AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟ; ಐಪಿಎಲ್ ಜೊತೆ ಪೈಪೋಟಿ, ಬಿಸಿಸಿಐಗೆ ಸವಾಲು ಹಾಕಿದ ಪಿಸಿಬಿ

PSL 2025 Schedule: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2025 ರ ವೇಳಾಪಟ್ಟಿಯನ್ನು ಪಿಸಿಬಿ ಬಿಡುಗಡೆ ಮಾಡಿದೆ. ಏಪ್ರಿಲ್ 11 ರಿಂದ ಮೇ 18 ರವರೆಗೆ ನಡೆಯುವ ಈ ಲೀಗ್, ಐಪಿಎಲ್ ಜೊತೆ ಘರ್ಷಣೆಗೆ ಕಾರಣವಾಗಿದೆ. 34 ಪಂದ್ಯಗಳನ್ನು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ಆಯೋಜಿಸಲಾಗಿದೆ. ಈ ಆವೃತ್ತಿಯಲ್ಲಿ ಮೂರು ಡಬಲ್-ಹೆಡರ್‌ ಪಂದ್ಯಗಳು ಇರುತ್ತವೆ.

ಪಾಕಿಸ್ತಾನ ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟ; ಐಪಿಎಲ್ ಜೊತೆ ಪೈಪೋಟಿ, ಬಿಸಿಸಿಐಗೆ ಸವಾಲು ಹಾಕಿದ ಪಿಸಿಬಿ
Ipl Vs Psl
ಪೃಥ್ವಿಶಂಕರ
|

Updated on:Feb 28, 2025 | 2:33 PM

Share

ಕಳೆದೊಂದು ವರ್ಷದಿಂದ ಬಿಸಿಸಿಐ (BCCI) ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಾ ಪ್ರತಿಯೊಂದರಲ್ಲೂ ಪೈಪೋಟಿ ನೀಡಲು ಯತ್ನಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೀಗ ಗಾಳಿಯೊಂದಿಗೆ ಗುದ್ದಾಡುವ ಕೆಲಸಕ್ಕೆ ಕೈಹಾಕಿದೆ. ಐಪಿಎಲ್​ಗೆ (IPL) ಸೆಡ್ಡು ಹೊಡೆಯುವ ಸಲವಾಗಿ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಆರಂಭಿಸಿದ್ದ ಪಿಸಿಬಿ, ಇದೀಗ ಈ ಮಿಲಿಯನ್ ಡಾಲರ್ ಟೂರ್ನಿಯೊಂದಿಗೆ ರೇಸಿಗಿಳಿಯಲು ತಯಾರಿ ನಡೆಸಿದೆ. ವಾಸ್ತವವಾಗಿ ಪಿಸಿಎಲ್​ನ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಇಂದು ಪಿಸಿಬಿ ಬಿಡುಗಡೆ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಐಪಿಎಲ್ ಮಧ್ಯದಲ್ಲಿಯೇ ಪಿಎಸ್​ಎಲ್ ಆರಂಭವಾಗುತ್ತಿದೆ. ಪಿಎಸ್​ಎಲ್ ಏಪ್ರಿಲ್ 11 ರಿಂದ ಪ್ರಾರಂಭವಾಗಲಿದ್ದು, ಪಂದ್ಯಾವಳಿಯ ಅಂತಿಮ ಪಂದ್ಯ ಮೇ 18 ರಂದು ನಡೆಯಲಿದೆ. ಮತ್ತೊಂದೆಡೆ, ಐಪಿಎಲ್ ಮಾರ್ಚ್ 22 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಮೇ 25 ರಂದು ನಡೆಯಲಿದೆ. ಇದನ್ನು ನೋಡಿದರೆ, ಪಿಸಿಬಿ ಈ ವೇಳಾಪಟ್ಟಿಯೊಂದಿಗೆ ಬಿಸಿಸಿಐಗೆ ಸವಾಲು ಹಾಕಲು ಪ್ರಯತ್ನಿಸಿದೆ ಎಂದು ತೋರುತ್ತದೆ.

