Global T20 Canada 2023: ಇಂದಿನಿಂದ ಗ್ಲೋಬಲ್ ಟಿ20 ಟೂರ್ನಿ ಆರಂಭ: ಇಲ್ಲಿದೆ ವೇಳಾಪಟ್ಟಿ

| Updated By: ಝಾಹಿರ್ ಯೂಸುಫ್

Updated on: Jul 20, 2023 | 3:33 PM

Global T20 Canada 2023: ಈ ಟೂರ್ನಿಯ ಪ್ಲೇಯಿಂಗ್ 11 ನಲ್ಲಿ ಪೂರ್ಣ ಸದಸ್ಯ ರಾಷ್ಟ್ರಗಳ ಐದು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

Global T20 Canada 2023: ಇಂದಿನಿಂದ ಗ್ಲೋಬಲ್ ಟಿ20 ಟೂರ್ನಿ ಆರಂಭ: ಇಲ್ಲಿದೆ ವೇಳಾಪಟ್ಟಿ
Global T20 Canada 2023
Follow us on

Global T20 Canada 2023: ಗ್ಲೋಬಲ್ T20 ಕೆನಡಾ 2023 ರ ಸೀಸನ್​ ಜುಲೈ 20 ರಿಂದ ಆಗಸ್ಟ್ 6 ರವರೆಗೆ ಬ್ರಾಂಪ್ಟನ್‌ನಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಕಣಕ್ಕಿಳಿಯಲಿದೆ. ಪ್ರತಿ ತಂಡಗಳು ಲೀಗ್ ಹಂತದಲ್ಲಿ ಏಳು ಪಂದ್ಯಗಳನ್ನು ಆಡಲಿದ್ದು, ನಂತರ ಪಾಯಿಂಟ್ ಟೇಬಲ್​ನಲ್ಲಿ ಅಗ್ರ ನಾಲ್ಕು ಸ್ಥಾನ ಅಲಂಕರಿಸುವ ತಂಡಗಳು ಪ್ಲೇ ಆಫ್ಸ್​ನಲ್ಲಿ ಮುಖಾಮುಖಿಯಾಗಲಿದೆ.

ಇನ್ನು ಈ ಟೂರ್ನಿಯ ಪ್ಲೇಯಿಂಗ್ 11 ನಲ್ಲಿ ಪೂರ್ಣ ಸದಸ್ಯ ರಾಷ್ಟ್ರಗಳ ಐದು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹಾಗೆಯೇ ಆಡುವ ಬಳಗದಲ್ಲಿ ಕನಿಷ್ಠ ಮೂರು ದೇಶೀಯ ಆಟಗಾರರನ್ನು ಕಣಕ್ಕಿಳಿಸುವುದು ಕಡ್ಡಾಯ. ಇನ್ನುಳಿದ ಸ್ಥಾನಗಳಲ್ಲಿ ಅಸೋಸಿಯೇಟ್ ದೇಶಗಳ ಆಟಗಾರರನ್ನು ಕಣಕ್ಕಿಳಿಸಬಹುದು.

ಈ ಟೂರ್ನಿಯಲ್ಲಿ ಕಣಕ್ಕಿಳಿಯುವ 6 ತಂಡಗಳು ಈ ಕೆಳಗಿನಂತಿವೆ:

ಸರ್ರೆ ಜಾಗ್ವಾರ್ಸ್ ತಂಡ: ಅಲೆಕ್ಸ್ ಹೇಲ್ಸ್ , ಇಫ್ತಿಕರ್ ಅಹ್ಮದ್, ನಾಥನ್ ಕೌಲ್ಟರ್-ನೈಲ್, ಲಿಟ್ಟನ್ ದಾಸ್, ಬೆನ್ ಕಟಿಂಗ್, ಮೊಹಮ್ಮದ್ ಹ್ಯಾರಿಸ್, ಸಂದೀಪ್ ಲಾಮಿಚಾನೆ, ಅಯಾನ್ ಖಾನ್ , ಜತೀಂದರ್ ಸಿಂಗ್, ಬರ್ನಾರ್ಡ್ ಸ್ಕೋಲ್ಟ್ಜ್, ಪರಗತ್ ಸಿಂಗ್, ದಿಲೋನ್ ಹೇಲಿಗರ್, ಅಮ್ಮರ್ ಖಾಲಿದ್, ಸನ್ನಿ ಮಾಥಾರು, ಶೀಲ್ ಪಟೇಲ್, ಕೈರವ್ ಶರ್ಮಾ.

ಮಿಸ್ಸಿಸೌಗಾ ಪ್ಯಾಂಥರ್ಸ್ ತಂಡ: ಶೋಯೆಬ್ ಮಲಿಕ್ , ಕ್ರಿಸ್ ಗೇಲ್, ಆಝಂ ಖಾನ್, ಜೇಮ್ಸ್ ನೀಶಮ್, ಕ್ಯಾಮೆರಾನ್ ಡೆಲ್ಪೋರ್ಟ್, ಶಹನವಾಜ್ ದಹಾನಿ , ಟಾಮ್ ಕೂಪರ್, ಸೆಸಿಲ್ ಪರ್ವೇಜ್, ಜಸ್ಕರದೀಪ್ ಸಿಂಗ್ ಬಟ್ಟಾರ್, ನವನೀತ್ ಧಲಿವಾಲ್, ನಿಖಿಲ್ ದತ್ತಾ, ಶ್ರೇಯಸ್ ಮೊವ್ವಾ, ಪರ್ವೀನ್ ಕುಮಾರ್, ಮಿಹಿರ್ ಪಟೇಲ್, ಎಥಾನ್ ಗಿಬ್ಸನ್.

