‘ಎರಡು ದೊಡ್ಡ ಕನಸುಗಳ ಸಮ್ಮಿಲನ’; ಮತ್ತೊಂದು ದೊಡ್ಡ ಹೆಜ್ಜೆ ಇಡಲು ಹೊಂಬಾಳೆ ಫಿಲ್ಮ್ಸ್ ರೆಡಿ

‘ಎರಡು ದೊಡ್ಡ ಕನಸುಗಳ ಸಮ್ಮಿಲನ. ಮನರಂಜನೆಯ ಹೊಸ ಯುಗಕ್ಕೆ ನಾಂದಿ’ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದ್ದು, ಈ ಬಗ್ಗೆ ಭಾನುವಾರ ಬೆಳಗ್ಗೆ 11:15ಕ್ಕೆ ಘೋಷಣೆ ಆಗಲಿದೆ.

 ‘ಎರಡು ದೊಡ್ಡ ಕನಸುಗಳ ಸಮ್ಮಿಲನ’; ಮತ್ತೊಂದು ದೊಡ್ಡ ಹೆಜ್ಜೆ ಇಡಲು ಹೊಂಬಾಳೆ ಫಿಲ್ಮ್ಸ್ ರೆಡಿ
ಹೊಂಬಾಳೆ-ಆರ್​ಸಿಬಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 09, 2022 | 6:01 PM

‘ಹೊಂಬಾಳೆ ಫಿಲ್ಮ್ಸ್​’ (Hombale Films) ಚಿತ್ರರಂಗದಲ್ಲಿ ದೊಡ್ಡದೊಡ್ಡ ಹೆಜ್ಜೆಗಳನ್ನು ಇಟ್ಟು ಸಾಗುತ್ತಿದೆ. ‘ನಿನ್ನಿಂದಲೇ’ ಚಿತ್ರದ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ ಈ ಸಂಸ್ಥೆ ಈಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು ತೆಲುಗಿನ ಸ್ಟಾರ್ ನಟ ಪ್ರಭಾಸ್ (Prabhas)​ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಇದೇ ಮೊದಲು. ಇನ್ನು, ‘ಕೆಜಿಎಫ್​ 2’ ಚಿತ್ರವನ್ನು (KGF Chapter 2) ವಿಶ್ವಮಟ್ಟದಲ್ಲಿ ದೊಡ್ಡದಾಗಿ ರಿಲೀಸ್​ ಮಾಡುವ ಕೆಲಸವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡಿದೆ. ಇಷ್ಟು ಎತ್ತರಕ್ಕೆ ಬೆಳೆದು ನಿಂತಿರುವ ಹೊಂಬಾಳೆ ಫಿಲ್ಮ್ಸ್’ ಈಗ ಮತ್ತೊಂದು  ದೊಡ್ಡ ಹೆಜ್ಜೆ ಇಡುತ್ತಿದೆ. ಈ ಬಗ್ಗೆ ಭಾನುವಾರ (ಏಪ್ರಿಲ್ 10) 11:45ಕ್ಕೆ ಘೋಷಣೆ ಮಾಡುವುದಾಗಿ ಸಂಸ್ಥೆ ತಿಳಿಸಿದೆ.

