NZ vs BAN: ಒಂದು ಕ್ಯಾಚ್‌ಗಾಗಿ ಓಡಿದ ನಾಲ್ವರು ಫೀಲ್ಡರ್ಸ್​; ಕೊನೆಗೆ ಮುಖ ಮುಖ ನೋಡುತ್ತ ನಿಂತರು; ವಿಡಿಯೋ

| Updated By: ಪೃಥ್ವಿಶಂಕರ

Updated on: Oct 13, 2022 | 3:11 PM

NZ vs BAN: ಸದ್ಯ ನ್ಯೂಜಿಲೆಂಡ್‌ನಲ್ಲಿ ತ್ರಿಕೋನ ಟಿ20 ಸರಣಿ ನಡೆಯುತ್ತಿದ್ದು, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂರು ತಂಡಗಳು ಟೂರ್ನಿಯಲ್ಲಿ ಆಡುತ್ತಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳ ನಡುವೆ ಫೈನಲ್ ನಡೆಯಲಿದೆ.

NZ vs BAN: ಒಂದು ಕ್ಯಾಚ್‌ಗಾಗಿ ಓಡಿದ ನಾಲ್ವರು ಫೀಲ್ಡರ್ಸ್​; ಕೊನೆಗೆ ಮುಖ ಮುಖ ನೋಡುತ್ತ ನಿಂತರು; ವಿಡಿಯೋ
NZ vs BAN
Image Credit source: sports tiger
Follow us on

ಸದ್ಯ ನ್ಯೂಜಿಲೆಂಡ್‌ನಲ್ಲಿ ತ್ರಿಕೋನ ಟಿ20 ಸರಣಿ ನಡೆಯುತ್ತಿದ್ದು, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂರು ತಂಡಗಳು ಈ ಟೂರ್ನಿಯಲ್ಲಿ ಆಡುತ್ತಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳ ನಡುವೆ ಫೈನಲ್ ನಡೆಯಲಿದೆ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ (NZ vs BAN) ನಡುವಿನ ಐದನೇ ಪಂದ್ಯ ಬುಧವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ಗಳಿಸಿತು.

ನ್ಯೂಜಿಲೆಂಡ್ ಪರ ಕಾನ್ವೆ 40 ಎಸೆತಗಳಲ್ಲಿ 64 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 24 ಎಸೆತಗಳಲ್ಲಿ 60 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ ಗುಪ್ಟಿಲ್ 27 ಎಸೆತಗಳಲ್ಲಿ 34 ರನ್ ಮತ್ತು ಫಿನ್ ಅಲೆನ್ 19 ಎಸೆತಗಳಲ್ಲಿ 32 ರನ್ ಗಳಿಸಿದರು. ಈ ನಾಲ್ವರ ಬ್ಯಾಟಿಂಗ್ ಬಲದಿಂದ ನ್ಯೂಜಿಲೆಂಡ್ 208 ರನ್ ಗಳಿಸಿತು.

ದೊಡ್ಡ ಸ್ಕೋರ್ ಬೆನ್ನತ್ತಿದ ಬಾಂಗ್ಲಾದೇಶ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಸೌಮ್ಯ ಸರ್ಕಾರ್ ಮತ್ತು ಶಕೀಬ್ ಅಲ್ ಹಸನ್ ಸಂಕಷ್ಟದಲ್ಲಿದ್ದ ಬಾಂಗ್ಲಾದೇಶ ತಂಡದ ಇನ್ನಿಂಗ್ಸ್ ಮೇಲೆತ್ತಲು ಪ್ರಯತ್ನಿಸಿದರು. ಆದರೆ 43 ರನ್ ಸೇರಿಸುವಷ್ಟರಲ್ಲಿ ಈ ಜೋಡಿಯೂ ಮುರಿದುಬಿತ್ತು.

