Faf Duplessis: ಹೀನಾಯ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ದೂರಿದ್ದು ಯಾರನ್ನು ಗೊತ್ತೇ?

KKR vs RCB, IPL 2023: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್-ಬೌಲಿಂಗ್​ನಲ್ಲಿ ವೈಫಲ್ಯ ಅನುಭವಿಸಿದ ಆರ್​ಸಿಬಿ ಕೇವಲ 123 ರನ್​ಗೆ ಆಲೌಟ್ ಆಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ದಾರೆ ಕೇಳಿ.

Faf Duplessis: ಹೀನಾಯ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ದೂರಿದ್ದು ಯಾರನ್ನು ಗೊತ್ತೇ?
faf du plessis post match presentation
Follow us
Vinay Bhat
|

Updated on:Apr 07, 2023 | 9:06 AM

ಇಂಡಿಯನ್ ಪ್ರೀಮಿಯರ್ ಲೀಗ್​ (IPL 2023) 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಮೆರೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್​ಸಿಬಿ (KKR vs RCB) 200+ ರನ್ ಬಿಟ್ಟುಕೊಟ್ಟಿತು. ಅಲ್ಲದೆ ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾಗಿ ಕೇವಲ 123 ರನ್​ಗೆ ಆಲೌಟ್ ಆಯಿತು. ಪಂದ್ಯ ಮುಗಿದ ಬಳಿಕ ತಂಡದ ಸೋಲಿನ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf Duplessis) ಏನು ಹೇಳಿದ್ದಾರೆ ಕೇಳಿ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಫಾಫ್‌ ಡುಪ್ಲೆಸಿಸ್‌, “ಬೌಲಿಂಗ್​ನಲ್ಲಿ ನಾವು ಉತ್ತಮ ಆರಂಭವನ್ನು ಪಡೆದುಕೊಂಡೆವು. 13 ಓವರ್‌ಗಳು ಆಗುವ ಸಮಯದಲ್ಲಿ ಕೆಕೆಆರ್ ಮೊತ್ತ 5 ವಿಕೆಟ್ ನಷ್ಟಕ್ಕೆ 100 ರನ್​ ಗಳಿಸಿತ್ತು. ಆದರೆ, ಶಾರ್ದುಲ್‌ ಠಾಕೂರ್‌ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು. ನಮ್ಮ ಸೋಲಿಗೆ ಅವರ ಬ್ಯಾಟಿಂಗ್ ಪ್ರದರ್ಶನ ಮುಖ್ಯ ಕಾರಣವಾಯಿತು. ಇದರ ಜೊತೆಗೆ 20 ರಿಂದ 25 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿದ್ದೇವೆ. ಎದುರಾಳಿ ತಂಡದ ಲೆಗ್‌ ಸ್ಪಿನ್ನರ್‌ಗಳು ಕೂಡ ಅದ್ಭುತವಾಗಿ ಬೌಲ್‌ ಮಾಡಿದ್ದಾರೆ. ಸುನೀಲ್‌ ನರೇನ್ ಹಾಗೂ ವರುಣ್ ಚಕ್ರವರ್ತಿ ಅವರು ನಮ್ಮ ಮೇಲೆ ಹಿಡಿತ ಸಾಧಿಸಿ ರನ್ ಕಲೆಹಾಕದಂತೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು,” ಎಂದು ಹೇಳಿದ್ದಾರೆ.

“ಈಡನ್ ಗಾರ್ಡನ್ಸ್ ವಿಕೆಟ್‌ ಅತ್ಯುತ್ತಮವಾಗಿದೆ. ಇಂದು ನಮ್ಮ ಬ್ಯಾಟಿಂಗ್‌ ವಿಭಾಗದಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರಲಿಲ್ಲ. ಕನಿಷ್ಠ 160ರ ಆಸುಪಾಸಿನಲ್ಲಿ ರನ್‌ ಗಳಿಸಬೇಕಾಗಿತ್ತು. ಆದರೆ, ನಮ್ಮಿಂದ ಇದು ಸಾಧ್ಯವಾಗಲಿಲ್ಲ. ಈ ಸೋಲಿನಿಂದ ಕೆಲವು ವಿಷಯಗಳನ್ನು ಕಲಿತಿದ್ದೇವೆ. ನಮಗೆ ವರ್ಕ್‌ಔಟ್‌ ಆಗುವ ಸಂಗತಿಗಳ ಕಡೆಗೆ ನಾವು ಗಮನ ಹರಿಸಲಿದ್ದೇವೆ. ಈ ಪಂದ್ಯದಲ್ಲಿ ನಾವು ತಾಂತ್ರಿಕವಾಗಿ ಎಡವಿದ್ದೇವೆ. ಮಾಡಿದ ತಪ್ಪುಗಳನ್ನು ತಿದ್ದಿ ನೂತನ ತಂತ್ರವನ್ನು ರೂಪಿಸಬೇಕು”.

