುತ್ತಿದೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ನನ್ನ ಪ್ರಕಾರ ಅವರು ಉತ್ತಮ ಆಟಗಾರ. ಹೀಗಾಗಿ ಅವರು ಇತರ ಫಾರ್ಮ್ಯಾಟ್‌ಗಳನ್ನು ಸಹ ಆಡಬಲ್ಲರು. ವೆಸ್ಟ್ ಇಂಡೀಸ್ ವಿರುದ್ಧ, ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ಸ್ಕೋರ್ ಮಾಡಿದ್ದಾರೆ. ಹೀಗಾಗಿ ಫಾರ್ಮ್​ನಲ್ಲಿರುವ ಆಟಗಾರನನ್ನು ಎಲ್ಲಾ ಮಾದರಿಗೂ ಆಯ್ಕೆ ಮಾಡಬೇಕೆಂದು ಕೈಫ್ ಹೇಳಿದ್ದಾರೆ.

ಇನ್ನು ಕೆಎಲ್ ರಾಹುಲ್ ಅವರನ್ನು ಜಿಂಬಾಬ್ವೆ ವಿರುದ್ದದ ಸರಣಿಗೆ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಆದರೆ ಇದು ಕೇವಲ 3 ಪಂದ್ಯಗಳಿಗೆ ಮಾತ್ರ. ಅಂದರೆ ಏಷ್ಯಾಕಪ್​ನಲ್ಲಿ ಮತ್ತೆ ರೋಹಿತ್ ಶರ್ಮಾ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಪ್ರಶ್ನೆಯೇನೆಂದರೆ ನಾಯಕನಾಗಿ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿ, ಕೇವಲ ಮೂರು ಪಂದ್ಯಗಳಿಗೋಸ್ಕರ ಕೆಎಲ್ ರಾಹುಲ್​ಗೆ ನಾಯಕತ್ವ ನೀಡಬೇಕಿತ್ತಾ ಎಂಬುದು.

ಇಂತಹ ಕ್ರಮಗಳು ಆಟಗಾರರ ಮೇಲೆ ಪರಿಣಾಮ ಬೀರುತ್ತದೆ. ಶಿಖರ್ ಧವನ್ ಕೂಲ್ ಆಟಗಾರ. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಪ್ಲೇಯರ್. ಹೀಗಾಗಿ ಕೆಎಲ್ ರಾಹುಲ್ ಅವರ ನಾಯಕತ್ವದಲ್ಲಿ ಮೂರು ಪಂದ್ಯಗಳನ್ನು ಆಡಿದ್ದರೆ ಯಾವುದೇ ಬದಲಾವಣೆ ಆಗುತ್ತಿರಲಿಲ್ಲ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಜಿಂಬಾಬ್ವೆ ವಿರುದ್ದ ಸರಣಿಗೆ ಆಯ್ಕೆಯಾದ ಟೀಮ್ ಇಂಡಿಯಾ ಹೀಗಿದೆ:
ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್, ಶಹಬಾಜ್ ಅಹ್ಮದ್.