‘ನಾಯಕತ್ವ ಕಳೆದುಕೊಳ್ಳುವ ಭಯ ನನಗಿಲ್ಲ’: ಏಕದಿನ ಸರಣಿ ಆರಂಭಕ್ಕೂ ಮುನ್ನ ಧವನ್ ಸ್ಪಷ್ಟೀಕರಣ..!

Shikhar Dhawan: ‘ನಾಯಕತ್ವ ಕಳೆದುಕೊಳ್ಳುವ ಭಯ ನನಗಿಲ್ಲ. ನಾವು ಖಾಲಿ ಕೈಯಲ್ಲಿ ಈ ಜಗತ್ತಿಗೆ ಬಂದಿದ್ದೇವೆ ಮತ್ತು ಖಾಲಿ ಕೈಯಲ್ಲಿಯೇ ಹೋಗುತ್ತೇವೆ. ಹಾಗಾಗಿ ಏನನ್ನು ನಾವು ನಮ್ಮೊಂದಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

‘ನಾಯಕತ್ವ ಕಳೆದುಕೊಳ್ಳುವ ಭಯ ನನಗಿಲ್ಲ’: ಏಕದಿನ ಸರಣಿ ಆರಂಭಕ್ಕೂ ಮುನ್ನ ಧವನ್ ಸ್ಪಷ್ಟೀಕರಣ..!
Image Credit source: Cricket Addictor
Follow us
TV9 Web
| Updated By: ಪೃಥ್ವಿಶಂಕರ

Updated on:Nov 24, 2022 | 12:50 PM

ಪ್ರಸ್ತುತ ನ್ಯೂಜಿಲೆಂಡ್ (New Zealand) ಪ್ರವಾಸದಲ್ಲಿರುವ ಟೀಂ ಇಂಡಿಯಾ (Team India) ಟಿ20 ಸರಣಿಯನ್ನು 1-0 ಅಂತರದಲ್ಲಿ ಗೆದ್ದು ಬೀಗಿದೆ. ಇದೀಗ ಏಕದಿನ ಸರಣಿಯ ಸರದಿ ಬಂದಿದ್ದು, ಶುಕ್ರವಾರದಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಮೂರು ಪಂದ್ಯಗಳ ಸರಣಿಗೂ ಮುನ್ನ ಭಾರತ ತಂಡದ ನಾಯಕ ಶಿಖರ್ ಧವನ್ (Shikhar Dhawan) ಹಳೆಯ ವಿವಾದವೊಂದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ವಾಸ್ತವವಾಗಿ ಈ ಹಿಂದೆ ನಡೆದ ಜಿಂಬಾಬ್ವೆ ಪ್ರವಾಸದಲ್ಲಿ ಧವನ್​ರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಈ ಪ್ರವಾಸಕ್ಕೆ ಟೀಂ ಇಂಡಿಯಾದ ನಾಯಕತ್ವವನ್ನು ಮೊದಲು ಧವನ್​ಗೆ ವಹಿಸಲಾಗಿತ್ತು. ಆ ಬಳಿಕ ಇದ್ದಕ್ಕಿದ್ದಂತೆ ತಂಡಕ್ಕೆ ಎಂಟ್ರಿಕೊಟ್ಟ ರಾಹುಲ್​ಗೆ (KL Rahul) ನಾಯಕತ್ವ ಹಸ್ತಾಂತರಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧವನ್, ನಾಯಕತ್ವ ಕಳೆದುಕೊಳ್ಳುವ ಭಯ ನನಗಿಲ್ಲ ಎಂದಿದ್ದಾರೆ.

ಜಿಂಬಾಬ್ವೆ ಪ್ರವಾಸದಲ್ಲಿ ನಾಯಕತ್ವದಿಂದ ಕೆಳಗಿಸಿದ ಬಗ್ಗೆ ಪ್ರತಿಕ್ರಯಿಸಿರುವ ಧವನ್, ‘ನಾಯಕತ್ವ ಕಳೆದುಕೊಳ್ಳುವ ಭಯ ನನಗಿಲ್ಲ. ನಾವು ಖಾಲಿ ಕೈಯಲ್ಲಿ ಈ ಜಗತ್ತಿಗೆ ಬಂದಿದ್ದೇವೆ ಮತ್ತು ಖಾಲಿ ಕೈಯಲ್ಲಿಯೇ ಹೋಗುತ್ತೇವೆ. ಹಾಗಾಗಿ ಏನನ್ನು ನಾವು ನಮ್ಮೊಂದಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಧವನ್‌ಗೆ ಈ ಸರಣಿ ಮಹತ್ವದ್ದಾಗಿದೆ

