Yuzvendra Chahal: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಯುಜ್ವೇಂದ್ರ ಚಹಾಲ್: ಟಿ-20 ವಿಶ್ವಕಪ್​ಗೆ ಆಯ್ಕೆ ಪಕ್ಕಾ

Yuzvendra Chahal Record, RCB vs PBKS: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಾರುಖ್ ಖಾನ್, ಪೂರನ್ ಮತ್ತು ಮಯಾಂಕ್ ಅಗರ್ವಾಲ್​ ವಿಕೆಟ್ ಕೀಳುವ ಮೂಲಕ ಐಪಿಎಲ್​ನಲ್ಲಿ ಆರ್​ಸಿಬಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹೊಸ ದಾಖಲೆ ಬರೆದಿದ್ದಾರೆ.

Yuzvendra Chahal: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಯುಜ್ವೇಂದ್ರ ಚಹಾಲ್: ಟಿ-20 ವಿಶ್ವಕಪ್​ಗೆ ಆಯ್ಕೆ ಪಕ್ಕಾ
Yuzvendra Chahal RCB IPL 2021
Follow us
| Updated By: Vinay Bhat

Updated on: Oct 04, 2021 | 9:11 AM

ಭಾರತ ಟಿ-20 ವಿಶ್ವಕಪ್ (ICC T20 World Cup) ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಯುಜ್ವೇಂದ್ರ ಚಹಾಲ್ (Yuzvendra Chahal) ಐಪಿಎಲ್ 2021 ರಲ್ಲಿ (IPL 2021) ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ಚಹಾಲ್ ಇದೀಗ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ನಡುವಣ ಪಂದ್ಯದಲ್ಲಿ ಚಹಾಲ್ ವಿಶೇಷ ಸಾಧನೆ ಮಾಡಿದರು. ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಇವರು 4 ಓವರ್ ಬೌಲಿಂಗ್ ಮಾಡಿ 29 ರನ್ ನೀಡಿ ರಾಹುಲ್ (KL Rahul) ಪಡೆಯ ಪ್ರಮುಖ 3 ವಿಕೆಟ್ ಕಿತ್ತರು. ಶಾರುಖ್ ಖಾನ್ (Shahrukh Khan), ನಿಕೋಲಸ್ ಪೂರನ್ ಮತ್ತು ಮಯಾಂಕ್ ಅಗರ್ವಾಲ್ (Mayank Agarwal) ರಂತಹ ಅಪಾಯಕಾರಿ ಬ್ಯಾಟರ್​ಗಳನ್ನು ತಮ್ಮ ಸ್ಪಿನ್ ಮೋಡಿಯಿಂದ ಪೆವಿಲಿನ್​ಗೆ ಅಟ್ಟಿದರು.

ಈ ಮೂಲಕ ಚಹಾಲ್ ಅವರು ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಬೌಲರ್​ಗಳ ಸ್ಥಾನದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡದ ಜಸ್​ಪ್ರೀತ್ ಬುಮ್ರಾ ಜೊತೆ ಜಂಟಿಯಾಗಿದ್ದಾರೆ. ಚಹಾಲ್ ಅವರು ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಒಟ್ಟು 38 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಜಸ್​ಪ್ರೀತ್ ಬುಮ್ರಾ ಕೂಡ 38 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಕಗಿಸೊ ರಬಾಡ (35 ವಿಕೆಟ್) ಅವರಿದ್ದು, ಮೊಹಮ್ಮದ್ ಶಮಿ (33 ವಿಕೆಟ್) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಭಾರತದಲ್ಲಿ ನಡೆದ ಐಪಿಎಲ್ 2021 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಾಲ್ ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸಲಿಲ್ಲ. ಆದರೆ, ಸದ್ಯ ಯುಎಇಯಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ಧಾರೆ. ಆರ್​ಸಿಬಿ ತಂಡದಲ್ಲಿ ಹರ್ಷಲ್ ಪಟೇಲ್ ಬಿಟ್ಟರೆ ಅತಿ ಹೆಚ್ಚು ವಿಕೆಟ್ ಪಡೆದಿರುವುದು ಚಹಾಲ್ ಅವರೇ. ಕಳೆದ ಕೆಲ ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವ ಚಹಲ್ ಅವರು ಪ್ಲೇ ಆಫ್ ಹಂತದಲ್ಲಿ ಆರ್​ಸಿಬಿಯ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.

ಇನ್ನೂ ಈ ಬಾರಿ ಟಿ-20 ವಿಶ್ವಕಪ್​ನಲ್ಲಿ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಅವರ ಹೆಸರು ಇಲ್ಲದಿರುವುದಕ್ಕೆ ಅನೇಕ ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದ್ಭುತ ಸ್ಪಿನ್ನರ್ ಆಗಿರುವ ಚಹಲ್ ಅವರು ಟಿ-20 ವಿಶ್ವಕಪ್ ತಂಡದಲ್ಲಿ ಆಡಬೇಕಿತ್ತು ಎಂಬುದು ಹಲವರ ಬಲವಾದ ಅನಿಸಿಕೆ. ಹೀಗಾಗಿ ಚಹಾಲ್ ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಮತ್ತೆ ಆಯ್ಕೆ ಆಗುವ ಸಾಧ್ಯತೆ ಹೆಚ್ಚಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. ಗ್ಲೆನ್ ಮ್ಯಾಕ್ಸ್​ವೆಲ್ 57 ರನ್ ಬಾರಿಸಿದರೆ, ದೇವದತ್ ಪಡಿಕ್ಕಲ್ 40 ಮತ್ತು ನಾಯಕ ವಿರಾಟ್ ಕೊಹ್ಲಿ 25 ರನ್ ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಸ್ಫೋಟಕ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ಬಳಿಕ ವೈಫಲ್ಯ ಅನುಭವಿಸಿತು. ಮಯಾಂಕ್ ಅಗರ್ವಾಲ್ 57 ರನ್ ಬಾರಿಸಿದರೆ, ಕೆ. ಎಲ್ ರಾಹುಲ್ 39 ರನ್ ಪೇರಿಸಿದರು. ಪಂಜಾಬ್ 20 ಓವರ್​​ನಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲು ಕಂಡಿತು.

Glenn Maxwell: ಆರ್​ಸಿಬಿಯಲ್ಲಿ ಅದ್ಭುತ ಪ್ರದರ್ಶನ: ಕೊನೆಗೂ ಕಾರಣ ಬಿಚ್ಚಿಟ್ಟ ಗ್ಲೆನ್ ಮ್ಯಾಕ್ಸ್​ವೆಲ್​, ಏನಂದ್ರು ಗೊತ್ತಾ?

IPL 2021, DC vs CSK: ಇಂದು ಟೇಬಲ್ ಟಾಪರ್​ಗಳ ರೋಚಕ ಕದನ: ಡೆಲ್ಲಿ vs ಚೆನ್ನೈ ಪಂದ್ಯದಲ್ಲಿ ಯಾರಿಗೆ ಗೆಲುವು?

(Yuzvendra Chahal takes PBKS 3 wickets and Create new record most wickets in IPL matches in the UAE)

ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