12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ರೋಚಕತೆ ಪಡೆಯುತ್ತಿದೆ. ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದ ಸ್ಟಾರ್ ವಿದೇಶಿ ಆಟಗಾರರು ಒಬ್ಬೊಬ್ಬರಾಗಿ ಭಾರತಕ್ಕೆ ಆಗಮನಿಸುತ್ತಿದ್ದಾರೆ. ಇದರ ನಡುವೆ ಇಂದು ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ (RR vs RCB) ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಫಾಫ್ ಡುಪ್ಲೆಸಿಸ್ ಪಡೆ ಈ ಬಾರಿ ಸೋಲೇ ಕಂಡಿರದ ಸಂಜು ಸ್ಯಾಮ್ಸನ್ ಪಡೆಯನ್ನು ಎದುರಿಸಲಿದೆ. ಆರ್‌ಸಿಬಿ ತಂಡದ ಮಾಜಿ ಸ್ಟಾರ್ ಪ್ಲೇಯರ್ ಯುಜ್ವೇಂದ್ರ ಚಹಲ್ ಮತ್ತು ದೇವದತ್ ಪಡಿಕ್ಕಲ್ ಆರ್ಆರ್ ತಂಡದಲ್ಲಿದ್ದು ಇವರ ಬ್ಯಾಟಲ್ ಕುತೂಹಲ ಕೆರಳಿಸಿದೆ. ಅಲ್ಲದೆ ಆರ್ಆರ್ ತಂಡ ಬಲಿಷ್ಠವಾಗಿದ್ದರೂ ಆರ್ಸಿಬಿಯೇ ಈ ಮ್ಯಾಚ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಬೆಂಗಳೂರು ತಂಡದ ಬ್ಯಾಟಿಂಗ್ ಶಕ್ತಿ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಆರ್‌ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ.
ಹೌದು, ಮದುವೆ ನಂತರ ಗ್ಲೆನ್ ಮ್ಯಾಕ್ಸ್ವೆಲ್ ಭಾರತಕ್ಕೆ ವಾಪಸ್ಸಾಗಿದ್ದಾರೆ. ಈಗಾಗಲೇ ಮುಂಬೈಗೆ ಬಂದಿಳಿದು ಕೋವಿಡ್ ಪ್ರೋಟೋಕಾಲ್ ಪ್ರಕಾರ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಅಲ್ಲದೆ ಮೈದಾನದಲ್ಲಿ ಭರ್ಜರಿ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಆದರೆ, ಮ್ಯಾಕ್ಸಿ ಇಂದಿನ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರ ಎಂಬ ವಿಚಾರವನ್ನು ಆರ್‌ಸಿಬಿ ಸಸ್ಪೆನ್ಸ್ ಆಗಿ ಇಟ್ಟಿದೆ. ಕ್ರಿಕೆಟ್ ಆಸ್ಟ್ರೇಲಿಯಾ ನಿಯಮದ ಪ್ರಕಾರ ಆಸ್ಟ್ರೇಲಿಯಾ ಆಟಗಾರರು ಏಪ್ರಿಲ್ 5ರ ವರೆಗೆ ಐಪಿಎಲ್ನಲ್ಲಿ ಆಡಲು ಅವಕಾಶ ಕಲ್ಪಿಸಿಲ್ಲ. ಸದ್ಯ ಕಾಂಗರೂ ಪಡೆ ಪಾಕಿಸ್ತಾನ ಪ್ರವಾಸದಲ್ಲಿರುವ ಕಾರಣ ಈ ನಿಯಮ ಜಾರಿಗೆ ತರಲಾಗಿದೆ.
