IPL 2023 Points Table: ಪಾಯಿಂಟ್ ಟೇಬಲ್ ಅನ್ನು ತಲೆಕೆಳಗಾಗಿಸಿದ ಆರ್​ಸಿಬಿ ಸೋಲು-ಕೆಕೆಆರ್ ಗೆಲುವು

IPL 2023 Orange and Purple Cap: ಇದೀಗ ಆರ್​ಸಿಬಿ-ಕೆಕೆಆರ್ ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ ಟೇಬಲ್​ನಲ್ಲಿ ಸಂಪೂರ್ಣ ಬದಲಾವಣೆ ಆಗಿದೆ. ಹಾಗಾದರೆ ಪಾಯಿಂಟ್ಸ್ ಟೇಬಲ್ ಹೇಗಿದೆ ?, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

IPL 2023 Points Table: ಪಾಯಿಂಟ್ ಟೇಬಲ್ ಅನ್ನು ತಲೆಕೆಳಗಾಗಿಸಿದ ಆರ್​ಸಿಬಿ ಸೋಲು-ಕೆಕೆಆರ್ ಗೆಲುವು
KKR vs RCB
Follow us
Vinay Bhat
|

Updated on:Apr 07, 2023 | 10:31 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ (IPL 2023) ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಬಲಿಷ್ಠ ಎಂದುಕೊಂಡಿದ್ದ ತಂಡ ಹೀನಾಯ ಪ್ರದರ್ಶನ ತೋರುತ್ತಿದ್ದರೆ ದುರ್ಬಲವೆಂದು ಹೇಳಲಾಗುತ್ತಿದ್ದ ತಂಡ ಭರ್ಜರಿ ಆಟವಾಡುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಗುರುವಾರ ಐಪಿಎಲ್ 2023 ರಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಣ ಪಂದ್ಯ. ಮೊದಲ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಮೆರೆದಿದ್ದ ಆರ್​ಸಿಬಿ ದ್ವಿತೀಯ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿತು. ಇದೀಗ ಆರ್​ಸಿಬಿ-ಕೆಕೆಆರ್ ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ ಟೇಬಲ್​ನಲ್ಲಿ ಸಂಪೂರ್ಣ ಬದಲಾವಣೆ ಆಗಿದೆ. ಹಾಗಾದರೆ ಪಾಯಿಂಟ್ಸ್ ಟೇಬಲ್ ಹೇಗಿದೆ ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

  • ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಟೇಬಲ್ ಟಾಪ್​ನಲ್ಲಿದೆ. +0.700 ರನ್​ರೇಟ್​ನೊಂದಿಗೆ 4 ಅಂಕ ಸಂಪಾದಿಸಿದೆ.
  • ಪಂಜಾಬ್ ಕಿಂಗ್ಸ್ ಕೂಡ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಕಂಡು 4 ಅಂಕ ಹೊಂದಿ +0.33ರನ್​ರೇಟ್​ ಆಧಾರದ ಮೇಲೆ ದ್ವಿತೀಯ ಸ್ಥಾನದಲ್ಲಿದೆ.
  • ಮೂರನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವಿದೆ. ಆಡಿದ ಎರಡು ಪಂದ್ಯಗಳ ಪೈಕಿ ಸೋಲು-ಗೆಲುವನ್ನು ಕಂಡು +2.056 ರನ್​ರೇಟ್​ನೊಂದಿಗೆ 2 ಅಂಕ ಪಡೆದುಕೊಂಡಿದೆ.
  • ರಾಜಸ್ಥಾನ್ ರಾಯಲ್ಸ್ ನಾಲ್ಕನೇ ಸ್ಥಾನದಲ್ಲಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಸಾಧಿಸಿ 2 ಅಂಕದೊಂದಿಗೆ +1.675 ರನ್​ರೇಟ್ ಕಾಪಾಡಿಕೊಂಡಿದೆ.
  • ಲಖನೌ ಸೂಪರ್ ಜೇಂಟ್ಸ್ ಐದನೇ ಸ್ಥಾನದಲ್ಲಿದೆ. ಆಡಿದ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿ 2 ಅಂಕದೊಂದಿಗೆ +0.950 ರನ್​ರೇಟ್ ಹೊಂದಿದೆ.
  • ನಂತರದ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಒಂದು ಸೋಲುಂಡು 2 ಅಂಕದೊಂದಿಗೆ +0.036 ರನ್​ರೇಟ್ ಕಾಪಾಡಿಕೊಂಡಿದೆ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿದ ಎರಡು ಪಂದ್ಯಗಳ ಪೈಕಿ ಒಂದು ಒಂದು ಸೋಲು ಕಂಡು 2 ಅಂಕ ಸಂಪಾದಿಸಿ -1.256 ರನ್​ರೇಟ್ ಹೊಂದಿದೆ.
  • ಡೆಲ್ಲಿ ಕ್ಯಾಪಿಟಲ್ಸ್ ಎಂಟನೇ ಸ್ಥಾನದಲ್ಲಿದೆ. ಆಡಿದ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -1.703 ರನ್​ರೇಟ್ ಹೊಂದಿದೆ.
  • ಮುಂಬೈ ಇಂಡಿಯನ್ಸ್ ಒಂಬತ್ತನೆ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -1.981 ರನ್​ರೇಟ್ ಹೊಂದಿದೆ.
  • ಕೊನೆಯ ಸ್ಥಾನದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವಿದೆ. ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -3.600 ರನ್​ರೇಟ್ ಹೊಂದಿದೆ.

