‘ದ್ರಾವಿಡ್ ಬದಲು ಈ ದಿಗ್ಗಜ ಆಟಗಾರನಿಗೆ ಟಿ20 ತಂಡದ ಕೋಚ್ ಹುದ್ದೆ ನೀಡಿ’; ಟರ್ಬನೇಟರ್

Harbhajan Singh: ನಾನು ರಾಹುಲ್ ದ್ರಾವಿಡ್ ಅವರೊಂದಿಗೆ ದೀರ್ಘಕಾಲ ಆಡಿದ್ದೇನೆ ಮತ್ತು ಅವರ ಬಗ್ಗೆ ಸಂಪೂರ್ಣ ಗೌರವವನ್ನು ಹೊಂದಿದ್ದೇನೆ. ಅಲ್ಲದೆ ಆಟದ ಬಗ್ಗೆ ಅವರ ತಿಳುವಳಿಕೆಯನ್ನು ನಾನು ಪ್ರಶ್ನಿಸುತ್ತಿಲ್ಲ ಆದರೆ ಈ ಸ್ವರೂಪವು ಸ್ವಲ್ಪ ವಿಭಿನ್ನವಾಗಿದೆ ಮತ್ತು ಸಂಕೀರ್ಣವಾಗಿದೆ ಎಂಬುದು ನನ್ನ ಅಭಿಪ್ರಾಯ.

‘ದ್ರಾವಿಡ್ ಬದಲು ಈ ದಿಗ್ಗಜ ಆಟಗಾರನಿಗೆ ಟಿ20 ತಂಡದ ಕೋಚ್ ಹುದ್ದೆ ನೀಡಿ’; ಟರ್ಬನೇಟರ್
ಹರ್ಭಜನ್ ಸಿಂಗ್, ದ್ರಾವಿಡ್
Follow us
TV9 Web
| Updated By: ಪೃಥ್ವಿಶಂಕರ

Updated on:Nov 24, 2022 | 1:58 PM

2021ರ ಟಿ20 ವಿಶ್ವಕಪ್‌ನಲ್ಲಿ (T20 World Cup 2021) ಟೀಂ ಇಂಡಿಯಾ ಮೊದಲ ಸುತ್ತಿನಲ್ಲಿಯೇ ಹೊರಬಿದ್ದ ನಂತರ ರವಿಶಾಸ್ತ್ರಿ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಿ ಕನ್ನಡಿಗ ರಾಹುಲ್ ದ್ರಾವಿಡ್​ಗೆ (Rahul Dravid) ಕೋಚ್ ಪಟ್ಟ ಕಟ್ಟಲಾಯಿತು. ವಾಲ್ ಖ್ಯಾತಿಯ ದ್ರಾವಿಡ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾದಾಗ ಮೆನ್ ಇನ್ ಬ್ಲೂ ತಂಡ ಇನ್ನು ಮುಂದೆ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಕೋಚ್ ಬದಲಾದರೂ ತಂಡದ ಹಣೆಬರಹ ಬದಲಾಗಲಿಲ್ಲ. ಮೊದಲು ದ್ರಾವಿಡ್ ನೇತೃತ್ವದಲ್ಲಿ ಏಷ್ಯಾಕಪ್ ಸೋತಿದ್ದ ಟೀಂ ಇಂಡಿಯಾ, ನಂತರ ಟಿ20 ವಿಶ್ವಕಪ್​ನಲ್ಲೂ ಸೆಮಿಫೈನಲ್​ನಲ್ಲಿ ಸೋತು ಟೂರ್ನಿಯಿಂದ ಹೊರಬಿತ್ತು. ಈ ಎರಡು ಸೋಲುಗಳ ನಂತರ ದ್ರಾವಿಡ್ ವಿರುದ್ಧ ಮಾತುಗಳು ಕೇಳಲಾರಂಭಿಸಿವೆ. ಇದಕ್ಕೆ ಪೂರಕವಾಗಿ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh), ದ್ರಾವಿಡ್ ಬದಲಿಗೆ ಆಶಿಶ್ ನೆಹ್ರಾ (Ashish Nehra) ಅವರನ್ನು ಕೋಚ್ ಆಗಿ ನೇಮಿಸಬೇಕೆನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.

ಆಶಿಶ್ ನೆಹ್ರಾ ಅವರಂತಹ ಅನುಭವಿಗಳು ಭಾರತದ ಟಿ20 ತಂಡದ ಕೋಚಿಂಗ್ ವ್ಯವಸ್ಥೆಯ ಭಾಗವಾಗಬೇಕು. ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗಿಂತ ನೆಹ್ರಾ ಟಿ20 ಸ್ವರೂಪವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಹರ್ಭಜನ್ ಹೇಳಿಕೆ ನೀಡಿದ್ದಾರೆ. 2017 ರಲ್ಲಿ ಕ್ರಿಕೆಟ್​ನಿಂದ ನಿವೃತ್ತರಾಗಿದ್ದ ನೆಹ್ರಾ 2022ರ ಐಪಿಎಲ್​ನಲ್ಲಿ ಗುಜರಾತ್ ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಸಾಕಷ್ಟು ಶ್ರಮಿಸಿದ್ದರು.

