AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs NZ: ಪಾಕಿಸ್ತಾನ ತಂಡದಿಂದ ಬಾಬರ್-ರಿಜ್ವಾನ್ ಔಟ್..! ಯುವ ಆಟಗಾರನಿಗೆ ನಾಯಕತ್ವ

Pakistan Announces Squads For New Zealand Tour: ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಾಗಿ ತನ್ನ ತಂಡಗಳನ್ನು ಪ್ರಕಟಿಸಿದೆ. ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ. ಸಲ್ಮಾನ್ ಅಲಿ ಅಘಾ ಟಿ20 ತಂಡದ ನಾಯಕರಾಗಿದ್ದಾರೆ ಮತ್ತು ಮೊಹಮ್ಮದ್ ರಿಜ್ವಾನ್ ಏಕದಿನ ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರು ಎರಡೂ ಸರಣಿಗಳಲ್ಲಿ ಆಡಲಿದ್ದಾರೆ ಆದರೆ ವಿಭಿನ್ನ ತಂಡಗಳಲ್ಲಿ.

PAK vs NZ: ಪಾಕಿಸ್ತಾನ ತಂಡದಿಂದ ಬಾಬರ್-ರಿಜ್ವಾನ್ ಔಟ್..! ಯುವ ಆಟಗಾರನಿಗೆ ನಾಯಕತ್ವ
ಪಾಕಿಸ್ತಾನ ತಂಡ
ಪೃಥ್ವಿಶಂಕರ
|

Updated on:Mar 04, 2025 | 4:02 PM

Share

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದ ಆತಿಥೇಯ ಪಾಕಿಸ್ತಾನ ತಂಡ ಸಾಕಷ್ಟು ನಿಂದನೆಗೆ ಒಳಗಾಗುತ್ತಿದೆ. ತಂಡದ ಹಿರಿಯ ಆಟಗಾರರನ್ನು ಇನ್ನಿಲ್ಲದಂತೆ ಟೀಕಿಸಲಾಗುತ್ತಿದೆ. ಇದೆಲ್ಲದರ ನಡುವೆ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಪಾಕಿಸ್ತಾನ ಏಕದಿನ ಮತ್ತು ಟಿ20 ತಂಡವನ್ನು ಪ್ರಕಟಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಲ್ಮಾನ್ ಅಲಿ ಅಘಾ ಅವರನ್ನು ಟಿ20 ತಂಡದ ನೂತನ ನಾಯಕನನ್ನಾಗಿ ಅಧಿಕೃತವಾಗಿ ನೇಮಿಸಿದೆ. ಹಾಗೆಯೇ ಪಾಕಿಸ್ತಾನದ ಟಿ20 ತಂಡದಿಂದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಕೈಬಿಡಲಾಗಿದೆ.

ಏಕದಿನ ತಂಡಕ್ಕೆ ರಿಜ್ವಾನ್ ನಾಯಕ

ಟಿ20 ತಂಡದ ಹೊರತಾಗಿ, ಪಾಕಿಸ್ತಾನವು ನ್ಯೂಜಿಲೆಂಡ್ ಪ್ರವಾಸದಲ್ಲಿ ನಡೆಯಲಿರುವ ಏಕದಿನ ಸರಣಿಗೂ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಏಕದಿನ ತಂಡದ ನಾಯಕತ್ವ ಮೊಹಮ್ಮದ್ ರಿಜ್ವಾನ್ ಕೈಯಲ್ಲಿದೆ. ಕಳಪೆ ಪ್ರದರ್ಶನದ ಹೊರತಾಗಿಯೂ ಅನುಭವಿ ಬ್ಯಾಟರ್ ಬಾಬರ್ ಆಝಂ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಬರ್ ಮತ್ತು ರಿಜ್ವಾನ್ ಹೊರತುಪಡಿಸಿ, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್ ಅವರಂತಹ ಆಟಗಾರರು ಕೂಡ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಟಿ20 ತಂಡಕ್ಕೆ ನೂತನ ನಾಯಕ

ಟಿ20 ಸರಣಿಗೆ ಪಾಕಿಸ್ತಾನ 16 ಸದಸ್ಯರ ಟಿ20 ತಂಡವನ್ನು ಪ್ರಕಟಿಸಿದ್ದು, ಯುವ ಆಟಗಾರನಿಗೆ ನಾಯಕತ್ವ ನೀಡಲಾಗಿದೆ. ವಾಸ್ತವವಾಗಿ ನಾಯಕತ್ವದ ರೇಸ್‌ನಲ್ಲಿ ಸಲ್ಮಾನ್ ಅಲಿ ಅಘಾ ಅವರ ಹೆಸರು ಈಗಾಗಲೇ ಮುಂಚೂಣಿಯಲ್ಲಿತ್ತು. ಈಗ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಸಲ್ಮಾನ್ ಅಲಿ ಅಘಾ ನಾಯಕತ್ವವಹಿಸಿಕೊಂಡರೆ, ಶದಾಬ್ ಖಾನ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ಶಾಹೀನ್- ನಸೀಮ್ ಕಥೆ ಏನು?

ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ಪಾಕಿಸ್ತಾನ ಏಕದಿನ ಮತ್ತು ಟಿ20 ತಂಡದಲ್ಲಿ ಶಾಹೀನ್ ಶಾ ಅಫ್ರಿದಿ ಹಾಗೂ ನಸೀಮ್​ ಶಾಗೂ ಅವಕಾಶ ಸಿಕ್ಕಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಶಾಹೀನ್‌ಗೆ ಏಕದಿನ ತಂಡದಿಂದ ಗೇಟ್​ಪಾಸ್ ನೀಡಿದ್ದರೆ ಟಿ20 ತಂಡದಲ್ಲಿ ಸ್ಥಾನ ನೀಡಿದೆ. ಹಾಗೆಯೇ ನಸೀಮ್ ಶಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದು, ಟಿ20 ತಂಡದಿಂದ ಹೊರಬಿದ್ದಿದ್ದಾರೆ.

ನ್ಯೂಜಿಲೆಂಡ್ ಪ್ರವಾಸಕ್ಕೆ ಪಾಕಿಸ್ತಾನ ತಂಡ

ಏಕದಿನ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ಉಪನಾಯಕ), ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಆಕಿಬ್ ಜಾವೇದ್, ಫಹೀಮ್ ಅಶ್ರಫ್, ಬಾಬರ್ ಆಝಂ, ಇಮಾಮ್ ಉಲ್ ಹಕ್, ಖುಶ್ದಿಲ್ ಶಾ, ಮೊಹಮ್ಮದ್ ಅಲಿ, ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಸುಫಿಯಾನ್ ಮೋಕಿಮ್, ತಯ್ಯಬ್ ತಾಹಿರ್.

ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಶದಾಬ್ ಖಾನ್ (ಉಪನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಶಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ನವಾಜ್, ಜಹಾಂದಾದ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಖುಶ್ದಿಲ್ ಶಾ, ಮೊಹಮ್ಮದ್ ಅಲಿ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ಇರ್ಫಾನ್ ಖಾನ್, ಒಮರ್ ಬಿನ್ ಯೂಸುಫ್, ಸುಫಿಯಾನ್ ಮೋಕಿಮ್, ಉಸ್ಮಾನ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Tue, 4 March 25