ಟೀಮ್ ಇಂಡಿಯಾವನ್ನು ನೆನಪಿಸಿದ ವಿದೇಶಿ ತಂಡ: ಕೇವಲ 36 ರನ್​ಗೆ ಆಲೌಟ್

ಇನ್ನು ಜರ್ಮನಿಯ ಈ ಇನಿಂಗ್ಸ್​ನಲ್ಲಿ ಒಂದೇ ಒಂದು ಫೋರ್ ಅಥವಾ ಸಿಕ್ಸ್ ಮೂಡಿಬಂದಿಲ್ಲ ಎಂಬುದು ಇನ್ನೊಂದು ವಿಶೆಷ. ಸ್ಕಾಟ್ಲೆಂಡ್​ನ 5 ಬೌಲರ್‌ಗಳು ಜರ್ಮನಿಯ 9 ವಿಕೆಟ್ ಪಡೆದರು.

ಟೀಮ್ ಇಂಡಿಯಾವನ್ನು ನೆನಪಿಸಿದ ವಿದೇಶಿ ತಂಡ: ಕೇವಲ 36 ರನ್​ಗೆ ಆಲೌಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 29, 2021 | 6:54 PM

ಕೇವಲ 36 ರನ್…ಈ ಸ್ಕೋರ್ ಹೇಳಿದ್ರೆ ಟೀಮ್ ಇಂಡಿಯಾ (Team India) ಅಭಿಮಾನಿಗಳಿಗೆ ಕಳೆದ ವರ್ಷ ಆಸ್ಟ್ರೇಲಿಯಾ (Australia) ವಿರುದ್ದ ನಡೆದ ಅಡಿಲೇಡ್ ಟೆಸ್ಟ್ ಪಂದ್ಯ ನೆನಪಾಗುತ್ತೆ. ಏಕೆಂದರೆ ಆ ಪಂದ್ಯದಲ್ಲಿ ಟೀಮ್ ಇಂಡಿಯಾ 2ನೇ ಇನಿಂಗ್ಸ್​ನಲ್ಲಿ ಕೇವಲ 36 ರನ್​ಗಳಿಗೆ ಮುಗ್ಗರಿಸಿತ್ತು. ಇದೀಗ ಆ ವಿಚಾರ ಮತ್ತೆ ಸದ್ದು ಮಾಡಲು ಕಾರಣ ಟಿ20 ಕ್ರಿಕೆಟ್​ನಲ್ಲಿ ಒಂದು ತಂಡ ಕೇವಲ 36 ರನ್​ಗಳಿಗೆ ಆಲೌಟ್ ಆಗಿದೆ. ಅದು ಕೂಡ ಫೋರ್, ಸಿಕ್ಸ್ ಬಾರಿಸದೇ ಎಂಬುದು ವಿಶೇಷ.

ಹೌದು, ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಪಂದ್ಯದ ಪಂದ್ಯದಲ್ಲಿ ಜರ್ಮನಿಯ ಮಹಿಳಾ ಕ್ರಿಕೆಟ್ ತಂಡವು ಸ್ಕಾಟ್ಲೆಂಡ್ ವಿರುದ್ದ ಕೇವಲ 36 ರನ್ ಗಳಿಗೆ ಆಲೌಟ್ ಆಗಿ ಹೊಸ ಇತಿಹಾಸ ಬರೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ಜರ್ಮನಿ ತಂಡವು ಕೇವಲ 3 ರನ್ ಗಳಿಗೆ ಮೊದಲ 2 ವಿಕೆಟ್ ಕಳೆದುಕೊಂಡಿತು. ಆ ಬಳಿಕ 9 ರನ್​ಗಳಿಸುವಷ್ಟರಲ್ಲಿ ಮತ್ತೆ 4 ಹೆಚ್ಚು ವಿಕೆಟ್ ಕಳೆದುಕೊಂಡರು. ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಜರ್ಮನಿ ಬ್ಯಾಟರುಗಳು ಪೆವಿಲಿಯನ್ ಪರೇಡ್ ನಡೆಸಿದ್ದರು. ಅಂತಿಮವಾಗಿ ಜರ್ಮನಿ ಮಹಿಳೆಯರು ತಮ್ಮ ಇನಿಂಗ್ಸ್​ನ್ನು 36 ರನ್​ಗಳಿಗೆ ಅಂತ್ಯಗೊಳಿಸಿದ್ದರು. ಇಲ್ಲಿ ಮತ್ತೊಂದು ವಿಶೇಷ ಎಂದರೆ ಸ್ಕಾಟ್ಲೆಂಟ್ 13 ಎಕ್ಸ್​ಟ್ರಾ ರನ್​ಗಳನ್ನು ನೀಡಿರುವುದು. ಅಂದರೆ ಜರ್ಮನಿ ಬ್ಯಾಟ್ ಮೂಲಕ ಕಲೆಹಾಕಿದ್ದು ಕೇವಲ 23 ರನ್​ ಮಾತ್ರ. ಇನ್ನು ಜರ್ಮನಿ ಪರ 8ನೇ ಕ್ರಮಾಂಕದ ಬ್ಯಾಟರ್ 7 ರನ್​ಗಳಿಸಿದ್ದೇ ಗರಿಷ್ಠ ಸ್ಕೋರ್.