ಬ್ರಾಂಪ್ಟನ್ ವುಲ್ಝ್ ತಂಡ: ಹರ್ಭಜನ್ ಸಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಟಿಮ್ ಸೌಥಿ, ಮಾರ್ಕ್ ಚಾಪ್‌ಮನ್, ಉಸಾಮಾ ಮಿರ್, ಹುಸೇನ್ ತಲತ್, ಉಸ್ಮಾನ್ ಖಾನ್, ಲೋಗನ್ ವ್ಯಾನ್ ಬೀಕ್ , ಜಾನ್ ಫ್ರಿಲಿಂಕ್, ಮ್ಯಾಕ್ಸ್ ಒ’ಡೌಡ್ , ಜೆರೆಮಿ ಗಾರ್ಡನ್, ಆರೋನ್ ಜಾನ್ಸನ್, ರಿಜ್ವಾನ್ ಚೀಮಾ, ಶಾಹಿದ್ ಅಹಮದ್‌ಜಾಯ್, ರಿಷಿವ್ ಜೋಶಿ, ಗುರ್ಪಾಲ್ ಸಿಂಗ್ ಸಂಧು.

ಮಾಂಟ್ರಿಯಲ್ ಟೈಗರ್ಸ್ ತಂಡ: ಶಾಕಿಬ್ ಅಲ್ ಹಸನ್, ಆ್ಯಂಡ್ರೆ ರಸೆಲ್, ಕ್ರಿಸ್ ಲಿನ್, ಶ್ರೆಫಾನ್ ರುದರ್‌ಫೋರ್ಡ್, ಕಾರ್ಲೋಸ್ ಬ್ರಾಥ್‌ವೈಟ್, ಅಬ್ಬಾಸ್ ಅಫ್ರಿದಿ, ಜಹೀರ್ ಖಾನ್, ಮುಹಮ್ಮದ್ ವಸೀಮ್, ಅಕಿಫ್ ರಾಜಾ, ಅಯಾನ್ ಖಾನ್, ದೀಪೇಂದ್ರ ಐರಿ, ಕಲೀಂ ಸನಾ, ಶ್ರೀಮಂತ ವಿಜೇರತ್ನೆ, ಮ್ಯಾಥ್ಯೂ ಸ್ಪೂರ್ಸ್, ಬಿಜ್ಪೇಂದ್ರ ಸಿಂಗ್, ದಿಲ್ಪ್ರೀತ್ ಸಿಂಗ್, ಅನೂಪ್ ಚೀಮಾ.

ಟೊರೊಂಟೊ ನ್ಯಾಷನಲ್ಸ್ ತಂಡ: ಕಾಲಿನ್ ಮುನ್ರೊ, ಶಾಹಿದ್ ಅಫ್ರಿದಿ , ಫಜಲ್ಹಕ್ ಫಾರೂಕಿ, ಜಮಾನ್ ಖಾನ್, ಸೈಮ್ ಅಯೂಬ್, ಅಬ್ದುಲ್ಲಾ ಶಫೀಕ್ , ಗೆರ್ಹಾರ್ಡ್ ಎರಾಸ್ಮಸ್, ಜೆಜೆ ಸ್ಮಿತ್, ಫರ್ಹಾನ್ ಮಲಿಕ್, ಸಾದ್ ಬಿನ್ ಜಾಫರ್, ನಿಕೋಲಸ್ ಕಿರ್ಟನ್, ಅರ್ಮಾನ್ ಕಪೂರ್, ಸರ್ಮದ್ ಅನ್ವರ್, ರೊಮೆಲ್ ಶಹಝಾದ್, ಉದಯ ಭಗವಾನ್, ಹಂಝ ತಾರಿಕ್.

ಇದನ್ನೂ ಓದಿ: Virat Kohli: ವಿಶ್ವ ದಾಖಲೆಯೊಂದಿಗೆ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ

ವ್ಯಾಂಕೋವರ್ ನೈಟ್ಸ್ ತಂಡ: ಮೊಹಮ್ಮದ್ ರಿಜ್ವಾನ್, ವೃತ್ಯ ಅರವಿಂದ್ , ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ನವೀನ್-ಉಲ್-ಹಕ್, ರೀಜಾ ಹೆಂಡ್ರಿಕ್ಸ್, ಕಾರ್ಬಿನ್ ಬಾಷ್, ನಜಿಬುಲ್ಲಾ ಝದ್ರಾನ್, ಕಾರ್ತಿಕ್ ಮೆಯ್ಯಪ್ಪನ್, ರೂಬೆನ್ ಟ್ರಂಪೆಲ್ಮನ್, ಜುನೈದ್ ಸಿದ್ದಿಕ್, ರವೀಂದರ್ಪಾಲ್ ಸಿಂಗ್, ಹರ್ಷ್ ಥಾಕರ್, ರಯ್ಯಾನ್ ಪಠಾಣ್, ನವಾಬ್ ಸಿಂಗ್, ಮುಹಮ್ಮದ್ ಕಮಲ್, ಕನ್ವರ್ ತಥ್​ಗರ್.

ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

 

 

Published On - 3:32 pm, Thu, 20 July 23