ಆಟಗಾರನಾಗಿ ಶಿಖರ್ ಧವನ್ ಅವರಿಗೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ವಾಸ್ತವವಾಗಿ, ಧವನ್ ಮುಂದಿನ ವರ್ಷ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗುವ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಧವನ್ ಈಗಾಗಲೇ ಟೆಸ್ಟ್ ಮತ್ತು ಟಿ 20 ಮಾದರಿಯಲ್ಲಿ ಬಹಳ ದೂರ ಸರಿದಿದ್ದಾರೆ. ಹಾಗಾಗಿ ಏಕದಿನ ಸ್ವರೂಪದಲ್ಲಿ ಏನಾದರೂ ಧವನ್ ಕಳಪೆ ಪ್ರದರ್ಶನ ನೀಡಿದರೆ ಅವರಿಗೆ ಈ ಮಾದರಿಯಲ್ಲೂ ಅವಕಾಶಗಳು ಕಡಿಮೆಯಾಗಬಹುದು. ಕಳೆದ ಏಕದಿನ ಸರಣಿಯಲ್ಲಿ ಧವನ್ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳಲ್ಲಿ ಕೇವಲ 25 ರನ್ ಗಳಿಸಿದ್ದರು. ಹೀಗಾಗಿ ಧವನ್​ಗೆ ನ್ಯೂಜಿಲೆಂಡ್‌ ಏಕದಿನ ಸರಣಿ ಮಹತ್ವದ್ದಾಗಿದೆ.

ಇದನ್ನೂ ಓದಿ:  ICC ODI Rankings: ಏಕದಿನ ರ್‍ಯಾಂಕಿಂಗ್‌ ಪ್ರಕಟ; ನಂ.1 ಪಟ್ಟದಿಂದ ಇಂಗ್ಲೆಂಡ್ ಔಟ್..! ಭಾರತಕ್ಕೆ ಯಾವ ಸ್ಥಾನ?

ಆದರೆ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಧವನ್ ಕಳಪೆ ಏಕದಿನ ದಾಖಲೆ ಹೊಂದಿರುವುದು ಅವರಿಗೆ ಮತ್ತಷ್ಟು ಸಂಕಷ್ಟ ತಂದಿದೆ. ಈ ಆಟಗಾರ ಇಲ್ಲಿ ಆಡಿರುವ 11 ಪಂದ್ಯಗಳಲ್ಲಿ ಕೇವಲ 37.30ರ ಸರಾಸರಿಯಲ್ಲಿ 373 ರನ್ ಗಳಿಸಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಈ ಅವಧಿಯಲ್ಲಿ ಧವನ್ ಅವರ ಸ್ಟ್ರೈಕ್ ರೇಟ್ ಕೇವಲ 81. ಇಂತಹ ಪರಿಸ್ಥಿತಿಯಲ್ಲಿ, ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಅವರು ರನ್ ಗಳಿಸುವುದು ಅಷ್ಟು ಸುಲಭವಲ್ಲ ಎಂಬುದು ಸ್ಪಷ್ಟವಾಗಿದೆ.

ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಮೇಲುಗೈ

ಶಿಖರ್ ಧವನ್ ಮತ್ತು ಕೇನ್ ವಿಲಿಯಮ್ಸನ್ ಗುರುವಾರ ಏಕದಿನ ಸರಣಿಯನ್ನು ಅನಾವರಣಗೊಳಿಸಿದರು. ಎರಡೂ ತಂಡಗಳ ನಾಯಕರ ಈ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ. ಟೀಂ ಇಂಡಿಯಾ ಟಿ20 ಸರಣಿ ಗೆದ್ದಿರಬಹುದು ಆದರೆ ಏಕದಿನ ಸರಣಿಯಲ್ಲಿ ಕಿವೀಸ್ ಮೇಲುಗೈ ಸಾಧಿಸಿದೆ. ಕೊನೆಯ ಪ್ರವಾಸದಲ್ಲಿ, ನ್ಯೂಜಿಲೆಂಡ್ ತನ್ನ ತವರಿನಲ್ಲಿ ಭಾರತವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Thu, 24 November 22