Virat Kohli: ಪ್ಲೇ ಆಫ್​ಗೆ ಲಗ್ಗೆಯಿಟ್ಟ ಖುಷಿಯಲ್ಲಿ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು ನೋಡಿ

RCB vs PBKS: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಆರ್​ಸಿಬಿ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿರುವುದು ನಾಯಕ ವಿರಾಟ್ ಕೊಹ್ಲಿಗೆ ತುಂಬಾನೇ ಸಂತಸ ತಂದಿದ್ದು, ಪಂದ್ಯ ಮುಗಿದ ಬಳಿಕ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Virat Kohli: ಪ್ಲೇ ಆಫ್​ಗೆ ಲಗ್ಗೆಯಿಟ್ಟ ಖುಷಿಯಲ್ಲಿ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು ನೋಡಿ
Virat Kohli RCB
Follow us
TV9 Web
| Updated By: Vinay Bhat

Updated on: Oct 04, 2021 | 10:34 AM

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2021) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೂರನೇ ತಂಡವಾಗಿ ಪ್ಲೇ ಆಫ್ ಸುತ್ತಿಗೆ (IPL 2021 Playoffs) ಪ್ರವೇಶ ಪಡೆದಿದೆ. ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ 6 ರನ್​ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್​ಗೆ ಲಗ್ಗೆಯಿಟ್ಟಿತು. ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಆರ್​ಸಿಬಿ ತಂಡಕ್ಕೆ ಸಹಕಾರಿಯಾದರೆ, ಯುಜ್ವೇಂದ್ರ ಚಹಾಲ್ (Yuzvendra Chahal) ಅವರ ಸ್ಪಿನ್ ಜಾದು ರಾಹುಲ್ (KL Rahul) ಪಡೆಯನ್ನು ಪೆವಿಲಿಯನ್​ಗೆ ಅಟ್ಟಿತು. ಒಂದು ಸಮಯದಲ್ಲಿ ಪಂಜಾಬ್ ಕಡೆ ವಾಲಿದ್ದ ಪಂದ್ಯವನ್ನು ಚಹಾಲ್ ತಮ್ಮ ಚಾಣಾಕ್ಷ ತನದಿಂದ ಆರ್​ಸಿಬಿ ಕಡೆ ತಿರುಗಿಸಿದರು. ತಮ್ಮ ತಂಡ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿರುವುದು ನಾಯಕ ವಿರಾಟ್ ಕೊಹ್ಲಿಗೆ ತುಂಬಾನೇ ಸಂತಸ ತಂದಿದ್ದು, ಪಂದ್ಯ ಮುಗಿದ ಬಳಿಕ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

“ಅದ್ಭುತವಾದ ಅನುಭವವಾಗುತ್ತಿದೆ. 2011ರ ಬಳಿಕ ಏನು ಆಗಿದೆ ಎಂಬುದನ್ನು ನಾನು ಯೋಚಿಸುವುದಿಲ್ಲ. ಆದರೆ, ಈ ಬಾರಿ ಪಡೆದಿರುವ ಸ್ಥಾನ ಹಿಂದಿಗಿಂತ ಉತ್ತಮವಾಗಿದೆ. 12 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದಿರುವುದು ನಮ್ಮ ತಂಡಕ್ಕೆ ಹೆಮ್ಮೆಯಿದೆ. ಪಾಯಿಂಟ್ ಟೇಬಲ್​ನಲ್ಲಿ ಮೊದಲ ಎರಡು ಸ್ಥಾನ ಪಡೆದುಕೊಳ್ಳಲು ನಮಗೆ ಅವಕಾಶವಿದೆ. ಇದಕ್ಕಾಗಿ ಸಾಕಷ್ಟು ಶ್ರಮವಹಿಸುತ್ತೇವೆ. ನಮ್ಮ ತಂಡದ ಕೆಲವು ವಿಭಾಗಗಳಲ್ಲಿ ಇನ್ನೂ ಸರಿಪಡಿಸುವುದಿದೆ. ಇಲ್ಲವಾದಲ್ಲಿ ಟಾಪ್ 2 ಸ್ಥಾನ ಪಡೆಯಲು ಸಾಧ್ಯವಿಲ್ಲ. ಇಲ್ಲಿ ನಡೆದಿದ್ದು ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ. ಸಾಕಷ್ಟು ಒತ್ತಡವಿತ್ತು. ವಿಕೆಟ್ ತುಂಬಾನೆ ನಿಧಾನಗತಿಯಾಗಿದ್ದರಿಂದ ರನ್​ಗಳ ಬರುತ್ತಿರಲಿಲ್ಲ” ಎಂದು ಕೊಹ್ಲಿ ಹೇಳಿದ್ದಾರೆ.

“ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮವಾಗಿ ಬ್ಯಾಟ್ ಮಾಡಿದರು. ನಮಗೆ ತಿಳಿದಿತ್ತು, ಈ ಎರಡು ವಿಕೆಟ್ ಕಿತ್ತರೆ ನಾವು ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಲು ಸಾಧ್ಯವಿದೆ ಎಂದು. ನಮ್ಮ ಬೌಲರ್​ಗಳು ಅದ್ಭುತವಾಗಿ ಕಮ್​ಬ್ಯಾಕ್ ಮಾಡಿದರು. ಹರ್ಷಲ್ ಪಟೇಲ್, ಚಹಾಲ್, ಶಹ್ಬಾಜ್ ಬೌಲಿಂಗ್ ಉತ್ತಮವಾಗಿತ್ತು. ಈ ವರ್ಷ ನಮ್ಮ ತಂಡದ ಆಟಗಾರರು ಜವಾಬ್ದಾರಿ ತೆಗೆದುಕೊಂಡು ಆಡುತ್ತಿದ್ದಾರೆ” ಎಂದು ಕೊಹ್ಲಿ ಹೇಳಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 20 ಓವರ್​ನಲ್ಲಿ 7 ವಿಕೆಟಿಗೆ 164 ರನ್‌ ಪೇರಿಸಿತು. ಪಂಜಾಬ್‌ 6 ವಿಕೆಟಿಗೆ 158 ರನ್‌ ಮಾಡಿ 8ನೇ ಸೋಲಿಗೆ ತುತ್ತಾಯಿತು. ರಾಹುಲ್‌ (39), ಅಗರ್ವಾಲ್‌ (57) 10.5 ಓವರ್‌ಗಳಿಂದ 91 ರನ್‌ ರಾಶಿ ಹಾಕಿದಾಗ ಪಂಜಾಬ್‌ ಗೆ ಗೆಲುವು ಖಂಡಿತ ಎಂಬುದೇ ಎಲ್ಲರ ನಿರೀಕ್ಷೆ  ಯಾಗಿತ್ತು.

ಆದರೆ ಅದೃಷ್ಟ ಆರ್‌ಸಿಬಿ ಪಾಳೆಯದಲ್ಲಿ ವಾಲಿತು. 17ನೇ ಓವರ್‌ನಲ್ಲಿ 127ಕ್ಕೆ 5 ವಿಕೆಟ್‌ ಕಳೆದುಕೊಂಡ ಪಂಜಾಬ್‌ ಸೋಲಿನತ್ತ ಮುಖ ಮಾಡತೊಡಗಿತು. ಪೂರಣ್‌ ಮತ್ತೆ ಕೈಕೊಟ್ಟರು. ಅಗರ್ವಾಲ್‌ ಮತ್ತು ಸರ್ಫೋರಾಜ್​ (0) ಅವರನ್ನು ಚಹಾಲ್‌ ಒಂದೇ ಓವರ್‌ ನಲ್ಲಿ ವಾಪಸ್‌ ಕಳುಹಿಸಿ ಆರ್​ಸಿಬಿಗೆ ದೊಡ್ಡ ಬ್ರೇಕ್ ತಂದುಕೊಟ್ಟರು. ಈ ಮೂಲಕ ಅಂತಿಮವಾಗಿ ಆರ್​​ಸಿಬಿ 6 ರನ್​ಗಳ ರೋಚಕ ಜಯ ತನ್ನದಾಗಿಸಿತು.

Yuzvendra Chahal: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಯುಜ್ವೇಂದ್ರ ಚಹಾಲ್: ಟಿ-20 ವಿಶ್ವಕಪ್​ಗೆ ಆಯ್ಕೆ ಪಕ್ಕಾ

Glenn Maxwell: ಆರ್​ಸಿಬಿಯಲ್ಲಿ ಅದ್ಭುತ ಪ್ರದರ್ಶನ: ಕೊನೆಗೂ ಕಾರಣ ಬಿಚ್ಚಿಟ್ಟ ಗ್ಲೆನ್ ಮ್ಯಾಕ್ಸ್​ವೆಲ್​, ಏನಂದ್ರು ಗೊತ್ತಾ?

(RCB Royal Challengers Bangalore qualify for the IPl 2021 play-offs Virat Kohli said its amazing feeling)

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