ಕಪಿಲ್, ಸಚಿನ್, ಧೋನಿ, ಕೊಹ್ಲಿ ಅಲ್ಲವೇ ಅಲ್ಲ..! ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ನನ್ನು ಹೆಸರಿಸಿದ ಗಂಭೀರ್

|

Updated on: Sep 08, 2023 | 11:02 AM

Gautam Gambhir: ರಾಪಿಡ್ ಫೈರ್‌ ಸುತ್ತಿನಲ್ಲಿ ಗೌತಮ್ ಗಂಭೀರ್ ಅವರಿಗೆ ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು? ಎಂದು ಕೇಳಿದರು. ಈ ಪ್ರಶ್ನೆಗೆ ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಎಂಬ ಮೂರು ಆಯ್ಕೆಗಳನ್ನು ನೀಡಿದರು. ಆದರೆ ಈ ಪೈಕಿ ಯಾರನ್ನೂ ಆಯ್ಕೆ ಮಾಡದ ಗೌತಮ್ ಗಂಭೀರ್, ನನ್ನ ಪ್ರಕಾರ ಯುವರಾಜ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದರು.

ಕಪಿಲ್, ಸಚಿನ್, ಧೋನಿ, ಕೊಹ್ಲಿ ಅಲ್ಲವೇ ಅಲ್ಲ..! ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ನನ್ನು ಹೆಸರಿಸಿದ ಗಂಭೀರ್
ಗೌತಮ್ ಗಂಭೀರ್
Follow us on

ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ (Gautam Gambhir) ತಮ್ಮ ಹೇಳಿಕೆಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಏಷ್ಯಾಕಪ್ ವೇಳೆ ಕೊಹ್ಲಿ ಅಭಿಮಾನಿಗಳ ವಿರುದ್ಧ ಗರಂ ಆಗಿದ್ದ ಗಂಭೀರ್ ಮಧ್ಯದ ಬೆರಳು ತೋರಿ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ 2011 ರ ವಿಶ್ವಕಪ್ (ODI World Cup) ಬಗ್ಗೆ ಮಾತನಾಡಿದಾಗಲೆಲ್ಲ ಮಹೇಂದ್ರ ಸಿಂಗ್ ಧೋನಿ (MS Dhoni) ಕುರಿತು ನೀಡುವ ಹೇಳಿಕೆಗಳಿಂದಾಗಿ ಗಂಭೀರ್ ಸಾಕಷ್ಟು ಚರ್ಚೆಗೆ ಒಳಪಡುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಗೌತಮ್ ಗಂಭೀರ್‌ಗೆ ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು ಎಂದು ಕೇಳಲಾಗಿದ್ದು, ಇದಕ್ಕೆ ಉತ್ತರಿಸಿದ ಗೌತಮ್, ಸುನಿಲ್ ಗವಾಸ್ಕರ್, ಮಹೇಂದ್ರ ಸಿಂಗ್ ಧೋನಿ ಅಥವಾ ವಿರಾಟ್ ಕೊಹ್ಲಿ ಯಾರನ್ನೂ ಹೆಸರಿಸದೆ ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್​ನನ್ನು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದಿದ್ದಾರೆ.

ಗೌತಮ್ ಗಂಭೀರ್ ಹೇಳಿದ್ದೇನು?

ಡಾ. ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿವೇಕ್ ಬಿಂದ್ರಾ, ರಾಪಿಡ್ ಫೈರ್‌ ಸುತ್ತಿನಲ್ಲಿ ಗೌತಮ್ ಗಂಭೀರ್ ಅವರಿಗೆ ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು? ಎಂದು ಕೇಳಿದರು. ಈ ಪ್ರಶ್ನೆಗೆ ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಎಂಬ ಮೂರು ಆಯ್ಕೆಗಳನ್ನು ನೀಡಿದರು. ಆದರೆ ಈ ಪೈಕಿ ಯಾರನ್ನೂ ಆಯ್ಕೆ ಮಾಡದ ಗೌತಮ್ ಗಂಭೀರ್, ನನ್ನ ಪ್ರಕಾರ ಯುವರಾಜ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದರು.

‘ಕ್ರಿಕೆಟಿಗನಾಗಿದ್ದಕ್ಕೆ ಹೆಚ್ಚು ಪಶ್ಚಾತ್ತಾಪ ಪಡುತ್ತೇನೆ’; ಶಾಕಿಂಗ್ ಹೇಳಿಕೆ ನೀಡಿದ ಗೌತಮ್ ಗಂಭೀರ್..!

ಯುವಿ ಪರ ಗಂಭೀರ್ ಬ್ಯಾಟ್

ಗಂಭೀರ್ ಆಯ್ಕೆಯಲ್ಲೂ ಸತ್ವವಿದ್ದು, ಟೀಂ ಇಂಡಿಯಾದಲ್ಲಿ ಆಲ್​ರೌಂಡರ್​ ಆಗಿ ಯುವರಾಜ್ ಸಿಂಗ್ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲದೆ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಅದ್ಭುತ ಪ್ರದರ್ಶನ ನೀಡಿದ್ದರು. ಇದರೊಂದಿಗೆ 2011ರ ವಿಶ್ವಕಪ್​ನಲ್ಲಿನ ಆಟಕ್ಕಾಗಿ ಅವರು ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಕೂಡ ಗೆದ್ದಿದ್ದರು. ಆದರೆ ಸಾಕಷ್ಟು ಸಂದರ್ಶನಗಳಲ್ಲಿ ಗಂಭೀರ್, 2011ರ ವಿಶ್ವಕಪ್​ನ ಗೆಲುವಿನ ಕ್ರೇಡಿಟ್ ಅನ್ನು ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಧೋನಿ ಅವರಿಗೆ ನೀಡಲಾಗುತ್ತದೆ. ಆದರೆ ನಿಜವಾಗಿಯೂ ವಿಶ್ವಕಪ್​ ಗೆಲುವಿನ ಶ್ರೇಯ ಯುವರಾಜ್ ಸಿಂಗ್​ಗೆ ನೀಡಬೇಕು ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಕ್ರಿಕೆಟಿಗನಾಗಿದ್ದಕ್ಕೆ ಹೆಚ್ಚು ಪಶ್ಚಾತ್ತಾಪ ಪಡುತ್ತೇನೆ

ಇನ್ನು ಇದೇ ಸಂದರ್ಶನದಲ್ಲಿ ನಿಮ್ಮ ಜೀವನದಲ್ಲಿ ದೊಡ್ಡ ವಿಷಾದ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ನಾನು ಕ್ರಿಕೆಟಿಗನಾಗಿದ್ದಕ್ಕೆ ಹೆಚ್ಚು ಪಶ್ಚಾತ್ತಾಪ ಪಡುತ್ತೇನೆ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಗೊಳಿಸಿದ್ದರು. ಹಾಗೆಯೇ ಈ ಬಾರಿಯ ವಿಶ್ವಕಪ್ ಗೆಲ್ಲುವ ತನ್ನ ನೆಚ್ಚಿನ ತಂಡವಾಗಿ ಗಂಭೀರ್, ಆಸ್ಟ್ರೇಲಿಯಾವನ್ನು ಆಯ್ಕೆ ಮಾಡಿದ್ದು ಎಲ್ಲರೂ ಬಾಯ್ಮೇಲೆ ಬೆರಳಿಡುವಂತೆ ಮಾಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:01 am, Fri, 8 September 23