Faf Duplessis: ಹ್ಯಾಟ್ರಿಕ್ ಸೋಲು: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಡುಪ್ಲೆಸಿಸ್ ಆಡಿದ ಮಾತುಗಳೇನು ನೋಡಿ

| Updated By: Vinay Bhat

Updated on: May 01, 2022 | 9:07 AM

GT vs RCB, IPL 2022: ಎಷ್ಟೆ ಪ್ರಯತ್ನ ಪಟ್ಟರೂ ಗೆಲುವು ಸಾಧಿಸುವಲ್ಲಿ ಎಡವುತ್ತಿರುವ ಆರ್​ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧವೂ ಸೋತ ಪರಿಣಾಮ ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದರು ಕೇಳಿ.

Faf Duplessis: ಹ್ಯಾಟ್ರಿಕ್ ಸೋಲು: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಡುಪ್ಲೆಸಿಸ್ ಆಡಿದ ಮಾತುಗಳೇನು ನೋಡಿ
faf du plessis post-match presentation GT vs RCB
Follow us on

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್ 2022 ರಲ್ಲಿ (IPL 2022) ಸೋಲಿನ ಸುಳಿಗೆ ಸಿಲುಕಿ ಪುಟಿದೇಳಲು ಪರದಾಡುತ್ತಿದೆ. ಎಷ್ಟೆ ಪ್ರಯತ್ನ ಪಟ್ಟರೂ ಗೆಲುವು ಸಾಧಿಸುವಲ್ಲಿ ಎಡವುತ್ತಿರುವ ಡುಪ್ಲೆಸಿಸ್ ಪಡೆ ಶನಿವಾರ ಗುಜರಾತ್ ಟೈಟಾನ್ಸ್ ವಿರುದ್ಧವೂ ಸೋತ ಪರಿಣಾಮ ಇದೀಗ ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ವಿರಾಟ್‌ ಕೊಹ್ಲಿ (Virat Kohli) ಹಾಗೂ ರಜತ್‌ ಪಾಟಿದರ್‌ ಅವರ ಅರ್ಧಶತಕಗಳ ಹೊರತಾಗಿಯೂ 6 ವಿಕೆಟ್‌ಗಳಿಂದ ಸೋಲು ಕಂಡಿತು. ಆರ್‌ಸಿಬಿ ನೀಡಿದ್ದ 171 ರನ್‌ಗಳ ಗುರಿ ಹಿಂಬಾಲಿಸಿದ ಗುಜರಾತ್‌ ರಾಹುಲ್‌ ತೇವಾಟಿಯ ಹಾಗೂ ಡೇವಿಡ್‌ ಮಿಲ್ಲರ್‌ ಅವರ ಸ್ಪೋಟಕ ಬ್ಯಾಟಿಂಗ್ ಸಹಾಯದಿಂದ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಗೆಲವು ಸಾಧಿಸಿತು. ಈ ಮೂಲಕ ಜಿಟಿ ತಂಡ ತನ್ನ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿದರೆ ಇತ್ತ ಆರ್​​ಸಿಬಿ ಸಂಕಷ್ಟಕ್ಕೆ ಸಿಲುಕಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ (faf Duplessis) ಏನು ಹೇಳಿದರು ಕೇಳಿ.

“ನಾವು 175-180 ರನ್​​ಗಳನ್ನು ಎದುರು ನೋಡುತ್ತಿದ್ದೆವು. ಆರಂಭದಲ್ಲಿ ಉತ್ತಮ ರನ್ ಕಲೆಹಾಕಿದೆವು. ಆದರೆ, ಮಧ್ಯಮ ಓವರ್​ನಲ್ಲಿ ಗುಜರಾತ್ ಬೌಲರ್​​ಗಳು ಉತ್ತಮ ಪ್ರದರ್ಶನ ನೀಡಿದರು. ನನಗನಿಸುವ ಪ್ರಕಾರ 5-10 ರನ್ ನಾವು ಕಡಿಮೆ ಹೊಡೆದೆವು. ನಮ್ಮ ಬೌಲಿಂಗ್ ಕೂಡ ಆರಂಭದಲ್ಲಿ ಚೆನ್ನಾಗಿತ್ತು. ಇದರ ನಡುವೆ ಜಿಟಿ ಬ್ಯಾಟರ್​ಗಳು ತಮ್ಮ ಹಿಂದಿನ ಲಯದಲ್ಲಿ ಬ್ಯಾಟ್ ಬೀಸಿದರು. ಕ್ರೆಡಿಟ್ ಅವರಿಗೆ ಸಲ್ಲಬೇಕು. ಚೇಸಿಂಗ್ ಮಾಡುವಾಗ ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ. ರಜತ್ ಪಟಿದಾರ್ ಅವರಿಂದ ಅತ್ಯುತ್ತಮ ಇನ್ನಿಂಗ್ಸ್ ಮೂಡಿಬಂತು. ಇದು ಅವರಿಗೆ ಮತ್ತು ತಂಡಕ್ಕೆ ಸಹಾಯ ಮಾಡಿದೆ. ಕೊನೆಯ ಎರಡು ಪಂದ್ಯಗಳಲ್ಲಿ ನಾವು ಆರೀತಿ ಪ್ರದರ್ಶನ ನೀಡಿ ಈಗ ಹೀಗೆ ಬ್ಯಾಟಿಂಗ್ ಮಾಡುವುದು ಸುಲಭವಲ್ಲ,” ಎಂದು ಹೇಳಿದ್ದಾರೆ.