ಇದನ್ನೂ ಓದಿ
Image
KKR vs RCB: ಭರ್ಜರಿ ಗೆಲುವಿನ ಬಳಿಕ ಹೀನಾಯ ಸೋಲು: 123 ರನ್​ಗೆ ಆಲೌಟ್ ಆದ ಆರ್​ಸಿಬಿ
Image
IPL 2023: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಇಬ್ಬರು ಆಟಗಾರರ ಎಂಟ್ರಿಗೆ ಡೇಟ್ ಫಿಕ್ಸ್
Image
IPL 2023: KKR vs RCB ಪಂದ್ಯದ ವೇಳೆ ಮಗಳೊಂದಿಗೆ ಶಾರೂಖ್ ಖಾನ್ ಮಿಂಚಿಂಗ್
Image
IPL 2023: RCB ಬೌಲರ್​ಗಳ ಬೆಂಡೆತ್ತಿ ಭರ್ಜರಿ ದಾಖಲೆ ನಿರ್ಮಿಸಿದ ಶಾರ್ದೂಲ್ ಠಾಕೂರ್

IPL 2023: ಹೀನಾಯ ಸೋಲಿನ ಬೆನ್ನಲ್ಲೇ RCB ಗೆ ಬಿಗ್ ಶಾಕ್: ತಂಡದಿಂದ ಹೊರಬಿದ್ದ ಪ್ರಮುಖ ಆಟಗಾರ..!

“ಡೆತ್‌ ಓವರ್‌ಗಳಲ್ಲಿ ಬೌಲ್‌ ಮಾಡುವುದು ಸುಲಭದ ಕೆಲಸವಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಮೊಹಮ್ಮದ್‌ ಸಿರಾಜ್‌ ಹಾಗೂ ಹರ್ಷಲ್‌ ಪಟೇಲ್‌ ಅವರು ಗುಣಮಟ್ಟದ ಬೌಲರ್‌ಗಳಾಗಿದ್ದಾರೆ. ಆದರೆ, ನಾವು ಪ್ಲಾನ್ ಮಾಡಿಕೊಂಡ ರೀತಿ ಅದನ್ನು ಕಾರ್ಯರೂಪಕ್ಕೆ ತಂದಿದ್ದೇವೆಯೆ ಎಂದು ಒಮ್ಮೆ ಪರಿಶೀಲಿಸ ಬೇಕಾಗಿದೆ,” ಎಂಬುದು ಡುಪ್ಲೆಸಿಸ್ ಮಾತಾಗಿತ್ತು.

ಶಾರ್ದೂಲ್ ಠಾಕೂರ್ ಅಬ್ಬರದ ಬ್ಯಾಟಿಂಗ್:

ಈ ಪಂದ್ಯದಲ್ಲಿ ಟಾಸ್​ ಸೋತು ​ಮೊದಲು ಬ್ಯಾಟಿಂಗ್​ಗೆ ಇಳಿದ ಕೆಕೆಆರ್​ಗೆ ರಹಮಾನುಲ್ಲಾ ಅವರು 3 ಸಿಕ್ಸರ್​ ಮತ್ತು 4 ಬೌಂಡರಿಗಳ ಮೂಲಕ 57 ರನ್​ ಗಳಿಸಿದರು. ಆದರೆ, ಮತ್ತೊಂದೆಡೆ ವೆಂಕಟೇಶ್​ ಅಯ್ಯರ್​ (3), ಮಂದೀಪ್​ ಸಿಂಗ್​(0), ನಿತೀಶ್​ ರಾಣಾ (1) ರನ್​ ಗಳಿಸಿ ಪೆವಿಲಿಯನ್​ ಪರೇಡ್​ ನಡೆಸಿದರು. ರಿಂಕು ಸಿಂಗ್​ 3 ಸಿಕ್ಸರ್​ ಮತ್ತು 2 ಬೌಂಡರಿ ಸಹಾಯದಿಂದ 46 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ನಂತರ ಶುರುವಾಗಿದ್ದು ಶಾರ್ದೂಲ್​ ಠಾಕೂರ್​ ಅಬ್ಬರ. 234.48ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇವರು ಕೇವಲ 29 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಗಳಿಸುವ ಮೂಲಕ 68 ರನ್​ ಗಳಿಸಿ ತಂಡ ಬೃಹತ್​ ರನ್​ ಗಳಿಸುವಲ್ಲಿ ಸಹಕರಿಸಿದರು. ಪರಿಣಾಮ ಕೋಲ್ಕತ್ತಾ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಆರ್​ಸಿಬಿ ತಂಡಕ್ಕೆ ಕೊಹ್ಲಿ (21) ಮತ್ತು ಡುಪ್ಲೆಸಿಸ್ (23) ಸಾಧಾರಣ ಆರಂಭ ಒದಗಿಸಿ ಔಟಾದರು. ನಂತರ ತಂಡ ದಿಢೀರ್ ಕುಸಿತ ಕಂಡಿತು. ವರುಣ್ ಚಕ್ರವರ್ತಿ ಅವರು ಒಂದೇ ಓವರ್​ನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್ (5)​ ಮತ್ತು ಹರ್ಷಲ್​ ಪಟೇಲ್​ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸಿದರು. ಮೈಕಲ್​ ಬ್ರೇಸ್​ವೆಲ್ (19) ಕ್ಯಾಚಿತ್ತು ನಿರ್ಗಮಿಸಿದರು. ಶಹಬಾಜ್ ಅಹ್ಮದ್​ ಅವರನ್ನು 1 ರನ್​ಗೆ ನರೈನ್​ ಔಟ್​ ಮಾಡಿದರು. ದಿನೇಶ್​ ಕಾರ್ತಿಕ್ (9), ಅನುಜ್​ ರಾವತ್​ (1) ಮತ್ತು ಕರ್ಣ್​ ಶರ್ಮಾ (1), ಆಕಾಶ್​ ದೀಪ್​ 1, ಡೇವಿಡ್​ ವಿಲ್ಲೆ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆರ್​ಸಿಬಿ 17.4 ಓವರ್​ಗಳಲ್ಲಿ 123 ರನ್​ಗಳಿಗೆ ಸರ್ವಪತನ ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:06 am, Fri, 7 April 23

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