Rohit Sharma: ರಾಜಸ್ಥಾನ ಪರ ಆಡಿದ್ದ ಮಾಜಿ ರಣಜಿ ಕ್ರಿಕೆಟಿಗ ರೋಹಿತ್ ಶರ್ಮಾ ನಿಧನ
Rohit Sharma: ರೋಹಿತ್ ಶರ್ಮಾ ನಿಧನರಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾದ ಬಳಿಕ ಕೆಲವು ಕಿಡಿಗೇಡುಗಳು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಗೊಂದಲ ನಿವಾರಣೆಯಾಗುತ್ತಿದ್ದಂತೆ ರೋಹಿತ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜಸ್ಥಾನ (Rajasthan cricket player) ಪರ ಆಡಿದ್ದ ಮಾಜಿ ರಣಜಿ ಕ್ರಿಕೆಟಿಗ (Ranji player) ರೋಹಿತ್ ಶರ್ಮಾ ತಮ್ಮ 40 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರಣಜಿ ಕ್ರಿಕೆಟ್ನಲ್ಲಿ ರಾಜಸ್ಥಾನ ಪರ ಹಲವು ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ್ದ ರೋಹಿತ್ ಶರ್ಮಾ (Rohit Sharma) ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವರದಿಗಳ ಪ್ರಕಾರ, ಯಕೃತ್ತು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಅವರನ್ನು ನಾಲ್ಕೈದು ದಿನಗಳ ಹಿಂದೆ ನಗರದ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅಂದರೆ ಶನಿವಾರ ರೋಹಿತ್ ಮೃತಪಟ್ಟಿದ್ದಾರೆ.
ರೋಹಿತ್ ಶರ್ಮಾ ನಿಧನರಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾದ ಬಳಿಕ ಕೆಲವು ಕಿಡಿಗೇಡುಗಳು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಗೊಂದಲ ನಿವಾರಣೆಯಾಗುತ್ತಿದ್ದಂತೆ ರೋಹಿತ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Big news Rohit Sharma is dead… 🫨😲😲😲😲😲😲😲
He was truly a great player… He has served Rajasthan as a ranji player#RohitSharma #Death
— Zimbabar (@CricCast_) March 2, 2024
ರೋಹಿತ್ ಶರ್ಮಾ ವೃತ್ತಿಜೀವನ
ಕ್ರಿಕೆಟ್‌ಗೆ ರೋಹಿತ್ ಶರ್ಮಾ ಅವರ ಕೊಡುಗೆಗೆ ಸಂಬಂಧಿಸಿದಂತೆ, ಅವರು ರಾಜಸ್ಥಾನದ ರಣಜಿ ಕ್ರಿಕೆಟ್ ತಂಡಕ್ಕಾಗಿ ಏಳು ರಣಜಿ ಪಂದ್ಯಗಳನ್ನು ಒಳಗೊಂಡಂತೆ ತಮ್ಮ ವೃತ್ತಿಜೀವನದುದ್ದಕ್ಕೂ 28 ಏಕದಿನ ರಣಜಿ ಪಂದ್ಯಗಳನ್ನು ಆಡಿದ್ದಾರೆ. ಈ 28 ಪಂದ್ಯಗಳಲ್ಲಿ ಅವರು ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 35 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಒಟ್ಟು 850 ರನ್ ಕಲೆಹಾಕಿದ್ದರು.
ಇದರ ಜೊತೆಗೆ, ಶರ್ಮಾ ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಲ್‌ರೌಂಡರ್ ಆಗಿದ್ದ ರೋಹಿತ್ ಬೌಲಿಂಗ್ನಲ್ಲೂ ಆರು ವಿಕೆಟ್‌ಗಳನ್ನು ಕಬಳಿಸಿದ್ದು, 2004 ರಿಂದ 2014 ರವರೆಗಿನ ಅವರ 10 ವರ್ಷಗಳ ವೃತ್ತಿಜೀವನದಲ್ಲಿ ಆಗಾಗ್ಗೆ ತಮ್ಮ ಆಲ್‌ರೌಂಡರ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು. ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಶರ್ಮಾ ಕೋಚ್ ಆಗಲು ನಿರ್ಧರಿಸಿದ್ದರು. ಮತ್ತು ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಲು ಜೈಪುರದಲ್ಲಿ ಆರ್‌ಎಸ್ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