Virat Kohli: ಪಂದ್ಯದ ಮಧ್ಯೆ ಕೊಹ್ಲಿ ಬಳಿ ಓಡಿ ಬಂದ ರೋಹಿತ್ ಅಭಿಮಾನಿ: ನಂತರ ಆಗಿದ್ದೇನು ನೋಡಿ

Rohit Sharma, RCB vs MI: ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯುತ್ತಿರುವಾಗ ಅಭಿಮಾನಿಯೊಬ್ಬರು ಮೈದಾನದೊಳಗೆ ಎಂಟ್ರಿ ಕೊಟ್ಟು ಒಂದು ಕ್ಷಣ ಎಲ್ಲರನ್ನೂ ದಂಗಾಗಿಸಿದ್ದಾರೆ. ಆ ಕ್ಷಣ ಅಲ್ಲಿ ಆಗಿದ್ದೇನು ನೋಡಿ.

Virat Kohli: ಪಂದ್ಯದ ಮಧ್ಯೆ ಕೊಹ್ಲಿ ಬಳಿ ಓಡಿ ಬಂದ ರೋಹಿತ್ ಅಭಿಮಾನಿ: ನಂತರ ಆಗಿದ್ದೇನು ನೋಡಿ
Rohit Sharma Fan and Virat Kohli
Follow us
TV9 Web
| Updated By: Vinay Bhat

Updated on: Apr 10, 2022 | 11:40 AM

ಶನಿವಾರ ಐಪಿಎಲ್ 2022 ರಲ್ಲಿ (IPL 2022) ನಡೆದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ (RCB vs MI) ನಡುವಣ ಪಂದ್ಯ ಹೈವೋಲ್ಟೇಜ್ ಮ್ಯಾಚ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಹ್ಯಾಟ್ರಿಕ್ ಸೋಲುಂಡು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಮುಂಬೈಗೆ ಗೆಲುವು ಅನಿವಾರ್ಯವಾಗಿದ್ದರೆ ಇತ್ತ ಹ್ಯಾಟ್ರಿಕ್ ಗೆಲುವು ಸಾಧಿಸಲು ಆರ್​ಸಿಬಿಗೆ ಜಯದ ಅವಶ್ಯಕತೆಯಿತ್ತು. ಆದರೆ, ಪಂದ್ಯ ಸಂಪೂರ್ಣ ಒನ್ ಸೈಡ್ ಆಯಿತು. ಆರ್​​ಸಿಬಿ ತಂಡ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿತು. ಹೈಸ್ಕೋರ್ ಗೇಮ್ ಆಗಬಹುದೆಂದು ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಆರ್​ಸಿಬಿ-ಮುಂಬೈ ಅಭಿಮಾನಿಗಳ ಕೂಗು ಜೋರಾಗಿಯೇ ಇತ್ತು. ಇದರ ನಡುವೆ ಪಂದ್ಯ ನಡೆಯುತ್ತಿರುವಾಗ ಅಭಿಮಾನಿಯೊಬ್ಬರು ಮೈದಾನದೊಳಗೆ ಎಂಟ್ರಿ ಕೊಟ್ಟು ಒಂದು ಕ್ಷಣ ಎಲ್ಲರನ್ನೂ ದಂಗಾಗಿಸಿದರು. ಸೆಕ್ಯುರಿಟಿ ಕಣ್ಣು ತಪ್ಪಿಸಿ ಮೈದಾನದೊಳಕ್ಕೆ ಪ್ರವೇಶ ಪಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.

