ರಾವಲ್ಪಿಂಡಿಯಲ್ಲಿ ಗಲಾಟೆ; ಕಿವೀಸ್- ಪಾಕ್​​ ಏಕದಿನ ಪಂದ್ಯದ ಟಾಸ್ ವಿಳಂಬ! ಆಟಗಾರರಿಗೆ ಹೋಟೆಲ್​ನಲ್ಲೇ ಉಳಿಯುವಂತೆ ಸೂಚನೆ

| Updated By: ಪೃಥ್ವಿಶಂಕರ

Updated on: Sep 17, 2021 | 3:15 PM

PAK vs NZ: ರಾವಲ್ಪಿಂಡಿಯಲ್ಲಿನ ಗಲಾಟೆಯಿಂದಾಗಿ ಈ ವಿಳಂಬ ಉಂಟಾಗಿದೆ. ಇದರಿಂದಾಗಿ ಆಟಗಾರರಿಗೆ ಸದ್ಯಕ್ಕೆ ಹೋಟೆಲ್ ಕೋಣೆಗಳಲ್ಲಿ ಇರಲು ಸೂಚಿಸಲಾಗಿದೆ. ಟಾಸ್‌ನಲ್ಲಿ 20 ನಿಮಿಷಗಳು ಉಳಿದಿರುವಾಗ ಈ ಘಟನೆ ಸಂಭವಿಸಿದೆ.

ರಾವಲ್ಪಿಂಡಿಯಲ್ಲಿ ಗಲಾಟೆ; ಕಿವೀಸ್- ಪಾಕ್​​ ಏಕದಿನ ಪಂದ್ಯದ ಟಾಸ್ ವಿಳಂಬ! ಆಟಗಾರರಿಗೆ ಹೋಟೆಲ್​ನಲ್ಲೇ ಉಳಿಯುವಂತೆ ಸೂಚನೆ
ಉಭಯ ತಂಡದ ನಾಯಕರು
Follow us on

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಏಕದಿನ ಪಂದ್ಯವನ್ನು ಸದ್ಯದಲ್ಲೇ ರಾವಲ್ಪಿಂಡಿಯಲ್ಲಿ ಆರಂಭಿಸಬೇಕಿತ್ತು. ಆದರೆ ಪಂದ್ಯದ ಆರಂಭ ಈಗ ಸ್ವಲ್ಪ ವಿಳಂಬವಾಗಿದೆ. ರಾವಲ್ಪಿಂಡಿಯಲ್ಲಿನ ಗಲಾಟೆಯಿಂದಾಗಿ ಈ ವಿಳಂಬ ಉಂಟಾಗಿದೆ. ಇದರಿಂದಾಗಿ ಆಟಗಾರರಿಗೆ ಸದ್ಯಕ್ಕೆ ಹೋಟೆಲ್ ಕೋಣೆಗಳಲ್ಲಿ ಇರಲು ಸೂಚಿಸಲಾಗಿದೆ. ಟಾಸ್‌ನಲ್ಲಿ 20 ನಿಮಿಷಗಳು ಉಳಿದಿರುವಾಗ ಈ ಘಟನೆ ಸಂಭವಿಸಿದೆ. ನಗರದಲ್ಲಿ ಉಂಟಾದ ಅವಾಂತರದಿಂದಾಗಿ ಆಟಗಾರರು ಕ್ರೀಡಾಂಗಣವನ್ನು ತಲುಪಿಲ್ಲ. ಏಕೆಂದರೆ ಅವರನ್ನು ಹೋಟೆಲ್ ಕೋಣೆಯಲ್ಲಿ ಇರಲು ಹೇಳಲಾಗಿದೆ. ಅದೇ ಸಮಯದಲ್ಲಿ, ಪ್ರೇಕ್ಷಕರಿಗೂ ಸಹ ಮೈದಾನಕ್ಕೆ ಪ್ರವೇಶ ನೀಡಿಲ್ಲ.

ರಾವಲ್ಪಿಂಡಿಯಲ್ಲೂ ಪರಿಸ್ಥಿತಿ ಹಾಗೆಯೇ ಇದೆ
ಟಾಸ್ ಸಮಯ ಕಳೆದಿದೆ. ಆದರೆ ಇನ್ನೂ ಸಹ ಟಾಸ್ ಪ್ರಕ್ರಿಯೆ ಸಂಭವಿಸುವ ಸಾಧ್ಯತೆಗಳು ಗೋಚರಿಸುತ್ತಿಲ್ಲ. ಪರಿಸ್ಥಿತಿ ಹಾಗೆಯೇ ಇದೆ. ಪಾಕಿಸ್ತಾನದಲ್ಲಿ ಇಂತಹ ಪರಿಸ್ಥಿತಿ ಇದ್ದಕ್ಕಿದ್ದಂತೆ ಸಂಭವಿಸಿದ ಕಾರಣ, ನ್ಯೂಜಿಲ್ಯಾಂಡ್ ಪ್ರವಾಸವು ತೊಂದರೆಯಲ್ಲಿದ್ದಂತೆ ತೋರುತ್ತದೆ. ಆದರೆ, ಟಾಸ್ ಯಾವಾಗ ನಡೆಯಲಿದೆ, ಪಂದ್ಯ ನಡೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಹಿರಂಗವಾಗಿಲ್ಲ.

ಈ ಘಟನೆ ಪಾಕಿಸ್ತಾನದ ಕ್ರಿಕೆಟ್ ಮೇಲೆ ಪರಿಣಾಮ ಬೀರಬಹುದು
ಮತ್ತೊಂದೆಡೆ, ನಗರದಲ್ಲಿ ಗದ್ದಲಕ್ಕೆ ಕಾರಣವೇನು ಎಂಬುದು ಕೂಡ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ಇದು ಪಾಕಿಸ್ತಾನ ಕ್ರಿಕೆಟ್​ಗೆ ಹೊಡೆತ ನೀಡುವಂತೆ ತೋರುತ್ತಿದೆ. ವಾಸ್ತವವಾಗಿ, ಈ ಘಟನೆಯ ನಂತರ, ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ತಂಡದ ಆಟಗಾರರ ಮನಸ್ಸಿನಲ್ಲಿ ಭಯದ ವಾತಾವರಣ ಉಂಟಾಗಬಹುದು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಮೂರು ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಆಡಬೇಕು. ಆದರೆ ಮೊದಲ ಪಂದ್ಯದ ಮೊದಲು ಬಂದ ಕೆಟ್ಟ ಸುದ್ದಿಯ ನಂತರ, ನ್ಯೂಜಿಲೆಂಡ್ ತಂಡವು ಪ್ರವಾಸವನ್ನು ಹೇಗೆ ತೆಗೆದುಕೊಳ್ಳುತ್ತದೆ. ಇದು ಕೂಡ ನೋಡಬೇಕಾದ ಸಂಗತಿಯಾಗಿದೆ.

Published On - 3:08 pm, Fri, 17 September 21