ಈ ಇಬ್ಬರ ವಿಕೆಟ್ ಬಳಿಕ ಬಂದ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದೆ ವಿಕೆಟ್ ಒಪ್ಪಿಸಲಾರಂಭಿಸಿದರು. ಇದರ ಫಲವಾಗಿ ಅಂತಿಮವಾಗಿ ಬಾಂಗ್ಲಾದೇಶ ತಂಡ ಕಿವೀಸ್ ವಿರುದ್ಧ 48 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ 44 ಎಸೆತಗಳಲ್ಲಿ 70 ರನ್ ಗಳಿಸಿದರಾದರೂ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಕ್ಯಾಚಿಂಗ್ ಹೈಡ್ರಾಮಾ

ಈ ಪಂದ್ಯದಲ್ಲಿ ಬಾಂಗ್ಲಾ ತಂಡ ಸೋತಿತ್ತಾದರೂ, ಈ ಪಂದ್ಯದಲ್ಲಿ ನಡೆದ ಅದೊಂದು ಘಟನೆ ಮೈದಾನದಲ್ಲಿ ನೆರೆದಿದ್ದವರಿಗೆ ನಗೆಯ ರಸದೌತಣ ನೀಡಿತ್ತು. ಆದರೆ ವಿಶ್ವದ ಬೆಸ್ಟ್ ಟೀಂಗಳಲ್ಲಿ ಒಂದಾದ ನ್ಯೂಜಿಲೆಂಡ್ ತಂಡಕ್ಕೆ ಮಾತ್ರ ಇದು ಸಾಕಷ್ಟು ಮುಜುಗರ ತಂದಿತು. ವಾಸ್ತವವಾಗಿ, ಬಾಂಗ್ಲಾದೇಶದ ಇನ್ನಿಂಗ್ಸ್ ಮೊದಲ ಓವರ್‌ನಲ್ಲಿ ನಜ್ಮುಲ್ ಶಾಂಟೊ ನೀಡಿದ ಸುಲಭ ಕ್ಯಾಚ್ ಅನ್ನು ಕಿವೀಸ್ ಫೀಲ್ಡರ್​ಗಳು ಕೈಬಿಟ್ಟರು. ಟ್ರೆಂಟ್ ಬೌಲ್ಟ್ ಎಸೆದ ಮೊದಲ ಓವರ್‌ನ ಮೂರನೇ ಎಸೆತವನ್ನು ಉತ್ತಮ ಲೆಂತ್‌ನಲ್ಲಿ ಬೌಲ್ ಮಾಡಿದರು. ಶಾಂಟೊ ಕ್ರೀಸ್‌ನಿಂದ ಹೊರಬಂದು ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಮೇಲ್ಭಾಗದ ಅಂಚಿಗೆ ಬಡಿಯಿತು.

ಲಾಲಿಪಾಪ್ ಕ್ಯಾಚ್ ಕೈತಪ್ಪಿತು

ಆ ಬಳಿಕ ಚೆಂಡು ಗಾಳಿಯಲ್ಲಿ ಶಾರ್ಟ್ ಕವರ್ ಕಡೆಗೆ ಹೋಯಿತು. ವಿಕೆಟ್‌ಕೀಪರ್ ಡೆವೊನ್ ಕಾನ್ವೇ, ತಾನು ಕ್ಯಾಚ್‌ ತೆಗೆದುಕೊಳ್ಳುವುದಾಗಿ ಕಾಲ್ ಮಾಡಿದರು. ಆದರೆ ಅಷ್ಟರಲ್ಲಾಗಲೇ ಕ್ಯಾಚ್‌ ಹಿಡಿಯಲು ಟಿಮ್ ಸೌಥಿ, ಗ್ಲೆನ್ ಫಿಲಿಪ್ಸ್ ಮತ್ತು ಬೌಲ್ಟ್ ಸಿದ್ದರಾಗಿದ್ದರು. ಇದನ್ನು ನೋಡಿದ ಕಾನ್ವೇ ಕ್ಯಾಚ್‌ ಹಿಡಿಯುವುದರಿಂದ ಹಿಂದೆ ಸರಿದರು. ಆದರೆ ಮಿಕ್ಕ ಮೂವರ ನಡುವೆ ಉಂಟಾದ ಗೊಂದಲದಿಂದ ಯಾರೂ ಸಹ ಕ್ಯಾಚ್‌ ಹಿಡಿಯುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಕ್ಯಾಚ್ ಕೈತಪ್ಪಿದನ್ನು ನೋಡಿದ ಈ ಮೂವರು ಮುಖ ಮುಖ ನೋಡುತ್ತಾ ಪಂದ್ಯದತ್ತ ಗಮನಹರಿಸಿದರು.