ಪಂದ್ಯಾವಳಿಯಲ್ಲಿ 34 ಪಂದ್ಯಗಳು

ಪಾಕಿಸ್ತಾನ ಸೂಪರ್ ಲೀಗ್ 2025 ರ ಮೊದಲ ಪಂದ್ಯವು ರಾವಲ್ಪಿಂಡಿಯಲ್ಲಿ ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಲಾಹೋರ್ ಖಲಂದರ್ ನಡುವೆ ನಡೆಯಲಿದೆ. ಈ ಆವೃತ್ತಿಯ ಪಂದ್ಯಗಳು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲ್ಲಿದ್ದು, ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ 30 ಪಂದ್ಯಗಳು ನಡೆಯಲಿವೆ. ಇದರ ನಂತರ, ಅರ್ಹತಾ ಪಂದ್ಯಗಳು ಮೇ 13 ರಂದು ನಡೆದರೆ, ಮೊದಲ ಎಲಿಮಿನೇಟರ್ ಪಂದ್ಯ ಮೇ 14 ರಂದು ಮತ್ತು ಎರಡನೇ ಎಲಿಮಿನೇಟರ್ ಪಂದ್ಯ ಮೇ 16 ರಂದು ನಡೆಯಲಿವೆ. ಪಂದ್ಯಾವಳಿಯ ಫೈನಲ್ ಪಂದ್ಯವು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ
Image
16 ಗಂಟೆಗಳ ಆಟಕ್ಕೆ 1800 ಕೋಟಿ ಖರ್ಚು ಮಾಡಿದ ಪಾಕಿಸ್ತಾನ
Image
ಕೆಲವೇ ತಿಂಗಳಲ್ಲಿ ಭಾರತ- ಪಾಕ್ 3 ಪಂದ್ಯಗಳಲ್ಲಿ ಮುಖಾಮುಖಿ
Image
ಚಾಂಪಿಯನ್ಸ್ ಟ್ರೋಫಿ: ಆತಿಥೇಯ ಪಾಕಿಸ್ತಾನಕ್ಕೆ 2 ಕೋಟಿಯೂ ಸಿಗಲಿಲ್ಲ
Image
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಹೊರಬಿದ್ದ ಪಾಕಿಸ್ತಾನ

ವೇಳಾಪಟ್ಟಿಯ ಪ್ರಕಾರ ರಾವಲ್ಪಿಂಡಿಯಲ್ಲಿ 11 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಮೇ 13 ರಂದು ನಡೆಯುವ ಪಂದ್ಯಾವಳಿಯ ಮೊದಲ ಪಂದ್ಯ ಮತ್ತು ಕ್ವಾಲಿಫೈಯರ್ 1 ಪಂದ್ಯ ಸೇರಿವೆ. ಹಾಗೆಯೇ ಲಾಹೋರ್‌ನಲ್ಲಿ 13 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಎರಡು ಎಲಿಮಿನೇಟರ್‌ಗಳು ಮತ್ತು ಒಂದು ಫೈನಲ್ ಪಂದ್ಯ ಸೇರಿದೆ. ಇದಲ್ಲದೆ, ಕರಾಚಿ ಮತ್ತು ಮುಲ್ತಾನ್ ತಲಾ 5 ಪಂದ್ಯಗಳ ಆತಿಥ್ಯವನ್ನು ಪಡೆದಿವೆ. ಈ ಆವೃತ್ತಿಯಲ್ಲಿ ಮೂರು ಡಬಲ್-ಹೆಡರ್‌ ಪಂದ್ಯಗಳು ಇರುತ್ತವೆ.

ಬಿಸಿಸಿಐಗೆ ಸವಾಲು ಹಾಕಿದ ಪಿಸಿಬಿ

ಸಾಮಾನ್ಯವಾಗಿ ಪಾಕಿಸ್ತಾನ ಸೂಪರ್ ಲೀಗ್​ ಯಾವಾಗಲೂ ಜನವರಿಯಿಂದ ಮಾರ್ಚ್ ವರೆಗೆ ನಡೆಯುತ್ತಿತ್ತು. ಇದರಿಂದಾಗಿ ವಿವಿದ ದೇಶಗಳ ಸ್ಟಾರ್ ಆಟಗಾರರು ಕೂಡ ಈ ಲೀಗ್​ನಲ್ಲಿ ಆಡುತ್ತಿದ್ದರು. ಏಕೆಂದರೆ ಪಿಎಸ್​ಎಲ್ ಮುಗಿದ ಬಳಿಕ ಐಪಿಎಲ್ ಆರಂಭವಾಗುತಿತ್ತು. ಆದರೆ ಈ ಬಾರಿ ಪಿಎಸ್​ಎಲ್ ಹಾಗೂ ಐಪಿಎಲ್ ಒಂದೇ ಸಮಯದಲ್ಲಿ ನಡೆಯಲ್ಲಿವೆ. ಹೀಗಾಗಿ ಪಿಎಸ್​ಎಲ್​ಗೆ ಸ್ಟಾರ್ ಆಟಗಾರರ ಅಲಭ್ಯತೆಯುಂಟಾಗಲಿದೆ. ಅಲ್ಲದೆ ಟಿವಿಯಲ್ಲಿ ಪಾಕಿಸ್ತಾನಿ ಲೀಗ್ ನೋಡುವ ಜನರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಬಹುದು, ಇದು ಪ್ರಸಾರ ಹಕ್ಕುಗಳ ಗಳಿಕೆಯ ಮೇಲೂ ಪರಿಣಾಮ ಬೀರಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Fri, 28 February 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