ಭಾರತ ತಂಡದ ಅತೀ ದೊಡ್ಡ ಸಮಸ್ಯೆ ಕೋಚ್ ಗೌತಮ್ ಗಂಭೀರ್: ಟಿಮ್ ಪೈನ್

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ಶುಕ್ರವಾರದಿಂದ ಶುರುವಾಗಲಿದೆ. ನವೆಂಬರ್ 22 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪರ್ತ್​ನ ಒಪ್ಟಸ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಭಾರತ ತಂಡದ ಅತೀ ದೊಡ್ಡ ಸಮಸ್ಯೆ ಕೋಚ್ ಗೌತಮ್ ಗಂಭೀರ್: ಟಿಮ್ ಪೈನ್
Gautam Gambhir
Follow us
ಝಾಹಿರ್ ಯೂಸುಫ್
|

Updated on:Nov 17, 2024 | 1:12 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಈ ಸರಣಿಗೂ ಮುನ್ನ ಆಸ್ಟ್ರೇಲಿಯನ್ನರ ಮಾತಿನ ಮೈಂಡ್ ಗೇಮ್ ಶುರುವಾಗಿದೆ. ಈ ಮಾತುಕತೆಯ ನಡುವೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೈನ್ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರನ್ನು ಪರಿಹಾಸ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಈ ಬಾರಿ ಭಾರತ ತಂಡ ಸರಣಿ ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಈ ಸಲ ಟೀಮ್ ಇಂಡಿಯಾದ ಕೋಚ್ ಬದಲಾಗಿದ್ದಾರೆ. ಇಲ್ಲಿ ಎಲ್ಲರೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಫಾರ್ಮ್​ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನನ್ನ ಪ್ರಕಾರ ಅದು ಸಮಸ್ಯೆಯೇ ಅಲ್ಲ ಎಂದು ಟಿಮ್ ಪೈನ್ ಹೇಳಿದ್ದಾರೆ.

ಟೀಮ್ ಇಂಡಿಯಾದ ಅಸಲಿ ಸಮಸ್ಯೆ ಎಂದರೆ ಅವರ ಕೋಚ್ ಗೌತಮ್ ಗಂಭೀರ್. ಆತನಿಗೆ ಒತ್ತಡದ ಸಂದರ್ಭಗಳಲ್ಲಿ ಸಂಯಮ ಕಾಪಾಡಿಕೊಳ್ಳಲು ಬರಲ್ಲ. ಅದನ್ನು ಮೊದಲು ಕಲಿಯಬೇಕಾದ ಅವಶ್ಯಕತೆಯಿದೆ ಎಂದು ಟಿಮ್ ಪೈನ್ ಹೇಳಿದ್ದಾರೆ.

ಟಿಮ್ ಪೈನ್ ಇಂತಹದೊಂದು ಹೇಳಿಕೆ ನೀಡಲು ಮುಖ್ಯ ಕಾರಣ, ಇತ್ತೀಚೆಗೆ ರಿಕಿ ಪಾಂಟಿಂಗ್ ಅವರಿಗೆ ಗಂಭೀರ್ ನೀಡಿದ ಪ್ರತ್ಯುತ್ತರ. ಸಂದರ್ಶನವೊಂದರಲ್ಲಿ ಪಾಂಟಿಂಗ್ ಅವರಲ್ಲಿ ಟೀಮ್ ಇಂಡಿಯಾ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೇ ವೇಳೆ ಪಾಂಟಿಂಗ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್​ ಬಗ್ಗೆ ಮಾತನಾಡಿದ್ದರು.

ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ  ಗೌತಮ್ ಗಂಭೀರ್ ಅವರ ಮುಂದಿಡಲಾಗಿತ್ತು. ಇದೇ ವೇಳೆ ಕುಪಿತಗೊಂಡಿದ್ದ ಟೀಮ್ ಇಂಡಿಯಾ ಕೋಚ್, ಭಾರತೀಯ ಕ್ರಿಕೆಟ್​ನಲ್ಲಿ ಪಾಂಟಿಂಗ್ ಕೆಲಸವೇನು ಎಂದು ಪ್ರಶ್ನಿಸಿದ್ದರು. ಅಲ್ಲದೆ ನಿಮ್ಮ ತಂಡವನ್ನು ನೋಡಿಕೊಳ್ಳಿ, ಭಾರತ ತಂಡದ ಉಸಾಬರಿ ನಿಮಗೆ ಬೇಡ ಎಂದು ನೇರವಾಗಿ ಉತ್ತರಿಸಿದ್ದರು.

ಇದನ್ನು ಪ್ರಸ್ತಾಪಿಸಿ ಇದೀಗ ಟಿಮ್ ಪೈನ್, ಭಾರತ ತಂಡದ ಕೋಚ್​ಗೆ ಹೇಗೆ ಸಂಯಮ ಪಾಲಿಸಬೇಕೆಂದು ಗೊತ್ತಿಲ್ಲ. ಅದರಲ್ಲೂ ಒತ್ತಡವನ್ನು ನಿಭಾಯಿಸುವುದು ಹೇಗೆಂದು ಕಲಿಯುವ ಅವಶ್ಯಕತೆಯಿದೆ. ಅಲ್ಲದೆ ಅವರ ವರ್ತನೆಯ ಶೈಲಿಯು ಭಾರತ ತಂಡಕ್ಕೆ ಸರಿ ಹೊಂದುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪ: ಟೀಮ್ ಇಂಡಿಯಾದಿಂದ ಬ್ಯಾನ್ ಭೀತಿ

ಈ ಹಿಂದಿನ ಸರಣಿಗಳನ್ನು ಗೆಲ್ಲಲು ಮಾಜಿ ಕೋಚ್ ರವಿ ಶಾಸ್ತ್ರಿ ಅವರ ಕೊಡುಗೆ ಕೂಡ ಇದೆ ಎಂದಿರುವ ಟಿಮ್ ಪೈನ್, ಅವರು ತಂಡದಲ್ಲಿ ಆನಂದದಾಯಕ ವಾತಾವರಣ ಸೃಷ್ಟಿಸಿದ್ದರು. ಅಲ್ಲದೆ ಆಟಗಾರರನ್ನು ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರೇರೇಪಿಸುತ್ತಿದ್ದರು. ಆದರೆ ಗಂಭೀರ್ ಅಂತಹ ವ್ಯಕ್ತಿತ್ವವನ್ನು ಹೊಂದಿಲ್ಲ. ಹೀಗಾಗಿ ಈ ಸಲ ಟೆಸ್ಟ್ ಸರಣಿ ಗೆಲ್ಲುವುದು ಸುಲಭವಲ್ಲ ಎಂದು ಟಿಮ್ ಪೈನ್ ಅಭಿಪ್ರಾಯಪಟ್ಟಿದ್ದಾರೆ.

Published On - 1:12 pm, Sun, 17 November 24