ಯುಜ್ವೇಂದ್ರ ಚಹಲ್-ಮಹ್ವಾಶ್ ವಿಡಿಯೋ ವೈರಲ್: ಇದರ ಅಸಲಿಯತ್ತೇನು?

Yuzvendra Chahal-RJ Mahvash: ಭಾರತ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅದು ಸಹ ಚೆಂದುಳ್ಳಿ ಚೆಲುವೆ ಮಹ್ವಾಶ್ ಅವರೊಂದಿಗೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯುಜ್ವೇಂದ್ರ ಚಹಲ್-ಮಹ್ವಾಶ್ ವಿಡಿಯೋ ವೈರಲ್: ಇದರ ಅಸಲಿಯತ್ತೇನು?
Yuzvendra Chahal-Rj Mahvash

Updated on: Mar 13, 2025 | 1:55 PM

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ಆರ್‌ಜೆ ಮಹ್ವಾಶ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಚಹಲ್ ಹಾಗೂ ಮಹ್ವಾಶ್ ಅವರ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ಟೇಡಿಯಂನಲ್ಲಿ ಚಹಲ್ ಹಾಗೂ ಮಹ್ವಾಶ್ ಪರಸ್ಪರ ಚುಂಬಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ವಿಡಿಯೋ ಅಸಲಿಯತ್ತೇ ಬೇರೆ.

ಇದನ್ನೂ ಓದಿ
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ವಿಡಿಯೋ ಹಿಂದಿನ ಸತ್ಯಾಸತ್ಯತೆಯೇನು?

ಸೋಷಿಯಲ್ ಮೀಡಿಐಆದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಆರ್‌ಜೆ ಮಹ್ವಾಶ್ ಮತ್ತು ಯುಜ್ವೇಂದ್ರ ಚಹಲ್ ಚುಂಬಿಸುತ್ತಿರುವುದು ಎಐ ಜನರೇಟೆಡ್ ವಿಡಿಯೋ. ಇತ್ತೀಚಿನ ದಿನಗಳಲ್ಲಿ AI ಮೂಲಕ ಹಲವು ರೀತಿಯ ವಿಡಿಯೋಗಳನ್ನು ಸೃಷ್ಟಿಸಿಕೊಳ್ಳಬಹುದು. ಅದರಂತೆ ಚಹಲ್-ಮಹ್ವಾಶ್ ಅವರ ಫೋಟೋ ಬಳಿಸಿ ಚುಂಬಿಸುತ್ತಿರುವ ವಿಡಿಯೋ ಸೃಷ್ಟಿಸಲಾಗಿದೆ.

ಚಹಲ್-ಮಹ್ವಾಶ್ AI ವಿಡಿಯೋ:

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಕಹಿ ಸುದ್ದಿ..!

ಯಾರು ಈ ಮಹ್ವಾಶ್?

ಯುಜ್ವೇಂದ್ರ ಚಹಲ್ ಜೊತೆ ಕಾಣಿಸಿಕೊಂಡಿರುವ ಮಹ್ವಾಶ್ ರೆಡಿಯೋ ಜಾಕಿಯೋ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ‘ಸೆಕ್ಷನ್ 108’ ಹೆಸರಿನ ಸಿನಿಮಾ ನಿರ್ಮಾಣ ಸಹ ಮಾಡಿದ್ದಾರೆ. ಹಾಗೆಯೇ ವೆಬ್ ಸೀರಿಸ್ ಒಂದರಲ್ಲಿ ನಾಯಕಿ ಆಗಿಯೂ ನಟಿಸುತ್ತಿದ್ದಾರೆ. ಇದೀಗ ಯುಜ್ವೇಂದ್ರ ಚಹಲ್ ಜೊತೆ ಕಾಣಿಸಿಕೊಳ್ಳುವ ಮೂಲಕ ಮಹ್ವಾಶ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.