KKR vs DC: ಐಪಿಎಲ್​​ನಲ್ಲಿಂದು ಡಬಲ್ ಧಮಾಕ: ಸೂಪರ್ ಸಂಡೆಯಲ್ಲಿ ಎರಡು ರಣ ರೋಚಕ ಕದನ

RR vs LSG: ಐಪಿಎಲ್​ 2022 ರಲ್ಲಿಂದು ಎರಡು ಪಂದ್ಯ. ಮಧ್ಯಾಹ್ನ 3.30ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ದ್ವಿತೀಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಲಖನೌ ಸೂಪರ್ ಜೇಂಟ್ಸ್ ಮುಖಾಮುಖಿ ಆಗಲಿದೆ.

KKR vs DC: ಐಪಿಎಲ್​​ನಲ್ಲಿಂದು ಡಬಲ್ ಧಮಾಕ: ಸೂಪರ್ ಸಂಡೆಯಲ್ಲಿ ಎರಡು ರಣ ರೋಚಕ ಕದನ
KKR vs DC IPL 2022
Follow us
TV9 Web
| Updated By: Vinay Bhat

Updated on: Apr 10, 2022 | 8:30 AM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿಂದು (IPL 2022) ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 3.30ಕ್ಕೆ ಮುಂಬೈನ ಬ್ರಬೌರ್ನ್ ಕ್ರೀಡಾಂಣದಲ್ಲಿ ನಡೆಯಲಿರುವ ಮೊದಲ ಮ್ಯಾಚ್​ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (KKR vs DC) ಅನ್ನು ಎದುರಿಸಲಿದೆ. ವಾಂಖೆಡೆಯಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಅವರ ರಾಜಸ್ಥಾನ್ ರಾಯಲ್ಸ್ ಹಾಗೂ ಕೆಎಲ್ ರಾಹುಲ್ ನಾಯಕನಾಗಿರುವ ಲಖನೌ ಸೂಪರ್ ಜೇಂಟ್ಸ್ (RR vs LSG) ಮುಖಾಮುಖಿ ಆಗಲಿದೆ. ಕೆಕೆಆರ್‌ ನಾಲ್ಕರಲ್ಲಿ ಮೂರನ್ನು ಗೆದ್ದು ಟೇಬಲ್‌ ಟಾಪರ್‌ ಎನಿಸಿದೆ. ಇನ್ನೊಂದೆಡೆ ಡೆಲ್ಲಿ ಮೂರರಲ್ಲಿ ಒಂದನ್ನಷ್ಟೇ ಜಯಿಸಿ 7ನೇ ಸ್ಥಾನಿಯಾಗಿದೆ. ಲಖನೌ ತಂಡದ ಪಯಣ ಇಲ್ಲಿಯವರೆಗೂ ಉತ್ತಮವಾಗಿದೆ. ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿ, ಒಂದರಲ್ಲಿ ಸೋತಿದೆ. ರಾಜಸ್ಥಾನ ತಂಡವು ಮೊದಲೆರಡು ಪಂದ್ಯಗಳಲ್ಲಿ ಜಯ ದಾಖಲಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಮುಗ್ಗರಿಸಿತು. ಹೀಗಾಗಿ ಎಲ್ಲರಿಗೂ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದ್ದು ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.

ಕೆಕೆಆರ್ vs ಡೆಲ್ಲಿ:

ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್​ಗೆ ವೈಯಕ್ತಿಕವಾಗಿ ಇದೊಂದು ಸೇಡಿನ ಪಂದ್ಯ ಕೂಎ ಎನ್ನಬಹುದು. ಯಾಕೆಂದರೆ ಅಯ್ಯರ್ ಈ ಹಿಂದೆ ಡೆಲ್ಲಿ ತಂಡದಲ್ಲಿದ್ದರು. ಪಂತ್ ಟೀಮ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಅರಿತಿರುವ ಅಯ್ಯರ್ ಏನು ಯೋಜನೆ ಜಾರಿಗೆ ತರುತ್ತಾರೆ ಎಂಬುದು ನೋಡಬೇಕಿದೆ. ಬ್ಯಾಟರ್‌ಗಳ ಅಬ್ಬರದಿಂದಾಗಿ ಉತ್ತಮ ರನ್‌ರೇಟ್ ಹೊಂದಿರುವ ಕೆಕೆಆರ್ ತಂಡ ಹ್ಯಾಟ್ರಿಕ್ ಗೆಲುವನ್ನು ಎದುರು ನೋಡಿತ್ತಿದೆ. ಮುಂಬೈ ವಿರುದ್ಧ ಪ್ಯಾಟ್‌ ಕಮಿನ್ಸ್‌ ತೋರ್ಪಡಿಸಿದ ಬ್ಯಾಟಿಂಗ್‌ ಅಬ್ಬರ ಕೆಕೆಆರ್‌ಗೆ ಮುಂದಿನ ಹಲವು ಪಂದ್ಯಗಳಿಗೆ ಬೇಕಾಗುವಷ್ಟು ಆತ್ಮವಿಶ್ವಾಸವನ್ನು ಮೊಗೆದು ಕೊಟ್ಟಿದೆ. ಪ್ರಧಾನ ವೇಗಿ ಉಮೇಶ್‌ ಯಾದವ್‌ ಅವರ ಪ್ರಚಂಡ ಫಾರ್ಮ್ ತಂಡಕ್ಕೊಂದು ಬೂಸ್ಟ್‌. ಪವರ್‌ ಪ್ಲೇಯಲ್ಲಿ ಅವರು ಅತ್ಯಂತ ಅಪಾಯಕಾರಿಯಾಗಿ ಗೋಚ ರಿಸುತ್ತಿದ್ದಾರೆ. ವೆಂಕಟೇಶ್‌ ಅಯ್ಯರ್‌, ಸುನೀಲ್‌ ನಾರಾಯಣ್‌, ಶ್ರೇಯಸ್‌ ಅಯ್ಯರ್‌, ಆಯಂಡ್ರೆ ರಸೆಲ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ಇತ್ತ ಡೆಲ್ಲಿ ಪರ ಅಗ್ರ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ರನ್‌ಬರ ನೀಗಿಸಿಕೊಳ್ಳಬೇಕಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿದ್ದ ಡೆಲ್ಲಿ ಬಳಿಕ ಗುಜರಾತ್ ಹಾಗೂ ಎಲ್‌ಎಸ್‌ಜಿ ತಂಡಗಳ ಎದುರು ನಿರಾಸೆ ಕಂಡಿತ್ತು. ಡೇವಿಡ್ ವಾರ್ನರ್ ಮತ್ತು ಅನ್ರಿಚ್ ನೋಕಿಯ ಕಳೆದ ಪಂದ್ಯದಲ್ಲೇ ನಿರೀಕ್ಷೆಗೆ ತಕ್ಕ ಆಟವಾಡದೆ ವೈಫಲ್ಯ ಕಂಡಿದ್ದರು. ಡೆಲ್ಲಿ ಗೆಲುವಿನ ಲಯಕ್ಕೆ ಮರಳಲು ಸಂಘಟಿತ ನಿರ್ವಹಣೆ ಅಗತ್ಯವಾಗಿದೆ. ಉಭಯ ತಂಡಗಳು ಐಪಿಎಲ್​​ನಲ್ಲಿ ಈವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಕೋಲ್ಕತ್ತಾ 16 ಮತ್ತು ಡೆಲ್ಲಿ 12 ಪಂದ್ಯ ಗೆದ್ದರೆ 1 ಪಂದ್ಯ ರದ್ದಾಗಿದೆ.