IPL 2023: RCB ಬೌಲರ್​ಗಳ ಬೆಂಡೆತ್ತಿ ಭರ್ಜರಿ ದಾಖಲೆ ನಿರ್ಮಿಸಿದ ಶಾರ್ದೂಲ್ ಠಾಕೂರ್

ಆರೆಂಜ್ ಕ್ಯಾಪ್:

ಇದನ್ನೂ ಓದಿ
Image
Faf Duplessis: ಹೀನಾಯ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ದೂರಿದ್ದು ಯಾರನ್ನು ಗೊತ್ತೇ?
Image
KKR vs RCB: ಭರ್ಜರಿ ಗೆಲುವಿನ ಬಳಿಕ ಹೀನಾಯ ಸೋಲು: 123 ರನ್​ಗೆ ಆಲೌಟ್ ಆದ ಆರ್​ಸಿಬಿ
Image
IPL 2023: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಇಬ್ಬರು ಆಟಗಾರರ ಎಂಟ್ರಿಗೆ ಡೇಟ್ ಫಿಕ್ಸ್
Image
IPL 2023: KKR vs RCB ಪಂದ್ಯದ ವೇಳೆ ಮಗಳೊಂದಿಗೆ ಶಾರೂಖ್ ಖಾನ್ ಮಿಂಚಿಂಗ್

ಸಿಎಸ್​ಕೆ ತಂಡದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಜಿಟಿ ವಿರುದ್ಧ 92 ರನ್ ಹಾಗೂ ಲಖನೌ ವಿರುದ್ಧ 57 ರನ್ ಸಿಡಿಸಿದ್ದರು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿ ಒಟ್ಟು 149 ರನ್ ಕಲೆಹಾಕಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಎಲ್​ಎಸ್​ಜಿಯ ಖೈಲ್ ಮೇಯರ್ಸ್ ಅವರಿದ್ದು 126 ರನ್ ಕಲೆಹಾಕಿದ್ದಾರೆ.

ಪರ್ಪಲ್ ಕ್ಯಾಪ್:

ಲಖನೌ ಸೂಪರ್ ಜೇಂಟ್ಸ್ ತಂಡದ ಮಾರ್ಕ್ ವುಡ್ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಡೆಲ್ಲಿ ವಿರುದ್ಧ 5 ವಿಕೆಟ್ ಕಬಳಿಸಿದ್ದರು. ಹಾಗೆಯೆ ಚೆನ್ನೈ ವಿರುದ್ಧ 3 ವಿಕೆಟ್ ಕಿತ್ತಿದ್ದಾರೆ. ಇದೀಗ 8 ವಿಕೆಟ್ ಪಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಕೆಕೆಆರ್​ನ ವರಿಣ್ ಚಕ್ರವರ್ತಿ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದು ಆಡಿದ ಎರಡು ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:28 am, Fri, 7 April 23