ಇನ್ನು ಜರ್ಮನಿಯ ಈ ಇನಿಂಗ್ಸ್​ನಲ್ಲಿ ಒಂದೇ ಒಂದು ಫೋರ್ ಅಥವಾ ಸಿಕ್ಸ್ ಮೂಡಿಬಂದಿಲ್ಲ ಎಂಬುದು ಇನ್ನೊಂದು ವಿಶೆಷ. ಸ್ಕಾಟ್ಲೆಂಡ್​ನ 5 ಬೌಲರ್‌ಗಳು ಜರ್ಮನಿಯ 9 ವಿಕೆಟ್ ಪಡೆದರು. ಒಬ್ಬರು ರನೌಟ್ ಆಗಿ ಹೊರನಡೆದಿದ್ದರು. ಸ್ಕಾಟ್ಲೆಂಡ್ ಪರ ಕ್ಯಾಥರೀನ್ ಫ್ರೇಸರ್ 4 ಓವರ್ ಗಳಲ್ಲಿ 3 ವಿಕೆಟ್ ಪಡೆದು ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ದದ ಪಂದ್ಯದಲ್ಲೂ ಜರ್ಮನಿ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಐರ್ಲೆಂಡ್ ನೀಡಿದ 196 ರನ್​ ಟಾರ್ಗೆಟ್ ಬೆನ್ನತ್ತಿದ ಜರ್ಮನಿ ತಂಡದ ಅಗ್ರ ಮೂವರು ಬ್ಯಾಟರುಗಳು ಇಡೀ 120 ಎಸೆತಗಳಲ್ಲಿ 107 ಎಸೆತಗಳನ್ನು ಎದುರಿಸಿದ್ದರು. ಆದರೆ ಗಳಿಸಿದ್ದು ಮಾತ್ರ ಎರಡಂಕಿ ರನ್ ಅಷ್ಟೇ. ಅಂದರೆ ಜರ್ಮನಿ ತಂಡವು ಆ ಪಂದ್ಯದಲ್ಲಿ ನಿಗದಿತ 20 ಓವರ್​ನಲ್ಲಿ 3 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 32 ರನ್ ಮಾತ್ರ ಆಗಿತ್ತು. ಇದೀಗ ಸ್ಕಾಟ್ಲೆಂಟ್ ವಿರುದ್ದ 36 ರನ್​ಗಳಿಗೆ ಆಲೌಟ್ ಆಗುವ ಮೂಲಕ ಮತ್ತೆ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: IPL 2021: RCB ಪರ ಈ ಇಬ್ಬರು ಕಣಕ್ಕಿಳಿಯುವುದು ಖಚಿತ

ಇದನ್ನೂ ಓದಿ: R Ashwin: 1 ಪಂದ್ಯ 34 ವಿಕೆಟ್​: ಟೀಮ್ ಇಂಡಿಯಾದಲ್ಲಿ ಅಶ್ವಿನ್​ಗೆ ಸ್ಥಾನ ಬಹುತೇಕ ಖಚಿತ

ಇದನ್ನೂ ಓದಿ: ಟಿವಿಎಸ್‌ನ ಈ ದ್ವಿಚಕ್ರ ವಾಹನವನ್ನು ಕೇವಲ 7,999 ರೂ.ಗೆ ಖರೀದಿಸಬಹುದು

(germany women all out on 36 runs in t20 match against scotland)

Published On - 5:35 pm, Sun, 29 August 21

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!