Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿ ಹಂಡ್ರೆಡ್ ಲೀಗ್​ನಲ್ಲಿ ಪಾಕ್ ಆಟಗಾರರು ಅನ್​ಸೋಲ್ಡ್; ಐಪಿಎಲ್ ಫ್ರಾಂಚೈಸಿಗಳ ಮೇಲೆ ಕೇಳಿಬಂತು ಆರೋಪ

The Hundred 2025 Draft: 2025ರ ದಿ ಹಂಡ್ರೆಡ್ ಲೀಗ್‌ನ ಆಟಗಾರರ ಡ್ರಾಫ್ಟ್‌ನಲ್ಲಿ ಯಾವುದೇ ಪಾಕಿಸ್ತಾನಿ ಆಟಗಾರ ಆಯ್ಕೆಯಾಗಿಲ್ಲ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನೋಂದಾಯಿಸಿಕೊಂಡಿದ್ದ 45ಕ್ಕೂ ಹೆಚ್ಚು ಪಾಕಿಸ್ತಾನಿ ಆಟಗಾರರು ಯಾವುದೇ ತಂಡದಿಂದ ಆಯ್ಕೆಯಾಗದೆ ಉಳಿದಿದ್ದಾರೆ. ಐಪಿಎಲ್ ಫ್ರಾಂಚೈಸಿಗಳ ಹೂಡಿಕೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಅನುಮಾನವಿದೆ. SA20 ಲೀಗ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಈ ಘಟನೆಯು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟು ಮಾಡಿದೆ.

ದಿ ಹಂಡ್ರೆಡ್ ಲೀಗ್​ನಲ್ಲಿ ಪಾಕ್ ಆಟಗಾರರು ಅನ್​ಸೋಲ್ಡ್; ಐಪಿಎಲ್ ಫ್ರಾಂಚೈಸಿಗಳ ಮೇಲೆ ಕೇಳಿಬಂತು ಆರೋಪ
ಪಾಕಿಸ್ತಾನ ತಂಡ
Follow us
ಪೃಥ್ವಿಶಂಕರ
|

Updated on:Mar 13, 2025 | 3:52 PM

ದಿ ಹಂಡ್ರೆಡ್ (The Hundred) ಲೀಗ್​ನ ಡ್ರಾಫ್ಟ್ ಸಿದ್ಧವಾಗಿದೆ. ಅಚ್ಚರಿಯ ಸಂಗತಿಯೆಂದರೆ ಈ ಇಂಗ್ಲಿಷ್ ಲೀಗ್‌ನಲ್ಲಿ ಒಬ್ಬನೇ ಒಬ್ಬ ಪಾಕಿಸ್ತಾನಿ (Pakistan) ಆಟಗಾರನೂ ಮಾರಾಟವಾಗಿಲ್ಲ. ದಿ ಹಂಡ್ರೆಡ್‌ ಲೀಗ್​ಗೆ 45 ಆಟಗಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಆದರೆ ಒಂದೇ ಒಂದು ತಂಡವೂ ಅವರನ್ನು ಖರೀದಿಸುವ ಮನಸು ಮಾಡಿಲ್ಲ. ನಸೀಮ್ ಶಾ, ಶಾದಾಬ್ ಖಾನ್, ಹಸನ್ ಅಲಿ, ಶಾನ್ ಮಸೂದ್, ಸೈಮ್ ಅಯೂಬ್ ಅವರಂತಹ ಆಟಗಾರರು ದಿ ಹಂಡ್ರೆಡ್‌ನಲ್ಲಿ ಆಡಲು ಬಯಸಿದ್ದರು. ಆದರೆ ಯಾವ ಫ್ರಾಂಚೈಸಿಯೂ ಅವರನ್ನು ಖರೀದಿಸಿಲ್ಲ. ಪುರುಷ ಕ್ರಿಕೆಟಿಗರು ಮಾತ್ರವಲ್ಲ, ಮಹಿಳೆಯರ ದಿ ಹಂಡ್ರೆಡ್ ಲೀಗ್​ನ ಡ್ರಾಫ್ಟ್‌ನಲ್ಲಿದ್ದ ಐವರು ಪಾಕಿಸ್ತಾನಿ ಮಹಿಳಾ ಆಟಗಾರ್ತಿಯರು ಸಹ ಖರೀದಿಯಾಗಿಲ್ಲ. ಈ ಸುದ್ದಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ನಿರಾಶೆಯನ್ನುಂಟು ಮಾಡಿದೆ.

