T20 World Cup Qualifier 2023: ಟಿ20 ವಿಶ್ವಕಪ್ ಯುರೋಪ್ ಕ್ವಾಲಿಫೈಯರ್ನ 14ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ಆಟಗಾರ ಜಾರ್ಜ್ ಮುನ್ಸಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಎದುರಾಳಿ ತಂಡ ಕೇವಲ 66 ರನ್ಗಳಿಗೆ ಆಲೌಟ್ ಆಗಿರುವುದು ಇಲ್ಲಿ ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರಿಯಾ ತಂಡವು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಸ್ಕಾಟ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ ಜಾರ್ಜ್ ಮುನ್ಸಿ ಹಾಗೂ ಒಲ್ಲಿ ಹೇರ್ಸ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್ಗೆ 96 ರನ್ಗಳ ಜೊತೆಯಾಟವಾಡಿದ ಬಳಿಕ ಒಲ್ಲಿ ಹೇರ್ಸ್ (23) ಔಟಾದರು.
ಆದರೆ ಇನ್ನೊಂದೆಡೆ ಸಿಡಿಲಬ್ಬರ ಮುಂದುವರೆಸಿದ ಜಾರ್ಜ್ ಮುನ್ಸಿ 50 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನು ಸೆಂಚುರಿ ಬಳಿಕ ಕೂಡ ಆಸ್ಟ್ರೀಯಾ ಬೌಲರ್ಗಳ ಬೆಂಡೆತ್ತಿದ ಮುನ್ಸಿ ಕೇವಲ 61 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 132 ರನ್ ಸಿಡಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಬೆರಿಂಗ್ಟನ್ 19 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 40 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 232 ಕ್ಕೆ ತಂದು ನಿಲ್ಲಿಸಿದರು.
233 ರನ್ಗಳ ಕಠಿಣ ಗುರಿ ಪಡೆದ ಆಸ್ಟ್ರೀಲಿಯಾ ತಂಡಕ್ಕೆ ಸಫ್ಯಾನ್ ಷರೀಫ್ 3ನೇ ಓವರ್ನಲ್ಲಿ ಮೊದಲ ಆಘಾತ ನೀಡಿದರು. ಇದರ ಬೆನ್ನಲ್ಲೇ ನವೀನ್ ವಿಜೆಶೇಖರ (6) ವಿಕೆಟ್ ಪಡೆದು ಗೇವಿನ್ ಮೇನ್ 2ನೇ ಯಶಸ್ಸು ತಂದುಕೊಟ್ಟರು.
ಅಲ್ಲಿಂದ ಶುರುವಾದ ವಿಕೆಟ್ ಪತನ ಬಂದು ನಿಂತದ್ದು 66 ರನ್ಗಳಿಗೆ. ಅಂದರೆ 16.3 ಓವರ್ಗಳಲ್ಲಿ 66 ರನ್ಗಳಿಸುವಷ್ಟರಲ್ಲಿ ಆಸ್ಟ್ರೀಯಾ ತಂಡವು ಸರ್ವಪತನ ಕಂಡಿತು. ಇದರೊಂದಿಗೆ ಸ್ಕಾಟ್ಲೆಂಡ್ ತಂಡ 166 ರನ್ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.
ಇನ್ನು ಸ್ಕಾಟ್ಲೆಂಡ್ ಪರ ಮೈಕೆಲ್ ಲೀಸ್ಕ್ 3 ವಿಕೆಟ್ ಪಡೆದರೆ, ಸಫ್ಯಾನ್ ಷರೀಫ್, ಮೈಕೆಲ್ ಮೇನ್, ಕ್ರಿಸ್ ಗ್ರೀವ್ಸ್ ತಲಾ 2 ವಿಕೆಟ್ ಕಬಳಿಸಿದರು.
ಸ್ಕಾಟ್ಲೆಂಡ್ ಪ್ಲೇಯಿಂಗ್ 11: ಜಾರ್ಜ್ ಮುನ್ಸಿ , ಆಲಿ ಹೇರ್ಸ್ , ಬ್ರಾಂಡನ್ ಮೆಕ್‌ಮುಲ್ಲೆನ್ , ರಿಚಿ ಬೆರಿಂಗ್ಟನ್ (ನಾಯಕ) , ತೋಮಸ್ ಮ್ಯಾಕಿಂತೋಷ್ (ವಿಕೆಟ್ ಕೀಪರ್) , ಮೈಕೆಲ್ ಲೀಸ್ಕ್ , ಕ್ರಿಸ್ ಗ್ರೀವ್ಸ್ , ಮಾರ್ಕ್ ವ್ಯಾಟ್ , ಸಫ್ಯಾನ್ ಷರೀಫ್ , ಗೇವಿನ್ ಮೇನ್ , ಬ್ರಾಡ್ಲಿ ಕ್ಯೂರಿ.
ಇದನ್ನೂ ಓದಿ: Suzie Bates: ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸುಝಿ ಬೇಟ್ಸ್
ಆಸ್ಟ್ರೀಯಾ ಪ್ಲೇಯಿಂಗ್ 11: ನವೀನ್ ವಿಜೆಶೇಖರ , ಇಕ್ಬಾಲ್ ಹೊಸೈನ್ , ರಜ್ಮಲ್ ಶಿಗಿವಾಲ್ (ನಾಯಕ) , ಅರ್ಮಾನ್ ರಾಂಧವಾ , ಶಾಹಿಲ್ ಮೊಮಿನ್ , ಮೆಹರ್ ಚೀಮಾ (ವಿಕೆಟ್ ಕೀಪರ್) , ಉಮೈರ್ ತಾರಿಕ್ , ಅಬ್ದುಲ್ಲಾ ಅಕ್ಬರ್ಜನ್ , ಜಾವೀದ್ ಸದ್ರಾನ್ , ಸಹೇಲ್ ಜದ್ರಾನ್ , ಅಮಿತ್ ನಾಥ್ವಾನಿ.