KL Rahul: ಆರೆಂಜ್ ಕ್ಯಾಪ್ಗಾಗಿ ರಾಹುಲ್-ಗಾಯಕ್ವಾಡ್ ನಡುವೆ ಹೋರಾಟ: ಪರ್ಪಲ್ ಕ್ಯಾಪ್ ಹರ್ಷಲ್ ಬಳಿ ಭದ್ರ
IPL 2021 Orange Cap: ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 35 ಎಸೆತಗಳಲ್ಲಿ 39 ರನ್ ಬಾರಿಸುವ ಮೂಲಕ ರುತುರಾಜ್ರನ್ನು ಹಿಂದಿಕ್ಕಿ ರಾಹುಲ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಸದ್ಯ ರಾಹುಲ್ 12 ಪಂದ್ಯಗಳಲ್ಲಿ 528 ರನ್ ಬಾರಿಸಿದ್ದರೆ, ಗಾಯಕ್ವಾಡ್ 12 ಪಂದ್ಯಗಳಲ್ಲಿ 508 ರನ್ ಪೂರೈಸಿದ್ದಾರೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣ ಅಂತಿಮ ಹಂತಕ್ಕೆ ತಲುಪುತ್ತಿದ್ದು ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಟೂರ್ನಿಯಿಂದ ಹೊರಬಿದ್ದಿದೆ. ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಭಾನುವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಆರ್ಸಿಬಿ (RCB vs PBKS) ವಿರುದ್ಧ ಸೋಲು ಮೂಲಕ ಬುತೇಕ ಟೂರ್ನಿಯಿಂದ ಹೊರಬಿದ್ದಿದೆ. ಇತ್ತ ಹೈದರಾಬಾದ್ ವಿರುದ್ಧ ಕೆಕೆಆರ್ ಗೆದ್ದಿದ್ದು, ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ. ಇದಕ್ಕೂ ಮುನ್ನ ಶನಿವಾರ ನಡೆದ ರಾಜಸ್ಥಾನ್ ರಾಯಲ್ಸ್ (RR vs CSK) ವಿರುದ್ಧದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ (Ruturaj Gaikwad) ಚೊಚ್ಚಲ ಐಪಿಎಲ್ ಶತಕ ಬಾರಿಸಿ ಆರೆಂಜ್ ಕ್ಯಾಪ್ (IPL 2021 Orange Cap) ತಮ್ಮದಾಗಿಸಿದ್ದರು. ಆದರೆ, ಸದ್ಯ ಇದು ,ತ್ತೆ ಕೆ. ಎಲ್ ರಾಹುಲ್ (KL Rahul) ಕೈಗೆ ಸೇರಿದೆ.
ಹೌದು, ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 35 ಎಸೆತಗಳಲ್ಲಿ 39 ರನ್ ಬಾರಿಸುವ ಮೂಲಕ ರುತುರಾಜ್ರನ್ನು ಹಿಂದಿಕ್ಕಿ ರಾಹುಲ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಸದ್ಯ ರಾಹುಲ್ 12 ಪಂದ್ಯಗಳಲ್ಲಿ 528 ರನ್ ಬಾರಿಸಿದ್ದರೆ, ಗಾಯಕ್ವಾಡ್ 12 ಪಂದ್ಯಗಳಲ್ಲಿ 508 ರನ್ ಪೂರೈಸಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಆರೆಂಜ್ ಕ್ಯಾಪ್ಗಾಗಿ ಕಠಿಣ ಪೈಪೋಟಿ ಏರ್ಪಟ್ಟಿದೆ.
ಮೂರನೇ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಇದ್ದು ಇವರು 12 ಪಂದ್ಯಗಳಲ್ಲಿ 480 ರನ್ ಸಿಡಿಸಿದ್ದಾರೆ. ಶಿಖರ್ ಧವನ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರು 12 ಪಂದ್ಯಗಳಲ್ಲಿ 462 ರನ್ ಗಳಿಸಿದ್ದಾರೆ. ಐದನೇ ಸ್ಥಾನದಲ್ಲಿ ಸಿಎಸ್ಕೆ ತಂಡದ ಫಾಫ್ ಡುಪ್ಲೆಸಿಸ್ ಅವರಿದ್ದು 12 ಪಂದ್ಯಗಳಲ್ಲಿ 460 ರನ್ ಗಳಿಸಿದ್ದಾರೆ.
ಇನ್ನೂ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿರುವ ಆಟಗಾರ ಆರ್ಸಿಬಿ ತಂಡದ ಹರ್ಷಲ್ ಪಟೇಲ್. ಇವರು 12 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ. ಈ ಬಾರಿ ಒಂದು ಸಲ 5 ವಿಕೆಟ್ ಮತ್ತು 1 ಬಾರಿ 4 ವಿಕೆಟ್ ಪಡೆದ ಸಾಧನೆ ಜೊತೆಗೆ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ.
ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆವೇಶ್ ಖಾನ್ ಇದ್ದು ಇವರು 12 ಪಂದ್ಯಗಳಲ್ಲಿ 21 ವಿಕೆಟ್ ಕಿತ್ತಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಮೊಹಮ್ಮದ್ ಶಮಿ 13 ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಬುಮ್ರಾ 12 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.
Yuzvendra Chahal: ಐಪಿಎಲ್ನಲ್ಲಿ ಹೊಸ ದಾಖಲೆ ಬರೆದ ಯುಜ್ವೇಂದ್ರ ಚಹಾಲ್: ಟಿ-20 ವಿಶ್ವಕಪ್ಗೆ ಆಯ್ಕೆ ಪಕ್ಕಾ
( KL Rahul holds on to Orange Cap IPL 2021 Updated Points Table Orange Cap Purple Cap list after KKR vs SRH Match)