Fact Check: ಸಾನಿಯಾರನ್ನು ಮದುವೆಯಾಗ್ತಾರಾ ಶಮಿ?

Mohammed Shami - Sania Mirza: ಶೊಯೆಬ್ ಮಲಿಕ್ ಇದುವರೆಗೆ ಮೂರು ಮದುವೆಯಾಗಿದ್ದಾರೆ. 2002 ರಲ್ಲಿ ಆಯೇಷಾ ಸಿದ್ದಿಕಿ ಎಂಬವರೊಂದಿಗೆ ವಿವಾಹವಾಗಿದ್ದ ಮಲಿಕ್ 2010 ರಲ್ಲಿ ಸಾನಿಯಾ ಮಿರ್ಝಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಾನಿಯಾಗೂ ವಿಚ್ಛೇದನ ನೀಡಿ ಪಾಕ್ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದಾರೆ.

Fact Check: ಸಾನಿಯಾರನ್ನು ಮದುವೆಯಾಗ್ತಾರಾ ಶಮಿ?
Sania-Shami
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 31, 2024 | 10:50 AM

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami) ಟೆನಿಸ್ ತಾರೆ ಸಾನಿಯಾ ಮಿರ್ಝಾ (Sania Mirza) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಾ? ಇಂತಹ ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಕೆಲ ಸೋಷಿಯಲ್ ಮೀಡಿಯಾ ಪೋಸ್ಟ್​ಗಳು. ಪಾಕಿಸ್ತಾನ್ ಕ್ರಿಕೆಟಿಗ ಶೊಯೆಬ್ ಮಲಿಕ್ ಹಾಗೂ ​ಸಾನಿಯಾ ಮಿರ್ಝಾ ದಾಂಪತ್ಯ ಜೀವನದಿಂದ ಬೇರ್ಪಟ್ಟಿದ್ದಾರೆ. ಇದರ ಬೆನ್ನಲ್ಲೇ ಶೊಯೆಬ್ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದರು. ಈ ಸುದ್ದಿ ಬೆನ್ನಲ್ಲೇ  ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಸಾನಿಯಾ ಮಿರ್ಝಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿದೆ.

ಅತ್ತ ಹಸೀನ್ ಜಹಾನ್​ನಿಂದ ದೂರವಾಗಿರುವ ಮೊಹಮ್ಮದ್ ಶಮಿ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಶೊಯೆಬ್​ನಿಂದ ದೂರವಾಗಿರುವ ಸಾನಿಯಾ ಹೆಸರು ಶಮಿ ಜೊತೆ ತಳುಕು ಹಾಕಿಕೊಂಡಿದೆ.

ಈ ಸುದ್ದಿ ಸತ್ಯಾಸತ್ಯತೆಯೇನು?

ಇದೊಂದು ಸುಳ್ಳು ಸುದ್ದಿ. ಸಾನಿಯಾ ಮಿರ್ಝಾ ಆಗಲಿ ಅಥವಾ ಮೊಹಮ್ಮದ್ ಶಮಿಯಾಗಲಿ ಅಂತಹ ಯಾವುದೇ ಆಲೋಚನೆಯಲ್ಲಿಲ್ಲ. ಇದಾಗ್ಯೂ ಸಾನಿಯಾ-ಶೊಯೆಬ್ ಮಲಿಕ್ ಡೈವೋರ್ಸ್ ಬೆನ್ನಲ್ಲೇ ಇಂತಹದೊಂದು ಪೋಸ್ಟ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು.

ಮೇಲ್ನೋಟಕ್ಕೆ ಪಾಕ್ ಆಟಗಾರ ಶೊಯೆಬ್ ಮಲಿಕ್ ಅವರನ್ನು ಗುರಿಯಾಗಿಸಿ ಮಾಡಲಾಗಿದ್ದ ಈ ಪೋಸ್ಟ್​ನಲ್ಲಿ, ಪಾಕ್ ಕ್ರಿಕೆಟಿಗ ಕೈಬಿಟ್ಟರೂ ಸಾನಿಯಾರನ್ನು ವಿವಾಹವಾಗಲು ಟೀಮ್ ಇಂಡಿಯಾ ಆಟಗಾರ ಇದ್ದಾನೆಂದು ಮೊಹಮ್ಮದ್ ಶಮಿ ಅವರನ್ನು ಈ ವಿಚಾರದಲ್ಲಿ ಎಳೆದು ತರಲಾಗಿತ್ತು.

ಅತ್ತ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್​ನಿಂದ ದೂರವಾಗಿದ್ದಾರೆ. ಇತ್ತ ಸಾನಿಯಾ ಮಿರ್ಝಾ ಕೂಡ ಡೈವೋರ್ಸ್ ಆಗಿರುವುದರಿಂದ ಈ ವದಂತಿಯು ಬೇಗನೆ ವೈರಲ್ ಆಗಿದೆ. ಇದಾದ ಬಳಿಕ ಇಬ್ಬರ ಫೋಟೋವನ್ನು ಎಡಿಟ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ.  ಇದೀಗ ಶಮಿ-ಸಾನಿಯಾ ವಿವಾಹ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಫ್ಯಾಕ್ಟ್ ಚೆಕ್​ನಿಂದ ತಿಳಿದು ಬಂದಿದೆ. ಹೀಗಾಗಿ ಇದೊಂದು ಸುಳ್ಳು ಸುದ್ದಿ ಅಷ್ಟೇ.

ಇದನ್ನೂ ಓದಿ: IPL 2024: RCB ಗೆ ವಿಂಡೀಸ್ ವೇಗಿ?

ತ್ರಿವಿವಾಹವಾದ ಶೊಯೆಬ್ ಮಲಿಕ್:

ಶೊಯೆಬ್ ಮಲಿಕ್ ಇದುವರೆಗೆ ಮೂರು ಮದುವೆಯಾಗಿದ್ದಾರೆ. 2002 ರಲ್ಲಿ ಆಯೇಷಾ ಸಿದ್ದಿಕಿ ಎಂಬವರೊಂದಿಗೆ ವಿವಾಹವಾಗಿದ್ದ ಮಲಿಕ್ 2010 ರಲ್ಲಿ ಸಾನಿಯಾ ಮಿರ್ಝಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಾನಿಯಾಗೂ ವಿಚ್ಛೇದನ ನೀಡಿ ಪಾಕ್ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದಾರೆ. ಇನ್ನು ಶೊಯೆಬ್ ಮಲಿಕ್ ಹಾಗೂ ಸಾನಿಯಾ ದಂಪತಿಗೆ ಐದು ವರ್ಷದ ಇಝಾನ್ ಎಂಬ ಮಗನಿದ್ದಾನೆ. ಸದ್ಯ ಸಿಂಗಲ್ ಪೇರೆಂಟ್ ಆಗಿರುವ ಸಾನಿಯಾ ಮಿರ್ಝಾ ಮತ್ತೊಂದು ಮದುವೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

Published On - 10:49 am, Wed, 31 January 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