ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಆಲ್ ಟೈಮ್ ಎದುರಾಳಿ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಗಂಭೀರ್ ಅವರ ಈ ತಂಡದಲ್ಲಿ ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾದ ಮೂವರು ಆಟಗಾರರು ಸ್ಥಾನ ಪಡೆದಿರುವುದು ವಿಶೇಷ. ಇನ್ನು ಈ ತಂಡದ ಆರಂಭಿಕರಾಗಿ ಆಸ್ಟ್ರೇಲಿಯಾದ ಸಾರ್ವಕಾಲಿಕ ಬೆಸ್ಟ್ ಒಪನರ್ಗಳಾದ ಮ್ಯಾಥ್ಯೂ ಹೇಡನ್ ಹಾಗೂ ಆ್ಯಡಂ ಗಿಲ್ಕ್ರಿಸ್ಟ್ ಅವರನ್ನು ಹೆಸರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಕಾಣಿಸಿಕೊಂಡಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್ನ ಮಾಜಿ ನಾಯಕ ಬ್ರಿಯಾನ್ ಲಾರಾ ಅವರನ್ನು ಆಯ್ಕೆ ಮಾಡಿದರೆ, ಐದನೇ ಸ್ಥಾನದಲ್ಲಿ ಆಸೀಸ್ ಆಲ್ರೌಂಡರ್ ಆ್ಯಂಡ್ರ್ಯೂ ಸೈಮಂಡ್ಸ್ ಅವರನ್ನು ಹೆಸರಿಸಿದ್ದಾರೆ. ಆರನೇ ಕ್ರಮಾಂಕದಲ್ಲಿ ಪಾಕ್ ತಂಡದ ಮಾಜಿ ಆಟಗಾರ ಇಂಝಮಾಮ್ ಉಲ್ ಹಕ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!
ಆಲ್ರೌಂಡರ್ ಆಗಿ ಪಾಕಿಸ್ತಾನದ ಮಾಜಿ ಆಟಗಾರ ಅಬ್ದುಲ್ ರಝಾಕ್ ಅವರನ್ನು ಗಂಭೀರ್ ಆರಿಸಿದ್ದಾರೆ. ಅಲ್ಲದೆ ಸ್ಪಿನ್ನರ್ ಆಗಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ಗೆ ಸ್ಥಾನ ನೀಡಿದ್ದಾರೆ. ಹಾಗೆಯೇ ವೇಗಿಯಾಗಿ ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೊಯೇಬ್ ಅಖ್ತರ್ ಅವರನ್ನು ಆಯ್ಕೆ ಮಾಡಿದ್ದಾರೆ. ಇವರ ಜೊತೆಗೆ ಸೌತ್ ಆಫ್ರಿಕಾ ವೇಗಿ ಮೊರ್ನೆ ಮಾರ್ಕೆಲ್ ಹಾಗೂ ಇಂಗ್ಲೆಂಡ್ನ ಮಾಜಿ ಆಲ್ರೌಂಡರ್ ಆ್ಯಂಡ್ರೂ ಫಿಟ್ಲಾಂಫ್ ಅವರನ್ನು ಆಯ್ಕೆ ಮಾಡಿದ್ದಾರೆ. ಅದರಂತೆ ಗಂಭೀರ್ ಎದುರಿಸಿದ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…
ಶ್ರೀಲಂಕಾ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ದೀರ್ಘಾವಧಿಯ ವಿಶ್ರಾಂತಿ ಸಿಕ್ಕಿದೆ. ಈ ವಿಶ್ರಾಂತಿಯ ಬಳಿಕ ಭಾರತೀಯ ಆಟಗಾರರು ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಇದು ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಅವರ ಮೊದಲ ಟೆಸ್ಟ್ ಸರಣಿ ಎಂಬುದು ವಿಶೇಷ.