ಒಬ್ಬ ಆಟಗಾರನು ಮಾರಾಟವಾಗಲಿಲ್ಲ

2025 ರ ‘ದಿ ಹಂಡ್ರೆಡ್’ ಸೀಸನ್‌ನ ಆಟಗಾರರ ಡ್ರಾಫ್ಟ್‌ನಲ್ಲಿ ಯಾವುದೇ ಪಾಕಿಸ್ತಾನಿ ಆಟಗಾರನಿಗೆ ಸ್ಥಾನ ಸಿಕ್ಕಿಲ್ಲ. ಪುರುಷರ ಡ್ರಾಫ್ಟ್‌ನಲ್ಲಿ ಪಾಕಿಸ್ತಾನದ 45 ಆಟಗಾರರು ನೋಂದಾಯಿಸಿಕೊಂಡಿದ್ದರು, ಆದರೆ ಅವರಲ್ಲಿ ಯಾರನ್ನೂ ತಂಡಗಳು ಆಯ್ಕೆ ಮಾಡಿಲ್ಲ. ಈ ನಿರ್ಧಾರ ಸ್ವಲ್ಪ ಆಶ್ಚರ್ಯಕರವಾಗಿದೆ, ಏಕೆಂದರೆ ಕಳೆದ ಆವೃತ್ತಿಯ ‘ದಿ ಹಂಡ್ರೆಡ್’ ನಲ್ಲಿ ಪಾಕಿಸ್ತಾನಿ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು. ಒಸಾಮಾ ಮಿರ್, ಹರಿಸ್ ರೌಫ್, ಇಮಾದ್ ವಾಸಿಮ್ ಮತ್ತು ಶಾಹೀನ್ ಅಫ್ರಿದಿಯಂತಹ ಆಟಗಾರರು ಈ ಲೀಗ್‌ನಲ್ಲಿ ಆಡಿದ್ದರು.

ಐಪಿಎಲ್ ಫ್ರಾಂಚೈಸಿಗಳ ಪ್ರಭಾವ?

ವಾಸ್ತವವಾಗಿ ಈ ವರ್ಷ ‘ದಿ ಹಂಡ್ರೆಡ್’ ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಫ್ರಾಂಚೈಸಿಗಳಲ್ಲಿ ಹೂಡಿಕೆ ಮಾಡಲು ಹೊರಗಿನವರಿಗೆ ಆಹ್ವಾನ ನೀಡಿತ್ತು. ಆ ಪ್ರಕಾರ, ಲೀಗ್‌ನಲ್ಲಿ ಆಡುತ್ತಿರುವ 8 ತಂಡಗಳ ಪೈಕಿ, ನಾಲ್ಕು ತಂಡಗಳಲ್ಲಿ ಐಪಿಎಲ್ ಫ್ರಾಂಚೈಸಿಗಳು ಹೂಡಿಕೆ ಮಾಡಿವೆ. ಹೀಗಾಗಿ ಐಪಿಎಲ್ ಫ್ರಾಂಚೈಸಿಗಳು ಪಾಕಿಸ್ತಾನ ಆಟಗಾರರನ್ನು ಖರೀದಿಸದಂತೆ ತಡೆದಿವೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಇಲ್ಲಿರುವ ದೊಡ್ಡ ಪ್ರಶ್ನೆಯೆಂದರೆ, ಐಪಿಎಲ್ ತಂಡಗಳ ಒಡೆತನದಲ್ಲಿಲ್ಲದ ಇತರ ನಾಲ್ಕು ತಂಡಗಳು ಪಾಕಿಸ್ತಾನಿ ಆಟಗಾರರನ್ನು ಏಕೆ ಖರೀದಿಸಲಿಲ್ಲ ಎಂಬುದು.

