Faf Du Plessis: ಹ್ಯಾಟ್ರಿಕ್ ಗೆಲುವು: ಪಂದ್ಯ ಮುಗಿದ ಬಳಿಕ ಆರ್​​ಸಿಬಿ ನಾಯಕ ಡುಪ್ಲೆಸಿಸ್ ಹೇಳಿದ್ದೇನು ಕೇಳಿ

| Updated By: Vinay Bhat

Updated on: Apr 10, 2022 | 9:51 AM

Post-Match Presentation RCB vs MI: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದರು ಎಂಬುದನ್ನು ಕೇಳಿ.

Faf Du Plessis: ಹ್ಯಾಟ್ರಿಕ್ ಗೆಲುವು: ಪಂದ್ಯ ಮುಗಿದ ಬಳಿಕ ಆರ್​​ಸಿಬಿ ನಾಯಕ ಡುಪ್ಲೆಸಿಸ್ ಹೇಳಿದ್ದೇನು ಕೇಳಿ
Faf Du Plessis Post Match Presentation RCB vs MI
Follow us on

ಐಪಿಎಲ್ 2022ರ (IPL 2022) ಚೊಚ್ಚಲ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು ಸಾಧ್ಯವಾಗದೆ ಸೋಲಿನೊಂದಿಗೆ ಟೂರ್ನಿಯ ಅಭಿಯಾನವನ್ನು ಆರಂಭಿಸಿತ್ತು. ಆದರೆ, ನಂತರ ಆಡಿದ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಭರ್ಜರಿ ಗೆಲುವು ಸಾಧಿಸಿ ಆರ್​ಸಿಬಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಅದರಲ್ಲೂ ಶನಿವಾರ ನಡೆದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (RCB vs MI) ವಿರುದ್ಧದ ಪಂದ್ಯದಲ್ಲಿ ಫಾಫ್ ಪಡೆ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, 6 ವಿಕೆಟ್‌ಗೆ 151 ರನ್‌ಗಳಿಸಿತು. ಆರ್​ಸಿಬಿ ಅನುಜ್ ರಾವತ್ (66 ರನ್) ಹಾಗೂ ವಿರಾಟ್ ಕೊಹ್ಲಿ ಕಟ್ಟಿದ ಅದ್ಭುತ ಇನಿಂಗ್ಸ್ ಫಲವಾಗಿ 152 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf Duplessis) ಏನು ಹೇಳಿದರು ಎಂಬುದನ್ನು ಕೇಳಿ.

“ಈ ಪಂದ್ಯವನ್ನು ಗೆದ್ದಿರುವುದು ತುಂಬಾ ಸಂತಸ ತಂದಿದೆ. ಮುಂಬೈ ಇಂಡಿಯನ್ಸ್ ಅತ್ಯಂತ ಬಲಿಷ್ಠ ತಂಡ. ನಮ್ಮ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. 18ನೇ ಓವರ್​ನಲ್ಲಿ ಅವರು ಉತ್ತಮ ಬ್ಯಾಟಿಂಗ್ ನಡೆಸಿದರು. ಕೊನೇ ಹಂತದಲ್ಲಿ ಮುಂಬೈ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿತು. ಗೆಲುವಿನ ಬಳಿಕ ಇಲ್ಲಿ ನಿಂತಿರುವುದಕ್ಕೆ ಖುಷಿ ಇದೆ. 152 ರನ್ ಸುಲಭ ಟಾರ್ಗೆಟ್ ಅಲ್ಲ. ಬೌಲರ್​​ಗಳಿಗೆ ಹೊಸ ಬಾಲ್​​ನಲ್ಲಿ ಏನೋ ಇದೆ. ರೋಹಿತ್ ಆರಂಭದಲ್ಲಿ ಹೊಡೆದ ಕೆಲವು ಶಾಟ್ ಅದ್ಭುತವಾಗಿತ್ತು. ಅವರ ವಿಕೆಟ್ ಪಡೆದಿದ್ದು ತುಂಬಾ ಉಪಯುಕ್ತವಾಯಿತು,” ಎಂದು ಹೇಳಿದ್ದಾರೆ.

“ಆಕಾಶ್ ದೀಪ್ ಬೌಲಿಂಗ್ ಪ್ರದರ್ಶನ ಚೆನ್ನಾಗಿತ್ತು. ಬ್ಯಾಕ್ ಆಫ್ ಲೆಂತ್ ಜೊತೆಗೆ ಚೆಂಡನ್ನು ಸೀಮ್ ಮಾಡುತ್ತಿದ್ದರು. ಆ ಹೊಸ ಚೆಂಡಿನಲ್ಲಿ ಏನೋ ವಿಶೇಷ ಇದೆ. ನಮ್ಮ ಬೌಲಿಂಗ್ ಪ್ರದರ್ಶನ ಮಾತ್ರ ಅದ್ಭುತವಾಗಿತ್ತು. ಪಂದ್ಯ ಆರಂಭ ಆಗುವುದಕ್ಕೂ ಮುನ್ನ ನಾನು ಅನುಜ್ ರಾವತ್ ಬಳಿ ಮಾತುಕತೆ ನಡೆಸಿದ್ದೆ. ಅವರಿಗೆ ಆ ಸಾಮರ್ಥ್ಯವಿದೆ. ನಮ್ಮಿಬ್ಬರ ನಡುವೆ ತುಂಬಾ ಚರ್ಚೆ ನಡೆದಿತ್ತು. ಅದು ಸಹಕಾರಿ ಆಗಿದೆ. ಭವಿಷ್ಯದಲ್ಲಿ ರಾವತ್ ಒಬ್ಬ ಉತ್ತಮ ಆಟಗಾರನಾಗಿ ಹೊರಹೊಮ್ಮಲಿದ್ದಾರೆ,” ಎಂಬುದು ಡುಪ್ಲೆಸಿಸ್ ಮಾತು.

