ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಜನ್ಮದಿನ. ಕುತೂಹಲಕಾರಿಯಾಗಿ, ಇಂದು ಅವರ ಜನ್ಮದಿನದಂದು, ಆಫ್ರಿಕಾದ ನಮೀಬಿಯಾ ದೇಶದಿಂದ 4 ರಿಂದ 6 ವರ್ಷ ವಯಸ್ಸಿನ 5 ಹೆಣ್ಣು ಮತ್ತು 3 ಗಂಡು ಒಟ್ಟು ಎಂಟು ಚೀತಾಗಳನ್ನು ಭಾರತಕ್ಕೆ ವಿಶೇಷ ವಿಮಾನದ ಮೂಲಕ ಕರೆತರಲಾಗಿದೆ. ಭಾರತಕ್ಕೆ ತರಲಾದ ಎಲ್ಲಾ ಚೀತಾಗಳನ್ನು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ. ಚೀತಾವನ್ನು ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ವಿಮಾನದ ಮೂಲಕ ಸಾಗಿಸಿರುವುದು ವಿಶ್ವದಲ್ಲೇ ಇದು ಮೊದಲ ಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. ಅಳಿವಿನಂಚಿನಲ್ಲಿರುವ ಚಿರತೆಗಳಿಗೆ ಪುನರ್ವಸತಿ ಕಲ್ಪಿಸಿದ್ದಕ್ಕಾಗಿ ಮೋದಿ ಅವರನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ.
ಭಾರತದಲ್ಲಿ ನಶಿಸಿ ಹೊಗಿದ್ದ ಚೀತಾಗಳನ್ನು ಭಾರತಕ್ಕೆ ತರಲು ಹೊರಟಿದ್ದಾರೆ ಎಂಬ ಚರ್ಚೆ ಕಳೆದ ಹಲವು ದಿನಗಳಿಂದ ನಡೆಯುತ್ತಿತ್ತು. ನಂತರ ಆಫ್ರಿಕನ್ ಚೀತಾಗಳನ್ನು ಭಾರತಕ್ಕೆ ತರಲು ಯೋಜನೆಯನ್ನು ರೂಪಿಸಲಾಯಿತು. ಬಳಿಕ ನಮೀಬಿಯಾದೊಂದಿಗಿನ ಒಪ್ಪಂದದ ನಂತರ 8 ಚೀತಾಗಳನ್ನು ದೇಶಕ್ಕೆ ತರಲಾಗಿದೆ. ಈಗ ಈ ಎಂಟು ಚೀತಾಗಳು ಬಂದ ದೇಶದೆದುರು ಟೀಂ ಇಂಡಿಯಾ ಇದೇ ಟಿ20 ವಿಶ್ವಕಪ್ನಲ್ಲಿ ಕ್ರಿಕೆಟ್ ಪಂದ್ಯವನ್ನಾಡಲಿದೆ.
ಇದುವರೆಗೆ ಟೀಂ ಇಂಡಿಯಾ, ನಮೀಬಿಯಾ ವಿರುದ್ಧ ಕೇವಲ ಎರಡು ಕ್ರಿಕೆಟ್ ಪಂದ್ಯಗಳನ್ನು ಆಡಿದೆ. ಇದರಿಂದಾಗಿ ಮುಂಬರುವ ವಿಶ್ವಕಪ್ ಪಂದ್ಯದಲ್ಲಿ ಉಭಯ ದೇಶಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಅಕ್ಟೋಬರ್ 27ರಂದು ಉಭಯ ತಂಡಗಳ ನಡುವಿನ ಪಂದ್ಯ ನಡೆಯುವ ಸಾಧ್ಯತೆ ಇದ್ದು, ಎರಡೂ ತಂಡಗಳು ಟಿ20 ವಿಶ್ವಕಪ್‌ಗೆ ಆಟಗಾರರ ಹೆಸರನ್ನು ಪ್ರಕಟಿಸಿವೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು – ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
ಟಿ20 ವಿಶ್ವಕಪ್‌ಗೆ ನಮೀಬಿಯಾ ತಂಡ
ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೆಜೆ ಸ್ಮಿತ್, ದಿವಾನ್ ಲಾ ಕಾಕ್, ಸ್ಟೀಫನ್ ಬಾರ್ಡ್, ನಿಕೋಲ್ ಲಾಫ್ಟಿ ಈಟನ್, ಜಾನ್ ಫ್ರೈಲಿಂಕ್, ಡೇವಿಡ್ ವಿಜ್ಕ್, ರೂಬೆನ್ ಟ್ರಂಪೆಲ್‌ಮನ್, ಜೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಜ್, ಟ್ಯಾಂಗನಿ ಲುಂಗ್‌ಮೆನಿ, ಮೈಕೆಲ್ ವ್ಯಾನ್ ಲಿಂಗೆನ್, ಬೆನ್ ಶಿಕೊಂಗೊ, ಕಾರ್ಲ್ ಲಾ ಬಿರ್ಕೆನ್‌ಸ್ಟೋವ್ ಮತ್ತು ಹಲೋ ಫ್ರಾನ್ಸ್.
Published On - 6:03 pm, Sat, 17 September 22