ಟಿ20 ಸ್ವರೂಪವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ

ಸಂದರ್ಶನವೊಂದರಲ್ಲಿ ಮಾತನಾಡಿದ ಹರ್ಭಜನ್, ‘ಟಿ20 ಫಾರ್ಮ್ಯಾಟ್‌ನಲ್ಲಿ ತಂಡದ ಕೋಚಿಂಗ್ ವಿಭಾಗದಲ್ಲಿ ಆಶಿಶ್ ನೆಹ್ರಾ ಅವರಂತಹವರು ಇರಬೇಕು, ಅವರು ಇತ್ತೀಚೆಗಷ್ಟೇ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಅಲ್ಲದೆ ನೆಹ್ರಾ ಟಿ20 ಸ್ವರೂಪವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ನಾನು ರಾಹುಲ್ ದ್ರಾವಿಡ್ ಅವರೊಂದಿಗೆ ದೀರ್ಘಕಾಲ ಆಡಿದ್ದೇನೆ ಮತ್ತು ಅವರ ಬಗ್ಗೆ ಸಂಪೂರ್ಣ ಗೌರವವನ್ನು ಹೊಂದಿದ್ದೇನೆ. ಅಲ್ಲದೆ ಆಟದ ಬಗ್ಗೆ ಅವರ ತಿಳುವಳಿಕೆಯನ್ನು ನಾನು ಪ್ರಶ್ನಿಸುತ್ತಿಲ್ಲ ಆದರೆ ಈ ಸ್ವರೂಪವು ಸ್ವಲ್ಪ ವಿಭಿನ್ನವಾಗಿದೆ ಮತ್ತು ಸಂಕೀರ್ಣವಾಗಿದೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಇದನ್ನೂ ಓದಿ: ‘ನಾಯಕತ್ವ ಕಳೆದುಕೊಳ್ಳುವ ಭಯ ನನಗಿಲ್ಲ’: ಏಕದಿನ ಸರಣಿ ಆರಂಭಕ್ಕೂ ಮುನ್ನ ಧವನ್ ಸ್ಪಷ್ಟೀಕರಣ..!

ನೆಹ್ರಾ ಏಕೆ ಉತ್ತಮ?

ನೆಹ್ರಾ ಏಕೆ ಉತ್ತಮ ಎಂಬುದರ ಬಗ್ಗೆ ವಿವರಣೆ ನೀಡಿದ ಹರ್ಭಜನ್, ಟಿ20 ಮಾದರಿಯಲ್ಲಿ ಇತ್ತೀಚೆಗೆ ಆಡಿದ ಆಟಗಾರ ಕೋಚಿಂಗ್ ಕೆಲಸಕ್ಕೆ ಹೆಚ್ಚು ಸೂಕ್ತವಾಗಲಿದ್ದಾರೆ.  ಕ್ರಿಕೆಟ್​ಗೆ 5 ವರ್ಷಗಳ ಹಿಂದೆ ವಿದಾಯ ಹೇಳಿರುವುದರಿಂದ ನೆಹ್ರಾ ಈ ಹುದ್ದೆಗೆ ಸರಿ ಹೋಗಲಿದ್ದಾರೆ.  ಹಾಗೆಯೇ ದ್ರಾವಿಡ್ ಅವರನ್ನು ಟಿ20ಯಿಂದ ತೆಗೆದುಹಾಕಬೇಕು ಎಂದು ನಾನು ಹೇಳುತ್ತಿಲ್ಲ. 2024ರ ವಿಶ್ವಕಪ್‌ಗೆ ತಂಡವನ್ನು ಕಟ್ಟಲು ಆಶಿಶ್ ಮತ್ತು ರಾಹುಲ್ ಇಬ್ಬರೂ ಒಟ್ಟಾಗಿ ಕೆಲಸ ಮಾಡಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ. ಹರ್ಭಜನ್ ಅವರಂತೆಯೇ ಇತರೆ ಕ್ರಿಕೆಟ್ ತಜ್ಞರು ಕೂಡ ಇಂಗ್ಲೆಂಡ್‌ನಲ್ಲಿರುವಂತೆಯೇ ವಿವಿಧ ಸ್ವರೂಪಗಳಿಗೆ ವಿಭಿನ್ನ ಮುಖ್ಯ ಕೋಚ್‌ಗಳನ್ನು ಆಯ್ಕೆ ಮಾಡುವುದು ಸೂಕ್ತ ಎಂದಿದ್ದಾರೆ. ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Thu, 24 November 22

ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