Glenn Maxwell: ಆರ್​ಸಿಬಿಯಲ್ಲಿ ಅದ್ಭುತ ಪ್ರದರ್ಶನ: ಕೊನೆಗೂ ಕಾರಣ ಬಿಚ್ಚಿಟ್ಟ ಗ್ಲೆನ್ ಮ್ಯಾಕ್ಸ್​ವೆಲ್​, ಏನಂದ್ರು ಗೊತ್ತಾ?

RCB vs PBKS, IPL 2021: ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 57 ರನ್ ಚಚ್ಚಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಇವರು, ನಾನು ಆರ್​ಸಿಬಿಯಲ್ಲಿ ಒಳ್ಳೆಯ ಲಯದಲ್ಲಿರುವುದಕ್ಕೆ ಕಾರಣ ಏನೆಂದು ಹೇಳಿದ್ದಾರೆ.

Glenn Maxwell: ಆರ್​ಸಿಬಿಯಲ್ಲಿ ಅದ್ಭುತ ಪ್ರದರ್ಶನ: ಕೊನೆಗೂ ಕಾರಣ ಬಿಚ್ಚಿಟ್ಟ ಗ್ಲೆನ್ ಮ್ಯಾಕ್ಸ್​ವೆಲ್​, ಏನಂದ್ರು ಗೊತ್ತಾ?
Glenn Maxwell RCB
Follow us
| Updated By: Vinay Bhat

Updated on: Oct 04, 2021 | 8:19 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 2021 ರಲ್ಲಿ (IPL 2021) ಪ್ಲೇ ಆಫ್ ಪ್ರವೇಶಿಸಿದೆ (RCB Playoffs) ಎಂದರೆ ಇದರಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಕೊಡುಗೆ ತುಸು ಹೆಚ್ಚಿದೆ ಎನ್ನಬಹುದು. ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಪರ ಕಣಕ್ಕಿಳಿದಿದ್ದ ಇವರು ಸಂಪೂರ್ಣ ವೈಫಲ್ಯ ಅನುಭವಿಸಿದರು. ಅನೇಕರಿಂದ ಟೀಕೆಗಳಿಗೂ ಒಳಗಾದರು. ಹೀಗಾಗಿ ಐಪಿಎಲ್ 2021 ಹರಾಜಿಗೂ (IPL Auction) ಮುನ್ನ ಪಂಜಾಬ್ ಫ್ರಾಂಚೈಸಿ ಇವರನ್ನು ತಂಡದಿಂದ ಕೈಬಿಟ್ಟಿತು. ಆದರೆ, ಇವರನ್ನು ಆರ್​ಸಿಬಿ ಹರಾಜಿನಲ್ಲಿ ಚೆನ್ನೈ (CSK) ವಿರುದ್ಧ ಹೋರಾಡಿ ಕೊನೆಗೆ 14.25 ಕೋಟಿ ಕೊಟ್ಟು ಖರೀದಿ ಮಾಡಿತು. ಇವರನ್ನು ಇಷ್ಟು ಮೊತ್ತಕ್ಕೆ ವಿರಾಟ್ ಪಡೆ (Virat Kohli) ಖರೀದಿ ಮಾಡಿದ ಬಗ್ಗೆಯೂ ಮಾತುಗಳು ಕೇಳಿಬಂದವು. ಆದರೆ, ಟೀಕಾಕಾರರಿಗೆ ಇಂದು ಮ್ಯಾಕ್ಸ್​ವೆಲ್ ಮುಟ್ಟುನೋಡುವಂತಹ ಉತ್ತರ ಕೊಡುತ್ತಿದ್ದಾರೆ. ಆರ್​ಸಿಬಿ ತಂಡದ ಮ್ಯಾಚ್ ವಿನ್ನರ್ ಆಗಿ ಇವರು ಗುರುತಿಸಿಕೊಂಡಿದ್ದಾರೆ.