ಆರ್​​ಆರ್​​ vs ಎಲ್​ಎಸ್​​ಜಿ:

ಸತತ ಮೂರು ಪಂದ್ಯಗಳಲ್ಲಿ ಜಯಗಳಿಸಿರುವ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್‌ ತಂಡಕ್ಕೆ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಬಳಗವು ಸವಾಲೊಡ್ಡಲು ಸಿದ್ಧವಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಐಪಿಎಲ್ ಆಡುತ್ತಿರುವ ಲಖನೌ ತಂಡದ ಪಯಣ ಇಲ್ಲಿಯವರೆಗೂ ಉತ್ತಮವಾಗಿದೆ. ರಾಹುಲ್, ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಎವಿನ್ ಲೆವಿಸ್, ದೀಪಕ್ ಹೂಡಾ, ಯುವ ಬ್ಯಾಟರ್ ಆಯುಷ್ ಬಡೋನಿ, ಆಲ್ರೌಂಡರ್‌ಗಳಾದ ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯರಂಥ ಆಟಗಾರರನ್ನು ಹೊಂದಿರುವ ಎಲ್‌ಎಸ್‌ಜಿ ಜಯದ ಹಾದಿಯನ್ನು ವಿಸ್ತರಿಸುವ ತವಕದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ಆವೇಶ್, ರವಿ ಬಿಷ್ಣೋಯಿ ಅಪಾಯಕಾರಿಯಾಗಿದ್ದಾರೆ.

ಇತ್ತ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್​​​​ ರನ್ನುತಂಡದಿಂದ ಹೊರಗಿಟ್ಟು ದೇವದತ್​​ ಪಡಿಕಲ್​ಗೆ ಜೋಸ್​​ ಬಟ್ಲರ್ ಜೊತೆ ಇನ್ನಿಂಗ್ಸ್​​ ಆರಂಭಿಸಲು ಅವಕಾಶ ಕೊಟ್ಟರೆ ಉತ್ತಮ. ಶಿಮ್ರೊನ್ ಹೆಟ್ಮೆಯೆರ್, ಸಂಜು ಸ್ಯಾಮ್ಸನ್ ಮತ್ತಷ್ಟು ಅಬ್ಬರಿಸಬೇಕಿದೆ. ಚಾಹಲ್-ಅಶ್ವಿನ್, ಟ್ರೆಂಟ್ ಬೌಲ್ಟ್, ಕನ್ನಡಿಗ ಪ್ರಸಿದ್ಧ ಕೃಷ್ಣ ಒಳಗೊಂಡ ಬೌಲಿಂಗ್ ಪಡೆ ಎದುರಾಳಿಗೆ ಕಂಟಕವಾದರೂ ಅಚ್ಚರಿಯಿಲ್ಲ. ಆದರೆ ನವ್​ ದೀಪ್​​ ಸೈನಿ ಬದಲು ಹೊಸ ಬೌಲರ್​​​ ಆಯ್ಕೆ ಮಾಡಿದರೆ ಎದುರಾಳಿಗೆ ಅಚ್ಚರಿ ನೀಡಬಹುದು.

RCB vs MI: ಅಬ್ಬಾ ಎಂಥಾ ಬ್ಯಾಟಿಂಗ್, ಎಂಥಾ ಸಿಕ್ಸ್: ರೋಹಿತ್ ಪಡೆಯನ್ನು ಅಟ್ಟಾಡಿಸಿದ ರಾವತ್