ಹೌದು, ಆರ್​​ಸಿಬಿ ತಂಡ ಮುಂಬೈ ನೀಡಿದ್ದ 152 ರನ್​ಗಳ ಟಾರ್ಗೆಟ್ ಬೆನ್ನಟ್ಟುತ್ತಿತ್ತು. ವಿರಾಟ್ ಕೊಹ್ಲಿ ಮತ್ತು ಅನುಜ್ ರಾವತ್ ಕ್ರೀಸ್​ನಲ್ಲಿದ್ದರು. 12ನೇ ಓವರ್ ಮುಕ್ತಾಯವಾದ ಸಂದರ್ಭ ಅಭಿಮಾನಿಯೊಬ್ಬರು ಸೆಕ್ಯುರಿಟಿಗೆ ತಿಳಿಯದಂತೆ ದಿಢೀರ್ ಆಗಿ ಮೈದಾನಕ್ಕೆ ಪ್ರವೇಶ ಪಡೆದರು. ಇವರು ರೋಹಿತ್ ಶರ್ಮಾ ಅಭಿಮಾನಿಯಾಗಿದ್ದು ನೇರವಾಗಿ ಹಿಟ್​ಮ್ಯಾನ್ ಬಳಿ ಬಂದರು. ಒಂದು ಹಗ್ ನೀಡುವಂತೆ ಮನವಿ ಮಾಡಿಕೊಂಡರು. ರೋಹಿತ್ ದೂರದಿಂದಲೇ ಹಗ್ ಮಾಡುವ ರೀತಿ ನಟಿಸಿದರು. ಇಲ್ಲಿಗೆ ನಿಲ್ಲದ ಆ ಅಭಿಮಾನಿ ಕ್ರೀಸ್​​ನಲ್ಲಿದ್ದ ವಿರಾಟ್ ಕೊಹ್ಲಿ ಬಳಿಯೂ ಬಂದಿದ್ದಾರೆ. ಕೊಹ್ಲಿಯಿಂದಲೂ ಹಗ್ ಬೇಕು ಎಂದಿದ್ದಾರೆ. ಆಗ ಕೊಹ್ಲಿ ಕೈಯಿಂದ ಅಪ್ಪಿಕೊಳ್ಳುವ ರೀತಿ ಆ್ಯಕ್ಷನ್ ಮಾಡಿ ಅಭಿಮಾನಿಯ ಆಸೆ ಈಡೇರಿಸಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.

ಇನ್ನು ಈ ಪಂದ್ಯ ಬಗ್ಗೆ ಮಾತನಾಡುವುದಾದರೆ, ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕದನದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಸವಾರಿ ನಡೆಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, 6 ವಿಕೆಟ್‌ಗೆ 151 ರನ್‌ಗಳಿಸಿತು. ಸೂರ್ಯಕುಮಾರ್ ಯಾದವ್ (68*ರನ್, 37 ಎಸೆತ, 5 ಬೌಂಡರಿ, 6 ಸಿಕ್ಸರ್) ಏಕಾಂಗಿ ನಿರ್ವಹಣೆ ತೋರಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಪ್ರತಿಯಾಗಿ ಆರ್‌ಸಿಬಿ, ಅನುಜ್ ರಾವತ್ (66 ರನ್, 47 ಎಸೆತ, 2 ಬೌಂಡರಿ, 6 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (48 ರನ್, 36 ಎಸೆತ, 5 ಬೌಂಡರಿ) ಕಟ್ಟಿದ ಅದ್ಭುತ ಇನಿಂಗ್ಸ್ ಫಲವಾಗಿ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 152 ರನ್‌ಗಳಿಸಿ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಐದನೇ ಸ್ಥಾನದಲ್ಲಿದ್ದ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆರು ಅಂಕದೊಂದಿಗೆ ಆರ್​ಸಿಬಿ ನಿವ್ವಳ ರನ್ ರೇಟ್ 0.294 ಆಗಿದೆ. ಇತ್ತ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಆಡಿದ ನಾಲ್ಕೂ ಪಂದ್ಯದಲ್ಲಿ ಸೋಲುಂಡಿದೆ. ಮುಂಬೈ ನಿವ್ವಳ ರನ್ ರೇಟ್ -1.181 ಆಗಿದೆ. ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ನಾಲ್ಕು ಸೋಲುಗಳನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಏಪ್ರಿಲ್ 12 ಮಂಗಳವಾರದಂದು ಆಡಲಿದೆ.

IPL 2022 Points Table: ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದ ಆರ್​​ಸಿಬಿ: ಪಾತಾಳದಲ್ಲಿ ಸಿಎಸ್​ಕೆ, ಮುಂಬೈ

Faf Du Plessis: ಹ್ಯಾಟ್ರಿಕ್ ಗೆಲುವು: ಪಂದ್ಯ ಮುಗಿದ ಬಳಿಕ ಆರ್​​ಸಿಬಿ ನಾಯಕ ಡುಪ್ಲೆಸಿಸ್ ಹೇಳಿದ್ದೇನು ಕೇಳಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