ಭಾನುವಾರ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲೇ ಮ್ಯಾಕ್ಸ್​ವೆಲ್ 33 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 57 ರನ್ ಚಚ್ಚಿದರು. ಈ ಮೂಲಕ ಸತತವಾಗಿ ಮೂರನೇ ಅರ್ಧಶತಕ ಬಾರಿಸಿದರು. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾಗ 11 ಪಂದ್ಯಗಳಿಂದ 108 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಈ ಆಲ್​ರೌಂಡರ್ ಈ ವರ್ಷದ ಆರ್​ಸಿಬಿ ಪರ 12 ಪಂದ್ಯಗಳಿಂದ ಬರೋಬ್ಬರಿ 407 ರನ್ ಗಳಿಸಿದ್ಧಾರೆ. ಒಟ್ಟು 5 ಅರ್ಧಶತಕ ಮತ್ತು 19 ಸಿಕ್ಸರ್​ಗಳು ಇವರ ಬ್ಯಾಟ್​ನಿಂದ ಸಿಡಿದಿವೆ. ಇದಕ್ಕೆ ಕಾರಣವೇನು ಏನು?, ಆರ್​ಸಿಬಿ ತಂಡದಲ್ಲಿ ಹೀಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದ್ದು ಹೇಗೆ? ಎಂದು ಸ್ವತಃ ಅವರೇ ಹೇಳಿದ್ದಾರೆ.

ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ಬಳಿಕ ಮಾತನಾಡಿದ ಗ್ಲೆನ್ ಮ್ಯಾಕ್ಸ್​ವೆಲ್, ನಾನು ಆರ್​ಸಿಬಿಯಲ್ಲಿ ಒಳ್ಳೆಯ ಲಯದಲ್ಲಿರುವುದಕ್ಕೆ ಕಾರಣ ನನ್ನ ಬ್ಯಾಟಿಂಗ್ ಪೊಸಿಶನ್ ಎಂದು ಹೇಳಿದ್ದಾರೆ.

“ನಂಬರ್ ನಾಲ್ಕರ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದು ಎಂದರೆ ನನಗೆ ಇಷ್ಟ. ಇದು ನನ್ನ ಫೇವರಿಟ್ ಪೊಸಿಶನ್. ಆಸ್ಟ್ರೇಲಿಯಾ ತಂಡದಲ್ಲೂ ನಾನು ಇದೇ ಸ್ಥಾನದಲ್ಲಿ ಆಡುತ್ತೇನೆ. ಆ ಸ್ಥಾನದಲ್ಲಿ ಸಾಕಷ್ಟು ಯಶಸ್ವಿ ಆಗಿದ್ದೇನೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ನನಗೇ ಅದೇ ಸ್ಥಾನದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಹಿಂದಿನ ಸೀಸನ್​ನಲ್ಲಿ ಐದನೇ ಕ್ರಮಾಂಕದಲ್ಲಿ ಆಡಿದ್ದೆ. ಅಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಈ ಬದಲಾದ ಪೊಸಿಶನ್ ಕಾರಣ ಇರಬಹುದು” ಎಂದು ಮ್ಯಾಕ್ಸ್​ವೆಲ್ ಹೇಳಿದ್ದಾರೆ.

ಆರ್​ಸಿಬಿ ತಂಡ ಅನಾಧಿಕಾಲದಿಂದಲೂ ಮಧ್ಯಮ ಕ್ರಮಾಂಕಕ್ಕೆ ಒಬ್ಬ ಒಳ್ಳೆಯ ಬ್ಯಾಟರ್​ನ ಕೊರತೆ ಅನುಭವಿಸುತ್ತಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಅನೇಕರು ಕಣಕ್ಕಿಳಿದರೂ ಯಶಸ್ವಿಯಾಗಲಿಲ್ಲ. ಸದ್ಯ ಈ ಪೊಸಿಶನ್​ನಲ್ಲಿ ಮ್ಯಾಕ್ಸ್​ವೆಲ್ ಅದ್ಭುತ ಆಟವಾಡುತ್ತಿದ್ದಾರೆ. ಓಪನರ್​ಗಳಾಗಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರೆ, ಮೂರನೇ ಕ್ರಮಾಂಕದಲ್ಲಿ ಶ್ರೀಕರ್ ಭರತ್ ಅವರಿಗೆ ಫಿಕ್ಸ್ ಆಗಿದೆ. ನಾಲ್ಕನೇ ಕ್ರಮಾಂಕ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಎಬಿ ಡಿವಿಲಿಯರ್ಸ್ ಐದನೇ ಸ್ಥಾನದಲ್ಲಿ ಬಂದು ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.

IPL 2021, DC vs CSK: ಇಂದು ಟೇಬಲ್ ಟಾಪರ್​ಗಳ ರೋಚಕ ಕದನ: ಡೆಲ್ಲಿ vs ಚೆನ್ನೈ ಪಂದ್ಯದಲ್ಲಿ ಯಾರಿಗೆ ಗೆಲುವು?

(Glenn Maxwell explains The Reason of Success In Royal Challengers Bangalore IPL 2021 after match RCB vs PBKS)