Faf du Plessis: ಪಟಿದಾರ್ ಶತಕದ ಬಗ್ಗೆ ಖುಷಿ ತಾಳಲಾರದೆ ಫಾಪ್ ಡುಪ್ಲೆಸಿಸ್ ನೀಡಿದ ಹೇಳಿಕೆ ಏನು ಗೊತ್ತೇ?

| Updated By: Vinay Bhat

Updated on: May 26, 2022 | 10:53 AM

ರಜತ್ ಪಟಿದಾರ್ ಅಮೋಘ ಶತಕ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್, ಹರ್ಷಲ್ ಪಟೇಲ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಆರ್​ಸಿಬಿ ಎಲ್​​ಎಸ್​ಜಿ ವಿರುದ್ಧ ಗೆಲುವಿನ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಫಾಪ್ ಡುಪ್ಲೆಸಿಸ್ ಏನು ಹೇಳಿದರು ಕೇಳಿ.

Faf du Plessis: ಪಟಿದಾರ್ ಶತಕದ ಬಗ್ಗೆ ಖುಷಿ ತಾಳಲಾರದೆ ಫಾಪ್ ಡುಪ್ಲೆಸಿಸ್ ನೀಡಿದ ಹೇಳಿಕೆ ಏನು ಗೊತ್ತೇ?
Rajat Patidar and Faf Du Plessis
Follow us on

ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 14 ರನ್​​ಗಳಿಂದ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (LSG vs RCB) ತಂಡ ಎರಡನೇ ಕ್ವಾಲಿ ಫೈಯರ್​ಗೆ ಲಗ್ಗೆಯಿಟ್ಟಿದೆ. ಮೇ. 27 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವನ್ನಾಡಲಿದ್ದು ಇಲ್ಲಿ ಗೆದ್ದರೆ ಫೈನಲ್​ಗೆ ಪ್ರವೇಶ ಪಡೆಯಲಿದೆ. ರಜತ್ ಪಟಿದಾರ್ (Rajat Patidar) ಅವರ ಅಮೋಘ ಶತಕ, ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಹಾಗೂ ಹರ್ಷಲ್ ಪಟೇಲ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಆರ್​ಸಿಬಿ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 4 ವಿಕೆಟ್‌ಗೆ 207 ರನ್ ಕಲೆಹಾಕಿತು. ಪ್ರತಿಯಾಗಿ ಕನ್ನಡಿಗ ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಪ್ರತಿಹೋರಾಟದ ನಡುವೆಯೂ ಲಖನೌ 6 ವಿಕೆಟ್‌ಗೆ 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಪ್ ಡುಪ್ಲೆಸಿಸ್ (Faf du Plessis) ಏನು ಹೇಳಿದರು ಕೇಳಿ.

“ಈರೀತಿಯ ಪಂದ್ಯಗಳಲ್ಲಿ ಸಾಮನ್ಯವಾಗಿ ಒತ್ತಡ ಹೆಚ್ಚಿರುತ್ತದೆ. ಆದರೆ, ರಜತ್ ಪಟಿದಾರ್ ಆಡಿದ ರೀತಿ ಅದ್ಭುತವಾಗಿತ್ತು. ಇಂದು ನನ್ನ ಪಾಲಿಗೆ ವಿಶೇಷ ದಿನ. ಪಟಿದರ್‌ ಆಡಿದ ಹಾದಿಗೆ ನಾನು ಚಂದ್ರನ ಮೇಲಿದ್ದೇನೆ. ಅವರು ಶತಕ ಸಿಡಿಸಿ ಸಂಭ್ರಮಿಸಿದ ರೀತಿಯನ್ನು ನೋಡಿದರೆ, ಎಷ್ಟು ಬುದ್ದಿವಂತ ಆಟಗಾರ ಎಂಬುದು ತಿಳಿಯುತ್ತದೆ. ಮೈದಾನದ ಎಲ್ಲ ಕಡೆ ರಜತ್ ಚೆಂಡನ್ನು ಅಟ್ಟಿದ್ದಾರೆ. ಎದುರಾಳಿಯನ್ನು ಚೆನ್ನಾಗಿ ಆಕ್ರಮಣ ಮಾಡಿದ್ದಾರೆ. ನಾವು ಒತ್ತಡಕ್ಕೆ ಒಳಗಾದ ಎಲ್ಲಾ ಸಮಯದಲ್ಲಿಯೂ ಅವರು ಮುಂದೆ ಬಂದು ಸನ್ನಿವೇಶವನ್ನು ಸರಿದೂಗಿಸಿದ್ದಾರೆ,” ಎಂದು ಪಟಿದಾರ್ ಅವರನ್ನು ಹಾಡಿ ಹೊಗಳಿದ್ದಾರೆ.