ಇದನ್ನೂ ಓದಿ
Image
ಕಿವೀಸ್ ಪ್ರವಾಸಕ್ಕೆ ಪಾಕ್ ತಂಡ ಪ್ರಕಟ; ಸ್ಟಾರ್ ಆಟಗಾರರಿಗೆ ಕೋಕ್
Image
ಪಿಎಸ್​ಎಲ್ ವೇಳಾಪಟ್ಟಿ ಪ್ರಕಟ; ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದ ಪಿಸಿಬಿ
Image
16 ಗಂಟೆಗಳ ಆಟಕ್ಕೆ 1800 ಕೋಟಿ ಖರ್ಚು ಮಾಡಿದ ಪಾಕಿಸ್ತಾನ
Image
ಕೆಲವೇ ತಿಂಗಳಲ್ಲಿ ಭಾರತ- ಪಾಕ್ 3 ಪಂದ್ಯಗಳಲ್ಲಿ ಮುಖಾಮುಖಿ

ಇದನ್ನೂ ಓದಿ: Champions Trophy 2025: ಒಂದು ಪಂದ್ಯವನ್ನು ಗೆಲ್ಲದ ಪಾಕಿಸ್ತಾನಕ್ಕೆ ಸಿಕ್ಕಿದ್ದು ಎಷ್ಟು ಕೋಟಿ?

SA20 ಲೀಗ್‌ನಲ್ಲೂ ಇದೆ ಕತೆ

ದಕ್ಷಿಣ ಆಫ್ರಿಕಾದ SA20 ಲೀಗ್‌ನಲ್ಲಿರುವ ಎಲ್ಲಾ ಆರು ತಂಡಗಳು ಸಹ ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿವೆ. ಈ ಲೀಗ್​ನಲ್ಲೂ ಇಲ್ಲಿಯವರೆಗೆ ಒಬ್ಬ ಪಾಕಿಸ್ತಾನಿ ಆಟಗಾರನೂ ಈ ಲೀಗ್‌ನಲ್ಲಿ ಸ್ಥಾನ ಪಡೆದಿಲ್ಲ. ‘ದಿ ಹಂಡ್ರೆಡ್’ ನಲ್ಲಿ ಐಪಿಎಲ್ ಫ್ರಾಂಚೈಸಿಗಳು ಹೂಡಿಕೆ ಮಾಡಿದ ನಂತರ, ಪಾಕಿಸ್ತಾನಿ ಆಟಗಾರರ ಮೇಲೆ ನಿಷೇಧ ಹೇರಬಹುದೆಂಬ ಭಯವಿತ್ತು. ಆದಾಗ್ಯೂ, ಪಾಕಿಸ್ತಾನಿ ಆಟಗಾರರ ಭಾಗವಹಿಸುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಸಿಬಿ ಅಧ್ಯಕ್ಷ ರಿಚರ್ಡ್ ಗೌಲ್ಡ್ ಕಳೆದ ತಿಂಗಳು ಸ್ಪಷ್ಟಪಡಿಸಿದ್ದರು. ಆದರೆ ಡ್ರಾಫ್ಟ್ ನಂತರ, ಈಗ ಪಾಕಿಸ್ತಾನಿ ಅಭಿಮಾನಿಗಳು ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Thu, 13 March 25

ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ಅಪಘಾತದಲ್ಲಿ ಜಖಂಗೊಂಡ ಕಾರಲ್ಲಿ ಮಲಗಿದ್ದರೂ ಚಾಲಕ ಅಪಾಯದಿಂದ ಪಾರು
ಅಪಘಾತದಲ್ಲಿ ಜಖಂಗೊಂಡ ಕಾರಲ್ಲಿ ಮಲಗಿದ್ದರೂ ಚಾಲಕ ಅಪಾಯದಿಂದ ಪಾರು