AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಲು ಒಲ್ಲೆ ಎಂದ ಆಶಿಸ್ ನೆಹ್ರಾ..! ವರದಿ

Team India: ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದವು ನವೆಂಬರ್‌ನಲ್ಲಿ ಕೊನೆಗೊಳ್ಳಲಿದ್ದು, ನೆಹ್ರಾಗೆ ಭಾರತದ ಮುಖ್ಯ ಕೋಚ್ ಆಗುವ ಅವಕಾಶ ಸಿಗಬಹುದು ಎಂದು ಈ ಹಿಂದೆ ಸಾಕಷ್ಟು ವರದಿಗಳಾಗಿದ್ದವು. ಆದರೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿರುವ ಪ್ರಕಾರ, ನೆಹ್ರಾ ಅವರು ಸದ್ಯಕ್ಕೆ ಭಾರತ ತಂಡದ ಕೋಚ್ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ.

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಲು ಒಲ್ಲೆ ಎಂದ ಆಶಿಸ್ ನೆಹ್ರಾ..! ವರದಿ
ಆಶಿಸ್ ನೆಹ್ರಾ
ಪೃಥ್ವಿಶಂಕರ
|

Updated on:Sep 08, 2023 | 10:07 AM

Share

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಗುಜರಾತ್ ಟೈಟಾನ್ಸ್‌ ತಂಡವನ್ನು ಸತತ ಎರಡು ಆವೃತ್ತಿಗಳಲ್ಲಿ ಫೈನಲ್​ಗೆ ಕೊಂಡೊಯ್ದ ಬಳಿಕ ಟೀಂ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ (Ashish Nehra) ಕೋಚ್ ಆಗಿ ದೊಡ್ಡ ಹೆಸರು ಮಾಡಿದ್ದಾರೆ. ತನ್ನ ಮಾರ್ಗದರ್ಶನದಲ್ಲಿ ಮೊದಲ ಆವೃತ್ತಿಯಲ್ಲೇ ಗುಜರಾತ್ (Gujarat Titans) ತಂಡವನ್ನು ಚಾಂಪಿಯನ್ ಮಾಡಿದ್ದ ನೆಹ್ರಾ, ಆ ಬಳಿಕ ಎರಡನೇ ಆವೃತ್ತಿಯಲ್ಲೂ ತಂಡವನ್ನು ಫೈನಲ್​ಗೇರುವಂತೆ ಮಾಡಿದ್ದರು. ಆದರೆ ಒಂದು ಲಕ್ಷ ಅಭಿಮಾನಿಗಳ ಮುಂದೆ ನಡೆದ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್‌ಗಳಿಂದ ಸೋತ ಗುಜರಾತ್ ರನ್ನರ್-ಅಪ್ ಆಗಿ ಹೊರಹೊಮ್ಮಿತ್ತು. ಆದರೂ ತಂಡದಲ್ಲಿ ಹೇಳಿಕೊಳ್ಳುವಂತಹ ಸ್ಟಾರ್ ಆಟಗಾರರಿಲ್ಲದಿದ್ದರು ತಂಡವನ್ನು ಬಲಿಷ್ಠಗೊಳಿಸಿದ ಆಶಿಶ್ ನೆಹ್ರಾ ತಂತ್ರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಆ ಬಳಿಕ ನೆಹ್ರಾಗೆ ಟೀಂ ಇಂಡಿಯಾದ (Team India) ಕೋಚಿಂಗ್ ಹುದ್ದೆಯನ್ನು ನೀಡಬೇಕೆಂಬ ಕೂಗು ಕೇಳಿಬಂದಿತ್ತು.

ರಾಹುಲ್​ಗೆ ಮೂರು ಮಾದರಿ ಬೇಡ

ವಾಸ್ತವವಾಗಿ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರ ಅಧಿಕಾರಾವಧಿಯಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಈವೆಂಟ್ ಗೆಲ್ಲಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ಆಟ ಸೆಮಿಫೈನಲ್‌ನಲ್ಲಿಯೇ ಅಂತ್ಯಗೊಂಡಿತ್ತು. ಅದರಲ್ಲೂ 10 ವಿಕೆಟ್​ಗಳ ಸೋಲು ಟೀಂ ಇಂಡಿಯಾ ಅಭಿಮಾನಿಗಳ ನಿದ್ದೆಗೆಡಿಸಿತ್ತು. ಆ ಬಳಿಕ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲೂ ಭಾರತ ಚಾಂಪಿಯನ್ ಆಗಲಿಲ್ಲ. ಇದೆಲ್ಲದರ ಹೊರತಾಗಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ಕೆಲವು ದುರ್ಬಲ ತಂಡಗಳೆದುರು ಮಂಕಾದ ಪ್ರದರ್ಶನ ನೀಡಿತ್ತು.

‘ದ್ರಾವಿಡ್ ಬದಲು ಈ ದಿಗ್ಗಜ ಆಟಗಾರನಿಗೆ ಟಿ20 ತಂಡದ ಕೋಚ್ ಹುದ್ದೆ ನೀಡಿ’; ಟರ್ಬನೇಟರ್

ಮಾಜಿ ಕ್ರಿಕೆಟಿಗರ ಅಭಿಪ್ರಾಯ

ಹೀಗಾಗಿ ರಾಹುಲ್ ದ್ರಾವಿಡ್​ರನ್ನು ಕೇವಲ ಟೆಸ್ಟ್ ಮಾದರಿಗೆ ಕೋಚ್ ಆಗಿ ನೇಮಿಸಿ, ಉಳಿದ ಇನ್ನೇರಡು ಮಾದರಿಗಳಿಗೆ ಅಂದರೆ ಟೆಸ್ಟ್ ಹಾಗೂ ಏಕದಿನ ಮಾದರಿಗೆ ಆಶಿಸ್ ನೆಹ್ರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಬೇಕೆಂದು ಹರ್ಭಜನ್ ಸಿಂಗ್ ಸೇರಿದಂತೆ ಟೀಂ ಇಂಡಿಯಾದ ಹಲವು ಮಾಜಿ ಆಟಗಾರರು ಆಯ್ಕೆ ಮಂಡಳಿಗೆ ಒತ್ತಾಯಿಸಿದ್ದರು.

ಸದ್ಯಕ್ಕೆ ಆಸಕ್ತಿ ಇಲ್ಲ

ಇನ್ನು ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದವು ನವೆಂಬರ್‌ನಲ್ಲಿ ಕೊನೆಗೊಳ್ಳಲಿದ್ದು, ನೆಹ್ರಾಗೆ ಭಾರತದ ಮುಖ್ಯ ಕೋಚ್ ಆಗುವ ಅವಕಾಶ ಸಿಗಬಹುದು ಎಂದು ಈ ಹಿಂದೆ ಸಾಕಷ್ಟು ವರದಿಗಳಾಗಿದ್ದವು. ಆದರೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿರುವ ಪ್ರಕಾರ, ನೆಹ್ರಾ ಅವರು ಸದ್ಯಕ್ಕೆ ಭಾರತ ತಂಡದ ಕೋಚ್ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್‌ನೊಂದಿಗಿನ ಅವರ ಒಪ್ಪಂದವು 2025 ರ ಆವೃತ್ತಿಯವರೆಗೂ ಇದ್ದು, ಈ ಒಪ್ಪಂದ ಮುಗಿದ ಬಳಿಕಷ್ಟೇ ನೆಹ್ರಾ ಮುಖ್ಯ ಕೋಚ್ ಹುದ್ದೆಯ ಬಗ್ಗೆ ತೀರ್ಮಾನಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:05 am, Fri, 8 September 23

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!