ಇನ್ನು ಸೋತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, “ನಮ್ಮಲ್ಲಿ ಕೆಲ ವಿದೇಶಿ ಆಟಗಾರರು ಇಂದಿನ ಪಂದ್ಯಕ್ಕೆ ಅಲಭ್ಯರಾದರು. ಹೀಗಾಗಿ ನಮ್ಮಲ್ಲಿರುವ ಸಾಮರ್ಥ್ಯವನ್ನು ತೋರ್ಪಡಿಸಬೇಕಾಗಿತ್ತು. ನಾನು ಎಷ್ಟಾಗುತ್ತೊ ಅಷ್ಟು ಸಮಯದ ವರೆಗೆ ಬ್ಯಾಟಿಂಗ್ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಕೆಟ್ಟ ಸಮಯದಲ್ಲಿ ಔಟಾದೆ. ನಾನು ಮತ್ತು ಕಿಶನ್ 50 ರನ್​ಗಳ ಜೊತೆಯಾಟ ಆಡಿದೆವು. ಔಟಾದಾಗ ನೋವಾಯಿತು. ನಿಜವಾಗಿಯೂ ಇದು 150 ರನ್ ಗಳಿಸುವ ಪಿಚ್ ಅಲ್ಲ. ಸೂರ್ಯಕುಮಾರ್ ಉತ್ತಮವಾಗಿ ಬ್ಯಾಟ್ ಮಾಡಿ ನೀವು ಇಲ್ಲಿ ಇನ್ನೂ ಅಧಿಕ ರನ್ ಕಲೆಹಾಕಬಹುದು ಎಂದು ತೋರಿಸಿದರು. 150 ರನ್ ತಲುಪಲು ಸೂರ್ಯ ಅವರಿಗೆ ಕ್ರೆಡಿಟ್ ಸಲ್ಲಬೇಕು,” ಎಂದಿದ್ದಾರೆ.

“ನಮ್ಮ ಬೌಲರ್​ಗಳನ್ನು ಎಚ್ಚರಿಕೆಯಿಂದ ಎದುರಿಸಿ ಅವರು ಉತ್ತಮ ಬ್ಯಾಟಿಂಗ್ ನಡೆಸಿದರು. ನಾವು ರನ್ ಗಳಿಸಿದ್ದರೆ ನಮ್ಮ ಬೌಲರ್​ಗಳು ಕೂಡ ಏನಾದರು ಮಾಡಲು ಸಾಧ್ಯ. ಕೊನೆಯ ಮೂರು ಪಂದ್ಯಗಳಲ್ಲಿ ನಾವಿದನ್ನು ಮಾಡಲು ಸಾಧ್ಯವಾಗಲಿಲ್ಲ. ಕೊನೆಯ ಪಂದ್ಯದಲ್ಲಿ ನಾವು ಗಳಿಸಿದ್ದು 160 ರನ್. ಈಗ 150 ರನ್. ಈ ಪಿಚ್​ಗೆ ಹೋಲಿಸಿದರೆ ಈ ರನ್ ಸಾಲದು. ಬಲಿಷ್ಠ ತಂಡದೆದುರು ಈ ರನ್ ಎಲ್ಲಿಗೂ ಸಾಲದು. ಬ್ಯಾಟರ್ಸ್ ಮತ್ತು ಬೌಲರ್​ಗಳ ಜೊತೆ ನಾನು ಮಾತನಾಡುತ್ತಿದ್ದೇನೆ. ನಮ್ಮವರಿಗೆ ಸೀಮ್ಸ್ ಮಿಸ್ ಆಗುತ್ತಿದೆ. ಆ ಲಯ ಸಿಕ್ಕರೆ ನಾವು ಕಂಡಿತಾ ಕಮ್​​ಬ್ಯಾಕ್ ಮಾಡುತ್ತೇವೆ,” ಎಂದು ರೋಹಿತ್ ಹೇಳಿದ್ದಾರೆ.

KKR vs DC: ಐಪಿಎಲ್​​ನಲ್ಲಿಂದು ಡಬಲ್ ಧಮಾಕ: ಸೂಪರ್ ಸಂಡೆಯಲ್ಲಿ ಎರಡು ರಣ ರೋಚಕ ಕದನ

RCB vs MI: ಅಬ್ಬಾ ಎಂಥಾ ಬ್ಯಾಟಿಂಗ್, ಎಂಥಾ ಸಿಕ್ಸ್: ರೋಹಿತ್ ಪಡೆಯನ್ನು ಅಟ್ಟಾಡಿಸಿದ ರಾವತ್