ಯುಜ್ವೇಂದ್ರ ಚಹಲ್-ಮಹ್ವಾಶ್ ವಿಡಿಯೋ ವೈರಲ್: ಇದರ ಅಸಲಿಯತ್ತೇನು?
Yuzvendra Chahal-RJ Mahvash: ಭಾರತ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅದು ಸಹ ಚೆಂದುಳ್ಳಿ ಚೆಲುವೆ ಮಹ್ವಾಶ್ ಅವರೊಂದಿಗೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ಆರ್‌ಜೆ ಮಹ್ವಾಶ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಚಹಲ್ ಹಾಗೂ ಮಹ್ವಾಶ್ ಅವರ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಟೇಡಿಯಂನಲ್ಲಿ ಚಹಲ್ ಹಾಗೂ ಮಹ್ವಾಶ್ ಪರಸ್ಪರ ಚುಂಬಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ವಿಡಿಯೋ ಅಸಲಿಯತ್ತೇ ಬೇರೆ.
ವಿಡಿಯೋ ಹಿಂದಿನ ಸತ್ಯಾಸತ್ಯತೆಯೇನು?
ಸೋಷಿಯಲ್ ಮೀಡಿಐಆದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಆರ್‌ಜೆ ಮಹ್ವಾಶ್ ಮತ್ತು ಯುಜ್ವೇಂದ್ರ ಚಹಲ್ ಚುಂಬಿಸುತ್ತಿರುವುದು ಎಐ ಜನರೇಟೆಡ್ ವಿಡಿಯೋ. ಇತ್ತೀಚಿನ ದಿನಗಳಲ್ಲಿ AI ಮೂಲಕ ಹಲವು ರೀತಿಯ ವಿಡಿಯೋಗಳನ್ನು ಸೃಷ್ಟಿಸಿಕೊಳ್ಳಬಹುದು. ಅದರಂತೆ ಚಹಲ್-ಮಹ್ವಾಶ್ ಅವರ ಫೋಟೋ ಬಳಿಸಿ ಚುಂಬಿಸುತ್ತಿರುವ ವಿಡಿಯೋ ಸೃಷ್ಟಿಸಲಾಗಿದೆ.
ಚಹಲ್-ಮಹ್ವಾಶ್ AI ವಿಡಿಯೋ:
View this post on InstagramYazuvendra Chahal with RJ Mahavash at Champions Trophy Final😎🤪#INDvsNZ pic.twitter.com/3F7GJnK58b
— Miracle 💫 (@Subhvichaar) March 9, 2025
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಕಹಿ ಸುದ್ದಿ..!
ಯಾರು ಈ ಮಹ್ವಾಶ್?
ಯುಜ್ವೇಂದ್ರ ಚಹಲ್ ಜೊತೆ ಕಾಣಿಸಿಕೊಂಡಿರುವ ಮಹ್ವಾಶ್ ರೆಡಿಯೋ ಜಾಕಿಯೋ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ‘ಸೆಕ್ಷನ್ 108’ ಹೆಸರಿನ ಸಿನಿಮಾ ನಿರ್ಮಾಣ ಸಹ ಮಾಡಿದ್ದಾರೆ. ಹಾಗೆಯೇ ವೆಬ್ ಸೀರಿಸ್ ಒಂದರಲ್ಲಿ ನಾಯಕಿ ಆಗಿಯೂ ನಟಿಸುತ್ತಿದ್ದಾರೆ. ಇದೀಗ ಯುಜ್ವೇಂದ್ರ ಚಹಲ್ ಜೊತೆ ಕಾಣಿಸಿಕೊಳ್ಳುವ ಮೂಲಕ ಮಹ್ವಾಶ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.