ಗ್ಲೆನ್ ಮ್ಯಾಕ್ಸ್ವೆಲ್ ಪಾಕಿಸ್ತಾನ ಪ್ರವಾಸದಲ್ಲಿ ಇಲ್ಲದಿದ್ದರೂ ಅವರಿಗೂ ಈ ನಿಯಮ ಅನ್ವಯ ಆಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಇವರು ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನ. ಆದರೂ ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿದರೆ ಮ್ಯಾಕ್ಸ್ವೆಲ್ ಆರ್ಆರ್ ವಿರುದ್ಧ ಕಣಕ್ಕಿಳಿಯಬಹುದು. ಇದಕ್ಕೆಲ್ಲ ಟಾಸ್ ವೇಳೆ ತೆರೆ ಬೀಳಲಿದೆ. ಹಾಗೆಯೇ ಕಾಂಗರೂ ನಾಡಿನ ವೇಗಿ ಜೋಶ್ ಹ್ಯಾಝಲ್‌ವುಡ್ ಕೂಡ ತಂಡವನ್ನು ಸೇರಿಕೊಂಡಿಲ್ಲ. ಇವರಿಬ್ಬರ ಆಗಮನವಾದರೆ ಅದು ಎದುರಾಳಿಗಳ ಪಾಲಿಗೆ ಖಂಡಿತ ಎಚ್ಚರಿಕೆಯ ಗಂಟೆ ಆಗಲಿದೆ.
ಆರ್ಆರ್ ಹಾಗೂ ಆರ್‌ಸಿಬಿ ನಡುವಣ ಕಾಳಗ ಸಾಕಷ್ಟು ಕುತೂಹಲ ಕೆರಳಿಸಿದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಶಾಕ್ ನೀಡುತ್ತಾ ಎಂಬುದೇ ಕುತೂಹಲ. ಆರ್ ಆರ್ ವಿರುದ್ಧ ಈವರೆಗೆ ಆರ್ಸಿಬಿಯೇ ಮೇಲಗೈ ಸಾಧಿಸಿದೆ. ಉಭಯ ತಂಡಗಳು ಈವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ 12 ಪಂದ್ಯಗಳಲ್ಲಿ ಗೆಲುವನ್ನ ಸಾಧಿಸಿದರೆ, ರಾಜಸ್ಥಾನ್ 10 ಪಂದ್ಯಗಳಲ್ಲಿ ಗೆದ್ದಿದೆ. 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಶ್ರೀಲಂಕಾದ ವನಿಂದು ಹಸರಂಗ ಕೆಕೆಆರ್ ಎದುರು ಮಿಂಚಿ ಭರವಸೆ ಮೂಡಿಸಿದ್ದಾರೆ. ಸ್ಲಾಗ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ನಾಯಕ ಡುಪ್ಲೆಸಿಸ್ ಹಾಗೂ ಅನುಜ್ ರಾವತ್ ಉತ್ತಮ ಆರಂಭ ಒದಗಿಸಿದರೆ ತಂಡ ದೊಡ್ಡ ಮೊತ್ತ ಕಲೆಹಾಕುವುದ ಖಚಿತ.
ಇತ್ತ ರಾಜಸ್ಥಾನ್ ತಂಡದ ಬ್ಯಾಟರ್ಗಳನ್ನೆ ಕಟ್ಟಿ ಹಾಕಬೇಕಾದ ಪ್ಲಾನ್ ಆರ್‌ಸಿಬಿ ಮಾಡಬೇಕಿದೆ. ಆರ್ಆರ್ ತಂಡದ ಹಾರ್ಡ್ ಹಿಟ್ಟಿಂಗ್ ಬ್ಯಾಟಿಂಗ್ ಯೂನಿಟ್ ಅತ್ಯಂತ ಅಪಾಯಕಾರಿಯಾಗಿದೆ. ಬಟ್ಲರ್, ಜೈಸ್ವಾಲ್, ಪಡಿಕ್ಕಲ್, ಸ್ಯಾಮ್ಸನ್, ಹೆಟ್‌ಮೈರ್ ಇವರಲ್ಲಿ ಒಬ್ಬರು ಸಿಡಿದು ನಿಂತರೂ ಯಾವುದೇ ಪಿಚ್ ಮೇಲೂ ಬೃಹತ್ ಮೊತ್ತಕ್ಕೆ ಕೊರತೆ ಎದುರಾಗದು.
RR vs RCB, IPL 2022: ರಾಜಸ್ಥಾನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ ಆರ್‌ಸಿಬಿ: ಏನದು?
SRH vs LSG, IPL 2022: ಹೈದರಾಬಾದ್ಗೆ ಎರಡನೇ ಸೋಲು: ರಾಹುಲ್ ಬಳಗಕ್ಕೆ ಎರಡನೇ ಗೆಲುವು