ವಿಜಯ್​ ಕಿರಗಂದೂರು ಅವರು ‘ಹೊಂಬಾಳೆ ಫಿಲ್ಮ್ಸ್​’ ಹುಟ್ಟು ಹಾಕಿದರು. 2014ರಲ್ಲಿ ತೆರೆಗೆ ಬಂದ ‘ನಿನ್ನಿಂದಲೇ’ ಈ ಸಂಸ್ಥೆಯ ಮೊದಲ ಸಿನಿಮಾ. ಇದಾದ ನಂತರ 2015ರಲ್ಲಿ ಅವರ ನಿರ್ಮಾಣದ ‘ಮಾಸ್ಟರ್​ಪೀಸ್​’ ತೆರೆಗೆ ಬಂತು. 2017ರಲ್ಲಿ ‘ರಾಜಕುಮಾರ’​ ಸಿನಿಮಾ ರಿಲೀಸ್​ ಆಯಿತು. ‘ಕೆಜಿಎಫ್​: ಚಾಪ್ಟರ್​ 1’ ನಿರ್ಮಾಣ ಮಾಡಿ 2018ರಲ್ಲಿ ಅದನ್ನು ರಿಲೀಸ್​ ಮಾಡಿತು ಹೊಂಬಾಳೆ ಫಿಲ್ಮ್ಸ್​. ಈ ಸಿನಿಮಾ ದೊಡ್ಡ ಯಶಸ್ಸು ಪಡೆಯಿತು. ಆ ಬಳಿಕ ‘ಯುವರತ್ನ’ ಸಿನಿಮಾ ರಿಲೀಸ್​ ಆಯಿತು. ಈಗ ‘ಕೆಜಿಎಫ್​ 2’ ತೆರೆಗೆ ಬರೋಕೆ ರೆಡಿ ಆಗಿದೆ. ಇವುಗಳ ಬೆನ್ನಲ್ಲೇ ‘ಹೊಂಬಾಳೆ ಫಿಲ್ಮ್ಸ್​’ ಹೊಸ ಘೋಷಣೆ ಮಾಡೋಕೆ ರೆಡಿ ಆಗಿದೆ

‘ಎರಡು ದೊಡ್ಡ ಕನಸುಗಳ ಸಮ್ಮಿಲನ. ಮನರಂಜನೆಯ ಹೊಸ ಯುಗಕ್ಕೆ ನಾಂದಿ’ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದ್ದು, ಈ ಬಗ್ಗೆ ಭಾನುವಾರ ಬೆಳಗ್ಗೆ 11:15ಕ್ಕೆ ಘೋಷಣೆ ಆಗಲಿದೆ. ವಿಶೇಷ ಎಂದರೆ, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡ ಇದೇ ಮಾದರಿಯ ಘೋಷಣೆ ಮಾಡಿದೆ. ‘ಎರಡು ಕನಸುಗಳ ಸಮ್ಮಿಲನ’ ಎನ್ನುವ ಕ್ಯಾಪ್ಶನ್​ ನೀಡಿ, ಭಾನುವಾರ ಬೆಳಗ್ಗೆ 11:15ಕ್ಕೆ ಘೋಷಣೆ ಎಂದು ಹೇಳಿದೆ. ಇದರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

‘ಕೆಜಿಎಫ್​ 2’ ರಿಲೀಸ್ ದಿನಾಂಕ ಹತ್ತಿರವಾಗಿದೆ. ಹೀಗಾಗಿ, ಸಿನಿಮಾ ಪ್ರಚಾರಕ್ಕೆ ನಿರ್ಮಾಣ ಸಂಸ್ಥೆ ಈ ರೀತಿಯ ಪ್ಲ್ಯಾನ್ ರೂಪಿಸಿರಬಹುದು ಎಂಬುದು ಕೆಲವರ ಊಹೆ. ಆದರೆ, ಭಾನುವಾರ ಆಗುತ್ತಿರುವ ಘೋಷಣೆ ಸಿನಿಮಾಗೆ ಸಂಬಂಧಿಸಿದ್ದಲ್ಲ, ಬದಲಿಗೆ ಇಡೀ ಇಂಡಸ್ಟ್ರಿಗೆ ಸಂಬಂಧಿಸಿದ್ದು ಎನ್ನುತ್ತಿವೆ ಮೂಲಗಳು. ಈ ಎಲ್ಲಾ ಕುತೂಹಲಕ್ಕೆ ಭಾನುವಾರ ತೆರೆ ಬೀಳಲಿದೆ.

ಇದನ್ನೂ ಓದಿ: ಭಾನುವಾರದಿಂದ ಕರ್ನಾಟಕದಲ್ಲಿ ‘ಕೆಜಿಎಫ್​ ಚಾಪ್ಟರ್ 2’ ಟಿಕೆಟ್ ಬುಕಿಂಗ್​ ಓಪನ್​; ಎಷ್ಟು ಗಂಟೆಗೆ ಶೋ ಶುರು?

ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು

Published On - 5:59 pm, Sat, 9 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