“ನಾವು ಶಾರ್ಟ್​ ಸೈಡ್​ನಲ್ಲಿ 2-3 ಬೌಂಡರಿಗಳನ್ನು ಸುಲಭವಾಗಿ ಎದುರಾಳಿಗೆ ಬಿಟ್ಟುಕೊಟ್ಟೆವು. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಟಗಾರರು ಇರುವಾಗ ಒತ್ತಡ ಯಾವಾಗಲು ಇರುತ್ತದೆ. ಆದರೆ, ಇದು ಸುಲಭವಲ್ಲ. ಈ ಮೈದಾನದಲ್ಲಿ ಬೌಂಡರಿ ತುಂಬಾ ದೊಡ್ಡದಿದೆ. ವಿರಾಟ್ ಕೊಹ್ಲಿ ಅವರು ಸರಿಯಾದ ಸಮಯದಲ್ಲಿ ಕಮ್​ಬ್ಯಾಕ್ ಮಾಡಿದ್ದಾರೆ. ಈ ಅರ್ಧಶತಕ ಕೊಹ್ಲಿಗೆ ಹಾಗೂ ನಮ್ಮ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಕ್ರಿಕೆಟ್​ನಲ್ಲಿ ಆತ್ಮವಿಶ್ವಾಸ ಮುಖ್ಯ. ಇದರಿಂದ ಮುಂದೆ ಹೋಗಲು ಸಹಾಯವಾಗುತ್ತದೆ. ಟಾಪ್ 4 ರಲ್ಲಿ ಯಾರಾದರು ಒಬ್ಬ ಬ್ಯಾಟರ್ 70 ರಿಂದ 80 ರನ್ ಕಲೆಹಾಕಬೇಕು. 30-40 ರನ್ ಗಳಿಸಿದರೆ ಅದು ಪಂದ್ಯ ಗೆಲ್ಲಲು ಸಹಾಯ ಮಾಡುವುದಿಲ್ಲ,” ಎಂಬುದು ಫಾಫ್ ಮಾತು.

GT vs RCB: ಗುಜರಾತ್ ವಿರುದ್ಧ ಆರ್​ಸಿಬಿ ಸೋಲಲು ಕಾರಣವಾಯಿತೆ ಆ ಒಂದು ನಿರ್ಧಾರ?

ಇನ್ನು ಗೆದ್ದ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, “ಆಟಗಾರರು ಸಂಕಷ್ಟದಲ್ಲಿ ಸಂದರ್ಭದಲ್ಲಿ ಬಂದು ಅವರಿಂದ ಏನು ಸಾಧ್ಯವೋ ಅದನ್ನು ತಂಡಕ್ಕೆ ತೋರ್ಪಡಿಸುವುದು ನಮ್ಮ ತಂಡದಲ್ಲಿ ಒಂದು ಅಭ್ಯಾಸ ಆಗಿದೆ. ಮಿಲ್ಲರ್, ತೇವಾಟಿಯ ಹಾಗೂ ರಶೀದ್ ಅವರ ಆತ್ಮಿವಿಶ್ವಾಸವನ್ನು ಮೆಚ್ಚಲೇ ಬೇಕು. ಅವರು ಪ್ರತಿ ಪಂದ್ಯದಲ್ಲಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಪಂದ್ಯವನ್ನು ಫಿನಿಶ್ ಮಾಡುತ್ತಿದ್ದಾರೆ. ಜನರು ಹೇಳುತ್ತಾರೆಂದು ಅದನ್ನು ನಾವು ಆಡುವುದಿಲ್ಲ. ದಿನದ ಕೊನೆಯಲ್ಲಿ ಸುಧಾರಿಸಬೇಕಿರುವುದು ನಾವು. ತೇವಾಟಿಯ ಜೊತೆ ನಾನು ಸಾಕಷ್ಟು ಮಾತುಕತೆ ನಡೆಸಿದ್ದೇನೆ. ಅವರಿಗೆ ಅವರ ಮೇಲೆ ತುಂಬಾ ನಂಬಿಕೆಯಿದೆ. ಈರೀತಿ ಆಡಬೇಕು ಎಂದರೆ ನೀವು ಸೂಪರ್ ಕೂಡ ಆಗರಬೇಕು. ನಾಳೆ (ಅಂದರೆ ಇಂದು) ಗುಜರಾತ್ ದಿನ ಆಗಿರುವುದರಿಂದ ಈ ಗೆಲುವವನ್ನು ಗುಜರಾತ್ ಜನರಿಗೆ ಅರ್ಪಿಸುತ್ತೇವೆ,” ಎಂದು ಹೇಳಿದ್ದಾರೆ.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