Happy Birthday Rishabh Pant: ರಿಷಭ್ ಪಂತ್ಗೆ ಹುಟ್ಟುಹಬ್ಬದ ಸಂಭ್ರಮ: ಯಂಗ್ ವಿಕೆಟ್ ಕೀಪರ್ನ ಮೂರು ಅಮೋಘ ದಾಖಲೆ ಇಲ್ಲಿದೆ
Rishabh Pant Records: ಇದುವರೆಗೂ 25 ಟೆಸ್ಟ್ ಪಂದ್ಯಗಳನ್ನಾಡಿರುವ ಪಂತ್, 39.71ರ ಸರಾಸರಿಯಲ್ಲಿ 1549 ರನ್ ಬಾರಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ರಿಷಭ್ ಪಂತ್ ಅವರ ಮೂರು ಅತ್ಯುತ್ತಮ ದಾಖಲೆಗಳು ಇಲ್ಲಿದೆ ನೋಡಿ.
ಟೀಮ್ ಇಂಡಿಯಾದ (Team India) ಯುವ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ 24ನೇ ವಸಂತಕ್ಕೆ ಕಾಲಿರಿಸಿದ್ದಾರೆ (Risbah Pant Birthday). ಡೆಲ್ಲಿ ಕ್ರಿಕೆಟಿಗನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ (IPL 2021) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನಾಯಕನಾಗಿರುವ ಪಂತ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ತನ್ನ ತಂಡವನ್ನು ಐಪಿಎಲ್ 2021 ಪ್ಲೇ ಆಫ್ಗೆ ಕೊಂಡೊಯ್ಯಿದಿದ್ದಾರೆ. ಇಂದು ಡೆಲ್ಲಿ ಹಾಗೂ ಸಿಎಸ್ಕೆ (DC vs CSK) ನಡುವೆ ಪಂದ್ಯಕೂಡ ನಡೆಯಲಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ಶತಕ ಸಿಡಿಸುವ ಮೂಲಕ ಭರ್ಜರಿಯಾಗಿಯೇ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದ ಪಂತ್ ಪ್ರಮುಖ ಸದಸ್ಯನಾಗಿ ಹೊರಹೊಮ್ಮಿದ್ದಾರೆ. ಮುಂಬರುವ ಐಸಿಸಿ ಟಿ-20 ವಿಶ್ವಕಪ್ (ICC T20 World Cup) ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ.
ಇದುವರೆಗೂ 25 ಟೆಸ್ಟ್ ಪಂದ್ಯಗಳನ್ನಾಡಿರುವ ಪಂತ್, 39.71ರ ಸರಾಸರಿಯಲ್ಲಿ 1549 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಏಳು ಅರ್ಧಶತಕವೂ ಸೇರಿದೆ. ಇನ್ನು ವಿಕೆಟ್ ಕೀಪಿಂಗ್ನಲ್ಲೂ ಕಮಾಲ್ ಮಾಡಿರುವ ಪಂತ್ 89 ಕ್ಯಾಚ್ ಹಾಗೂ 8 ಸ್ಟಂಪಿಂಗ್ ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರ ಜತೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಗೌರವಕ್ಕೂ ಪಂತ್ ಪಾತ್ರರಾಗಿದ್ದಾರೆ. ಪಂತ್ ಏಕದಿನ ಕ್ರಿಕೆಟ್ನಲ್ಲಿ 18 ಪಂದ್ಯಗಳಿಂದ 529 ರನ್ ಬಾರಿಸಿದ್ದರೆ, ಟಿ20 ಕ್ರಿಕೆಟ್ನಲ್ಲಿ 33 ಪಂದ್ಯಗಳನ್ನಾಡಿ 512 ರನ್ ಗಳಿಸಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ ರಿಷಭ್ ಪಂತ್ ಅವರ ಮೂರು ಅತ್ಯುತ್ತಮ ದಾಖಲೆಗಳನ್ನು ನೋಡುವುದಾದರೆ…
ಅತಿವೇಗವಾಗಿ 1,000 ರನ್ ಬಾರಿಸಿದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಆಗಿದ್ದಾರೆ. 2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಐದನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಅವರು ಧೋನಿಯ ದಾಖಲೆಯನ್ನು ಪುಡಿ ಮಾಡಿ ಈ ಸಾಧನೆ ಗೈದರು. ಕೇವಲ 27 ಇನ್ನಿಂಗ್ಸ್ನಲ್ಲಿ ಪಂತ್ ಈ ದಾಖಲೆ ಮಾಡಿದ್ದಾರೆ. ಧೋನಿ 1000 ರನ್ ಪೂರೈಸಲು 32 ಟೆಸ್ಟ್ ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಇನ್ನೂ ಸಿಕ್ಸ್ ಸಿಡಿಸುವ ಮೂಲಕ ತನ್ನ ಟೆಸ್ಟ್ ಕ್ರಿಕೆಟ್ ಕೆರೆಯರ್ ಅನ್ನು ಪ್ರಾರಂಭಿಸಿದ ಮೊದಲ ಭಾರತೀಯ ಬ್ಯಾಟರ್ ರಿಷಭ್ ಪಂತ್ ಆಗಿದ್ದಾರೆ. 2018 ರಲ್ಲಿ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಪಂತ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ಬೌಲಿಂಗ್ನಲ್ಲಿ ಪಂತ್ ತಾನು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸ್ಗೆ ಅಟ್ಟಿದ್ದರು.
ಒಂದು ಪಂದ್ಯದಲ್ಲಿ ವಿಕೆಟ್ ಹಿಂಭಾಗ ನಿಂತು ಅತಿ ಹೆಚ್ಚು ಆಟಗಾರರನ್ನು ಔಟ್ ಮಾಡಿದ ವಿಕೆಟ್ ಕೀಪರ್ಗಳ ಪೈಕಿ ಪಂತ್ ಮೂರನೇಯವರಾಗಿದ್ದಾರೆ. 2018ರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಪಂತ್ 11 ಆಟಗಾರರನ್ನು ವಿಕೆಟ್ ಕೀಪರ್ ಆಗಿ ಔಟ್ ಮಾಡಿದ್ದರು.
Yuzvendra Chahal: ಐಪಿಎಲ್ನಲ್ಲಿ ಹೊಸ ದಾಖಲೆ ಬರೆದ ಯುಜ್ವೇಂದ್ರ ಚಹಾಲ್: ಟಿ-20 ವಿಶ್ವಕಪ್ಗೆ ಆಯ್ಕೆ ಪಕ್ಕಾ
Virat Kohli: ಪ್ಲೇ ಆಫ್ಗೆ ಲಗ್ಗೆಯಿಟ್ಟ ಖುಷಿಯಲ್ಲಿ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು ನೋಡಿ
(Rishabh Pant Birthday Rishabh Pant turned 24 on October 4 A look at 3 incredible records)