Rajat Patidar: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ

ಇದನ್ನೂ ಓದಿ
Rajat Patidar: ಪಟಿದಾರ್ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ
LSG vs RCB Match Report: ಆರ್​ಸಿಬಿ ಸಾಂಘಿಕ ಹೋರಾಟಕ್ಕೆ ಮಣಿದ ಲಕ್ನೋ; ಮುಂದಿನ ಎದುರಾಳಿ ರಾಜಸ್ಥಾನ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
LSG vs RCB IPL 2022 Eliminator Highlights: ರಜತ್ ಅಬ್ಬರದ ಶತಕ; 2ನೇ ಕ್ವಾಲಿಫೈಯರ್​ಗೆ ಆರ್​ಸಿಬಿ ಎಂಟ್ರಿ

“ನಾವು ಇಷ್ಟು ದಿನಗಳ ಕಾಲ ಪಟ್ಟ ಕಠಿಣ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಸಂಭ್ರಮಿಸಲು ಇದು ಸೂಕ್ತ ಸ್ಥಳ ಎಂದು ಭಾವಿಸುತ್ತೇನೆ. ಪ್ರಮುಖ ಸಂಗತಿ ಏನೆಂದರೆ, ನಾವು ಹೆಚ್ಚು ಭಾವುಕರಾಗುತ್ತಿದ್ದೇವೆ. ನಮಗೆ ಸ್ಪಷ್ಟತೆ ಇತ್ತು. ಯಾವುದೆ ಗೊಂದಲದೊಂದಿಗೆ ಕಣಕ್ಕಿಳಿಯಲಿಲ್ಲ. ಹರ್ಷಲ್‌ ಪಟೇಲ್‌ ಒಂದು ರೀತಿ ಜೋಕರ್‌ ಆಫ್‌ ದಿ ಪ್ಯಾಕ್‌. ಅಲ್ಲವೇ? ಅವರು ಯಾವುದೇ ಒತ್ತಡದ ಸಂದರ್ಭದಲ್ಲಿ ಬೌಲ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಒತ್ತಡದ ಸನ್ನಿವೇಶದಲ್ಲಿ ನನ್ನ ಮೊದಲ ಆಯ್ಕೆ ಅವರೇ ಆಗಿರುತ್ತಾರೆ. ವಿಶೇಷ ಎಂದರೆ ಒತ್ತಡದ ಓವರ್‌ಗಳು ತಮಗೆ ಬೇಕೆಂದು ಅವರೇ ನನಗೆ ಹೇಳುತ್ತಾರೆ,” ಎಂಬುದು ಫಾಫ್ ಮಾತು.

ಇನ್ನು ಸೋತ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ, “ನಾವು ಫೀಲ್ಡಿಂಗ್​ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದೆವು. ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿದರೆ ಅದು ಸಹಾಯ ಮಾಡುವುದಿಲ್ಲ. ನಾವು ಸೋಲಲು ಇದೇ ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ. ರಜತ್ ಪಟಿದಾರ್ ಅವರಿಂದ ಅತ್ಯುತ್ತಮ ಶತಕ ಮೂಡಿಬಂತು. ಟಾಪ್ 3 ಆಟಗಾರರು ಒಂದು ಪಂದ್ಯದಲ್ಲಿ ಶತಕ ಸಿಡಿಸಿದರೆ ಆ ತಂಡ ಆ ಪಂದ್ಯವನ್ನು ಗೆಲ್ಲುವ ಅವಕಾಶ ಹೆಚ್ಚಿರುತ್ತದೆ. ಆರ್​​ಸಿಬಿ ಫೀಲ್ಡಿಂಗ್ ಕೂಡ ಅದ್ಭುತವಾಗಿತ್ತು. ನಾವು ಬಹಳಷ್ಟು ಪಾಸಿಟಿವ್ ವಿಚಾರಗಳನ್ನು ಕಲಿತಿದ್ದೇವೆ. ನಮ್ಮದು ಹೊಸ ಫ್ರಾಂಚೈಸಿ, ಯುವ ತಂಡ. ನಾವು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ಪ್ರತಿ ತಂಡ ಕೂಡ ಅದನ್ನು ಮಾಡಿದೆ. ಮುಂದಿನ ಸೀಸನ್​ನಲ್ಲಿ ಉತ್ತಮವಾಗಿ ಕಮ್​ಬ್ಯಾಕ್ ಮಾಡಲು ಪ್ರಯತ್ನಿಸುತ್ತೇವೆ. ಮೋಸಿನ್ ಎಂಥಹ ಅದ್ಭುತ ಆಟಗಾರ ಎಂದು ತೋರಿಸಿಕೊಟ್ಟಿದ್ದಾರೆ. ಎಲ್ಲರೂ ತಪ್ಪುಗಳನ್ನು ಸರಿಪಡಿಸಬೇಕಿದೆ. ಮನೆಗೆ ಹಿಂತಿರುಗಿ ಪ್ರಯತ್ನ ಪಟ್ಟು ಒಳ್ಳೆಯ ಆಟಗಾರರಾಗಿ,” ಎಂದು ಹೇಳಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.